ಸರ್ವೋದಯ ಪಾದಯಾತ್ರೆಯ ಹಳ್ಳಿಗಳಲ್ಲಿ ಹಬ್ಬದ ಸಂಭ್ರಮ

ಅಜ್ಜಂಪುರ ಸಾಣೇಹಳ್ಳಿಯಿಂದ ಪೂಜ್ಯ ಪಂಡಿತಾರಾಧ್ಯ ಶ್ರೀಗಳ ನೇತೃತ್ವದಲ್ಲಿ ಹೊರಟಿರುವ ಸರ್ವೋದಯ ಪಾದಯಾತ್ರೆ ಅಜ್ಜಂಪುರದ ಬಳಿಯ ಗೌರಾಪುರಕ್ಕೆ ಬಂದು ಮುಟ್ಟಿದೆ. ದಾರಿಯುದ್ದಕ್ಕೂ ಸಿಗುವ ಹಳ್ಳಿಗಳಲ್ಲಿ ಹಬ್ಬದ ವಾತವರಣವಿದೆ. ಊರಿನವರೆಲ್ಲಾ ಒಂದು ಕಡೆ ಸೇರಿ ಪಾದಯಾತ್ರಿಗಳಿಗೆ ಸ್ವಾಗತ ನೀಡಿದರೆ, ಹಲವಾರು ಮನೆಗಳ ಮುಂದೆ ಹೂವು, ಹಣ್ಣು ಹಿಡಿದುಕೊಂಡು ಭಕ್ತರು ಶ್ರೀಗಳಿಗೆ ಕಾಯುತ್ತಿದ್ದಾರೆ.