ಲಿಂಗಾಯತ ಅಸ್ಮಿತೆ ಸಭೆ: ಒಕ್ಕೂಟದ ಕಾರ್ಯದರ್ಶಿಗಳಿಗೆ ತಲುಪಿದ ಮನವಿ ಪತ್ರ

ಹುಬ್ಬಳ್ಳಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಕಾರ್ಯದರ್ಶಿ ಹಂದಿಗುಂದ ವಿರಕ್ತಮಠದ ಪೂಜ್ಯ ಶಿವಾನಂದ ಮಹಾಸ್ವಾಮಿಗಳನ್ನು ಹುಬ್ಬಳ್ಳಿಯ ಬಸವ ಸಂಘಟನೆಗಳ ಸದಸ್ಯರು ಗುರುವಾರ ಭೇಟಿ ಮಾಡಿ ಮನವಿ ಪತ್ರ ನೀಡಿದರು. ಶುಕ್ರವಾರ ಧಾರವಾಡದಲ್ಲಿ ನಡೆಯಲಿರುವ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸಭೆಯಲ್ಲಿ ಭಾಗವಹಿಸಲು ಶ್ರೀಗಳು ಹಂದಿಗೊಂದದಿಂದ ಬುಧವಾರ ರಾತ್ರಿ ಹುಬ್ಬಳ್ಳಿಗೆ ಆಗಮಿಸಿ ಇಲ್ಲಿನ ಮೂರು ಸಾವಿರ ಮಠದಲ್ಲಿ ಉಳಿದುಕೊಂಡಿದ್ದರು. ಇಂದು ಪೂಜ್ಯರನ್ನು ನೀಲಾಂಬಿಕೆ ಬಳಗ, ಗಂಗಾಂಬಿಕೆ ಬಳಗ ಮತ್ತು ಬಸವ ಬಳಗದ 20 ಸದಸ್ಯರು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. … Continue reading ಲಿಂಗಾಯತ ಅಸ್ಮಿತೆ ಸಭೆ: ಒಕ್ಕೂಟದ ಕಾರ್ಯದರ್ಶಿಗಳಿಗೆ ತಲುಪಿದ ಮನವಿ ಪತ್ರ