ದೆಹಲಿ, ಲಂಡನ್ ಸಂಸತ್ ಬಳಿ ಬಸವ ಜಯಂತಿಯ ಸಂಭ್ರಮ

ನವದೆಹಲಿ/ಲಂಡನ್ 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಪ್ರಜಾಪ್ರಭುತ್ವಕ್ಕೆ ಮುನ್ನುಡಿ ಬರೆದ ವಿಶ್ವಗುರು ಬಸವಣ್ಣನವರ ಜನ್ಮದಿನವನ್ನು ಭಾರತ ಮತ್ತು ಬ್ರಿಟನ್ ಸಂಸತ್ ಭವನದ ಬಳಿ ಸೋಮವಾರ ಆಚರಿಸಲಾಯಿತು. ನವದೆಹಲಿ ಸಂಸತ್ ಭವನದ ಆವರಣದಲ್ಲಿರುವ ಪ್ರೇರಣಾ ಸ್ಥಳದಲ್ಲಿ ಜಗಜ್ಯೋತಿ ಬಸವೇಶ್ವರರ ಪ್ರತಿಮೆಗೆ ಕೇಂದ್ರ ಸಚಿವರಾದ ಎಚ್. ಡಿ. ಕುಮಾರಸ್ವಾಮಿ, ಕಿರಣ್ ರಿಜಿಜು ಹಾಗೂ ವಿ.ಸೋಮಣ್ಣ ಪುಷ್ಪನಮನ ಸಲ್ಲಿಸಿದರು. ಜಗಜ್ಯೋತಿ ಬಸವಣ್ಣನವರ ಸಂದೇಶಗಳು ಇಂದಿಗೂ ಎಂದಿಗೂ ಎಂದೆಂದಿಗೂ ನಮಗೆಲ್ಲರಿಗೂ ಅನುಕರಣೆಯ ಮತ್ತು ಪ್ರೇರಣದಾಯಕ ಆಗಿವೆ, ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು. … Continue reading ದೆಹಲಿ, ಲಂಡನ್ ಸಂಸತ್ ಬಳಿ ಬಸವ ಜಯಂತಿಯ ಸಂಭ್ರಮ