ಅಂಬಿಗರ ಚೌಡಯ್ಯ ಪ್ರತಿಮೆ ಭಗ್ನ: ಕೋಲಿ ಸಮಾಜದಿಂದ ಉಗ್ರ ಪ್ರತಿಭಟನೆ

ಶಹಾಬಾದ್ ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಭಗ್ನಗೊಳಿಸಿರುವ ಘಟನೆ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿರುವುದು ವರದಿಯಾಗಿದೆ. ಚೌಡಯ್ಯನವರ ಮೂರ್ತಿಯ ಎಡಗೈಯನ್ನು ಮುರಿದುಹಾಕಿದ್ದು, ಬಲಗೈ ಬೆರಳು ವಿರೂಪಗೊಳಿಸಿದ್ದಾರೆ. ಅಲ್ಲದೆ, ಮುಖಕ್ಕೆ ಸೆಗಣಿ ಎಸೆದು ಕಿಡಿಗೇಡಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ‘ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಇದೇ ವರ್ಷ ಸ್ಥಾಪನೆಯಾಗಿತ್ತು. ಕೆಲವು ಸಮಾಜಘಾತಕ ವ್ಯಕ್ತಿಗಳು ಚೌಡಯ್ಯನವರ ಮೂರ್ತಿಯನ್ನು ಭಗ್ನಗೊಳಿಸಿದ್ದಾರೆ. ಇದು ಕೋಲಿ-ಕಬ್ಬಲಿಗ ಸಮಾಜದ ಮೇಲೆ ನಡೆದ ನೇರವಾದ ಭಾವನಾತ್ಮಕ ದಾಳಿಯಾಗಿದೆ, ಎಂದು … Continue reading ಅಂಬಿಗರ ಚೌಡಯ್ಯ ಪ್ರತಿಮೆ ಭಗ್ನ: ಕೋಲಿ ಸಮಾಜದಿಂದ ಉಗ್ರ ಪ್ರತಿಭಟನೆ