ಗೌಡ್ರನ್ನ ಅಪಾರ್ಥ ಮಾಡಿಕೊಳ್ಳಬೇಡಿ, ಯತ್ನಾಳ್ ಪರ ನಿಂತ ಜಯ ಮೃತ್ಯುಂಜಯ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಬನಹಟ್ಟಿ

ವಿಶ್ವಗುರು ಬಸವಣ್ಣನವರ ಮೇಲೆ ವಿವಾದಿತ ಹೇಳಿಕೆ ನೀಡಿ ಬಸವ ಅನುಯಾಯಿಗಳ ಆಕ್ರೋಶಕ್ಕೆ ಗುರಿಯಾಗಿರುವ ಬಸವನಗೌಡ ಯತ್ನಾಳರ ಪರವಾಗಿ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದ್ದಾರೆ.

“ಗೌಡ್ರಗೆ ಬಸವಣ್ಣನವರ ಮೇಲೆ ಭಕ್ತಿಯಿದೆ, ಎಲ್ಲಾ ದಾರ್ಶನಿಕರ ಮೇಲೂ ಭಕ್ತಿಯಿದೆ. ಆದ್ದರಿಂದ ಬಸವ ಭಕ್ತರು ಯಾರೂ ಅಪಾರ್ಥ ಮಾಡಿಕೊಳ್ಳಬಾರದು,” ಎಂದು ಶನಿವಾರ ಯತ್ನಾಳರನ್ನು ಸಮರ್ಥಿಸಿಕೊಂಡರು.

“…ಉದ್ದೇಶ, ಭಾವನೆ ಬೇರೆ ಇರತ್ತೆ, ದಯವಿಟ್ಟು ತಪ್ಪಾಗಿ ಅರ್ಥೈಸಿಕೊಳ್ಳುವ ಪ್ರಯತ್ನ ಯಾರೂ ಮಾಡಬೇಡಿ,” ಎಂದು ಹೇಳಿದರು.

ಪಟ್ಟಣದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದ ಅಂಗವಾಗಿ ನಡೆದ ಸಭೆಯಲ್ಲಿ ಶ್ರೀಗಳು ಯತ್ನಾಳರ ಜೊತೆ ವೇದಿಕೆ ಹಂಚಿಕೊಂಡಿದ್ದರು. ನಂತರ ಪತ್ರಕರ್ತರೊಡನೆ ಮಾತನಾಡುವಾಗ ವಿವಾದವನ್ನು ವಿವರವಾಗಿ ಚರ್ಚಿಸಲು ಇಷ್ಟಪಡದೆ ‘ದಯವಿಟ್ಟು ಅಪಾರ್ಥ ಮಾಡಿಕೊಳ್ಳಬೇಡಿ ಎಂದು ಈ ಮೂಲಕ ಹೇಳಲು ಇಚ್ಛೆಪಡುತ್ತೇನೆ’ ಎಂದು ಚುಟುಕಾಗಿ ಹೇಳಿ ಮುಗಿಸಿದರು.

ಶ್ರೀಗಳ ಪ್ರತಿಕ್ರಿಯೆಯ ಸ್ವಲ್ಪ ಮುಂಚೆಯೇ ಬನಹಟ್ಟಿಯ ಸುದ್ದಿಘೋಷ್ಠಿಯಲ್ಲಿ ಯತ್ನಾಳ್ ತಮ್ಮ ವಿವಾದಿತ ಹೇಳಿಕೆಗೆ ವಿಷಾದ ಅಥವಾ ಕ್ಷಮೆ ವ್ಯಕ್ತಪಡಿಸಲು ನಿರಾಕರಿಸಿದ್ದರು.

302
"ಬಸವಣ್ಣನವರಂತೆ ಹೊಳ್ಯಾಗ ಜಿಗೀರಿ" ಎಂದಿರುವ ಯತ್ನಾಳ್:

ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಶ್ರೀಗಳು ಮತ್ತು ಯತ್ನಾಳ್ ಕೆಲವು ವರ್ಷಗಳಿಂದ ಉತ್ತಮ ಒಡನಾಟ ಬೆಳೆಸಿಕೊಂಡಿದ್ದಾರೆ. ಆದ್ದರಿಂದ ವಿವಾದ ಭುಗಿಲೆದ್ದ ಮೇಲೆ ಅನೇಕ ಬಸವಾನುಯಾಯಿಗಳು ಶ್ರೀಗಳು ಯತ್ನಾಳರಿಗೆ ಬುದ್ದಿ ಹೇಳಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಕೊಂಡಿದ್ದರು.

ಆದರೆ ಶ್ರೀಗಳ ನಿಲುವು ನೋಡಿದ ಮೇಲೆ ಅವರು ಯತ್ನಾಳರಿಗೆ ಬುದ್ದಿ ಹೇಳುವುದಾಗಲಿ ಅಥವಾ ಅವರ ಹೇಳಿಕೆಯನ್ನು ಖಂಡಿಸುವ ಯಾವ ಸೂಚನೆ ಕಾಣಿಸುತ್ತಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

Share This Article
5 Comments
  • ಜಾತಿ ಅಭಿಮಾನ ಒಳ್ಳೆಯದಲ್ಲ ಗುರುಗಳೇ, ನಿಮಗೆ ಬಸವತತ್ವ ಉಸಿರಾಗಿರಬೇಕು. ಯಾರು ಓಲೈಕೆಗೂ ಬಗ್ಗದಿರಿ. ಯಾರು ಮಾತಾಡಿದರು ತಪ್ಪು ತಪ್ಪೇ ಎಂದು ಹೇಳಿ. ಅಪಾರ್ಥವೇ ಆಗಿರುವಾಗ ಅದರ ಸಮರ್ಥನೆ ಏಕೆ? ಭೂತದ ಬಾಯಲ್ಲಿ ಮಂತ್ರ ಹೇಳಿದಂತಾಯಿತು. ನಿಮ್ಮಿಂದ ಈ ಹೇಳಿಕೆ ನಿರೀಕ್ಷಿಸಿರಲಿಲ್ಲ. *ದುಶ್ಮನ್ ಕಾ ಹೈ ಅಂದರೆ ಬಗಲ್ ಮೇ ಹೈ*

  • ಜಾತಿಯೆಂಬ ಕನ್ನಡಕ ಕಳಚಿಟ್ಟು ರಾಜಕೀಯ ಓಲೈಕೆ ಬಿಟ್ಟು ಧರ್ಮಗುರುಗಳಾಗಿ ಪ್ರತಿಕ್ರಿಯೆ ನೀಡಿ, ನೀವು ಬಸವಾದಿ ಶರಣರ ಆದರ್ಶಗಳನ್ನು ಸಮಾಜಕ್ಕೆ ತಿಳಿಸಬೇಕು ನಾವು ನಿಮ್ಮಿಂದ ಈ ಮಾತುಗಳನ್ನು ನಿರೀಕ್ಷಿಸಿಲ್ಲ

  • ಹಿಂದೆ ಸ್ವಾತಂತ್ರ ಹೋರಾಟಗಾರರಾದ ಶತಾಯುಷಿಗಳಾದ ಎಚ್. ಎಸ್. ದೊರಸ್ವಾಮಿ ಅವರಿಗೆ ಇದೇ ಯತ್ನಾಳ್ ಪಾಕಿಸ್ತಾನಕ್ಕೆ ಹೋಗಲಿ ಅವರು ನಕಲಿ ಸ್ವಾತಂತ್ರ ಹೋರಾಟಗಾರರು ಎಂದಿದ್ರು , ಅಂದೇ ಇವರ ಬಾಯಿಗೆ ಬೀಗ ಹಾಕಿದ್ದರೆ ಇಷ್ಟು ಉಡಾಫೆಯಾಗಿ ಇಂದು ಬಸವಣ್ಣನವರ ಬಗ್ಗೆ ಅವರು ಹೇಡಿ ಎಂದು ಮಾತಾಡುತ್ತಿರಲಿಲ್ಲ , ಎಚ್. ಎಸ್. ದೊರಸ್ವಾಮಿ ಪರ ಅಂದೂ ಯಾರೂ ಮಾತನಾಡಲಿಲ್ಲ ಅದೇ‌ ನೋವಿನಲ್ಲೇ ಅವರು ತೀರಿಕೊಂಡ್ರು , ಈ ಯತ್ನಾಳ್ ವಿರುದ್ದ ಪ್ರತಿಭಟಿಸದಿದ್ರೆ ಮುಂದೆ ಇನ್ನೂ ಅದೇನೇನು ಮಾತಾಡ್ತಾರೇನೋ

  • ಜಯ ಮೃತ್ಯುಂಜಯ ಸ್ವಾಮೀಜಿಯವರು ಮೊದಲು ಅವರ ನಿಲುವು ಸ್ಪಷ್ಟಪಡಿಸಲೀ

  • The fate of this swami will be similar to that of Yathnal. We call Yaynal BADAVA drohi. Can we use this adjective to this swami also? I pity this swami.

Leave a Reply

Your email address will not be published. Required fields are marked *