ಷಟ್‌ಸ್ಥಲಗಳು ವಚನಕಾರರ ಅನುಭಾವದ ಸಾರ : ಡಾ. ಬಸವರಾಜ ಹಡಪದ

ಬಸವನಬಾಗೇವಾಡಿ ಭಾರತೀಯ ಪರಂಪರೆಯಲ್ಲಿ ಬಸವಾದಿ ಶರಣರು ವಿಶಿಷ್ಠ ದರ್ಶನವನ್ನು ನೀಡಿದ್ದಾರೆ. ಷಟ್ ಸ್ಥಲಗಳು 12 ನೇ ಶತಮಾನದ ವಚನಕಾರರ ಅನುಭಾವದ ಸಾರವಾಗಿದ್ದು, ಜೀವನದ ಆಧ್ಯಾತ್ಮಿಕ ಸಾಧನೆಗೆ ಮಾರ್ಗದರ್ಶಿಯಾಗಿವೆ ಎಂದು ಮುದ್ದೇಬಿಹಾಳ ಎಂ.ಜಿ.ವಿ.ಸಿ. ಮಹಾವಿದ್ಯಾಲಯದ ಅಧ್ಯಾಪಕ ಡಾ. ಬಸವರಾಜ ಹಡಪದ ಹೇಳಿದರು. ಪಟ್ಟಣದ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನದ ಆವರಣದಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರವು ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ರಾಷ್ಟ್ರೀಯ ಬಸವೇಶ್ವರ ಜಯಂತ್ಯುತ್ಸವದ ಮೊದಲ ದಿನ ಶನಿವಾರ ಜರುಗಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಕ್ತಸ್ಥಲ, ಮಹೇಶಸ್ಥಲ ಕುರಿತು ಉಪನ್ಯಾಸ ನೀಡಿದರು. … Continue reading ಷಟ್‌ಸ್ಥಲಗಳು ವಚನಕಾರರ ಅನುಭಾವದ ಸಾರ : ಡಾ. ಬಸವರಾಜ ಹಡಪದ