‘ಮೌಡ್ಯತೆಯಿಂದ ಹುತ್ತಕ್ಕೆ ಹಾಕುವ ಹಾಲನ್ನು ಬಡ ಮಕ್ಕಳಿಗೆ ಉಣಿಸಿ’

ರಾಯಚೂರು: ನಗರದ ಬಸವ ಕೇಂದ್ರದಲ್ಲಿ ಮಕ್ಕಳಿಗೆ ಹಾಲುಣಿಸುವ ಮೂಲಕ ನಾಗರ ಪಂಚಮಿಯನ್ನು ವೈಚಾರಿಕ ಹಿನ್ನೆಲೆಯಲ್ಲಿ ಬಸವ ಪಂಚಮಿಯನ್ನಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪಾರ್ವತಿ ಪಾಟೀಲ ಮಾತನಾಡಿ, ಈ ದಿನ ವಿಶ್ವಗುರು ಬಯಲಿನಲ್ಲಿ ಲೀನವಾಗಿದ್ದರಿಂದಲೇ ಬಸವ ಪಂಚಮಿಯನ್ನು ಆಚರಿಸಲಾಗುತ್ತಿದೆ. ಹಾವು ಮಾಂಸಾಹಾರಿ ಪ್ರಾಣಿ. ಯಾವುದೇ ಕಾರಣಕ್ಕು ಅದು ಹಾಲನ್ನು ಕುಡಿಯುವುದಿಲ್ಲ. ಜನರು ಮೌಡ್ಯತೆಯಿಂದ ಹುತ್ತಕ್ಕೆ ಹಾಲನ್ನು ಹಾಕಿ ವ್ಯರ್ಥ ಮಾಡುವುದನ್ನು ಬಿಟ್ಟು, ಬಡ, ನಿರ್ಗತಿಕ ಮಕ್ಕಳಿಗೆ ಹಾಲನ್ನು ಉಣಿಸುವುದು ಸಾರ್ಥಕವಾಗುತ್ತದೆ. ಇದರಿಂದ ಸಮಾಜದಲ್ಲಿ ಸರ್ವಸಮಾನತೆ ಮೂಡಿ ಬರಲು ದಾರಿಯಾಗುವುದೆಂದರು. … Continue reading ‘ಮೌಡ್ಯತೆಯಿಂದ ಹುತ್ತಕ್ಕೆ ಹಾಕುವ ಹಾಲನ್ನು ಬಡ ಮಕ್ಕಳಿಗೆ ಉಣಿಸಿ’