‘ಬಸವ ಚಳುವಳಿ ಮನೆಯೊಳಗಿಂದಲೇ ಶುರುವಾಯಿತು’

ಕಲಬುರಗಿ ನಗರದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನದ ಎರಡನೇ ದಿನದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬಂದಿದ್ದ ಶರಣಬಸವ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಸಾರಿಕಾದೇವಿ ಕಾಳಗಿ ಮಾತನಾಡಿದರು. “ಬಸವಣ್ಣನವರ ಚಳುವಳಿ ಮನೆಯೊಳಗಿಂದಲೇ ಆರಂಭವಾಯಿತು. ಅವರು ಮೊದಲು ತಮ್ಮ ವ್ಯಕ್ತಿತ್ವವನ್ನು ಶುದ್ಧ ನಡೆ-ನುಡಿಯಿಂದ ಶ್ರೇಷ್ಠಗೊಳಿಸಿಕೊಂಡು, ಸಮಾಜದಲ್ಲಿ ಸತ್ಯ, ಧರ್ಮ, ಸಮಾನತೆ, ಜ್ಞಾನವಂತಿಕೆಯ ಬೆಳಕನ್ನು ಹರಡಿದರು,” ಎಂದು ಹೇಳಿದರು. ವಚನಗಳ ಉಲ್ಲೇಖಗಳೊಂದಿಗೆ ಮಾತನಾಡಿದ ಅವರು, ಇಂದು ಸಮಾಜದಲ್ಲಿ ಇನ್ನೂ ಅಂಧನಂಬಿಕೆ ಹಾಗೂ ಮೂಢತೆ ಜನತೆಯೊಳಗಿರೋದು ವಿಷಾದಕರ ವಿಷಯವೆಂದರು. ಅಂದಿನ ಅನುಭವ ಮಂಟಪ … Continue reading ‘ಬಸವ ಚಳುವಳಿ ಮನೆಯೊಳಗಿಂದಲೇ ಶುರುವಾಯಿತು’