ಮುಂದಿನ ಸಲ ಯತ್ನಾಳ್ ಸೋಲದಿದ್ದರೆ, ಪೀಠ ತ್ಯಾಗ: ಡಾ. ಶಿವಾನಂದ ಶ್ರೀ ಚಾಲೆಂಜ್

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಯತ್ನಾಳ ನೀನು ಆಡಿದ ಮಾತು ವಾಪಸ್ ತಕ್ಕೋಬೇಕು, ಇಲ್ಲಾಂದ್ರ ಮುಂದಿನ ಚುನಾವಣೆಯಲ್ಲಿ ಬಿದ್ದೋಗ್ತಿಯಾ. ಈ ಮಾತನ್ನು ನಾನು ಚಾಲೆಂಜ್ ಕೊಟ್ಟು ಹೇಳುತ್ತಿದ್ದೇನೆ.

ಹುಲಸೂರ

ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಸವಣ್ಣನವರನ್ನು ನಿಂದಿಸಿದ್ದಕ್ಕಾಗಿ ಲಿಂಗಾಯತರ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಕರ್ನಾಟಕದ ಲಿಂಗಾಯತರು ಅವನನ್ನು ಇಲ್ಲಿಂದ ಓಡಿಸುವ ಕಾರ್ಯಕ್ರಮ ಹಾಕಿಕೊಳ್ಳಬೇಕಾಗುತ್ತದೆ ಎಂದು ಬೀದರ ಜಿಲ್ಲೆಯ ಹುಲಸೂರ ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಡಾ. ಶಿವಾನಂದ ಮಹಾಸ್ವಾಮಿಜಿ ಎಚ್ಚರಿಸಿದರು.

ಅವರು ತಮ್ಮ 73 ನೇ ಜನ್ಮ ದಿನದ ಅಂಗವಾಗಿ ಅಲ್ಲಮಪ್ರಭು ಶೂನ್ಯಪೀಠದ ಆವರಣದಲ್ಲಿ ಭಾನುವಾರದಿಂದ ಆರಂಭಗೊಂಡಿರುವ ಶರಣ ಸಂಸ್ಕೃತಿ ಉತ್ಸವದ ನೇತೃತ್ವ ವಹಿಸಿ ಸೋಮವಾರ ಮಾತನಾಡಿದರು.

ಸಾಮಾನ್ಯವಾದ ವ್ಯಕ್ತಿ ಬಸವಣ್ಣ ಅಲ್ಲ. ಯಾರು ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಅವರೆಲ್ಲ ಇವತ್ತು ನಾಲಿಗೆಯನ್ನು ಬಿಗಿಹಿಡಿದು ಮಾತನಾಡಬೇಕು. ಯತ್ನಾಳ ನೀನು ಎಂಎಲ್ಎ ಆಗಿರಬಹುದು, ದೊಡ್ಡ ಶ್ರೀಮಂತ ಇರಬಹುದು, ಏನಾದರೂ ಇದ್ದಿರಬಹುದು. ನಿನ್ನ ಶ್ರೀಮಂತಿಕೆ, ಎಂಎಲ್ಎಗಿರಿಗೆ ಜನ ಧಿಕ್ಕಾರ ಹಾಕ್ತಾರೆ. ಕರ್ನಾಟಕದ ಪ್ರತಿಯೊಬ್ಬ ದೀನರು, ದಲಿತರು ಎಲ್ಲರೂ ನಿನ್ನನ್ನು ಉಗಿಯುತ್ತಿದ್ದಾರೆ.

ನೀನೊಬ್ಬ ಲಿಂಗಾಯತ ಆದಮೇಲೆ, ನೀನೊಬ್ಬ ವೀರಶೈವ ಆದಮೇಲೆ ಏನು ಮಾತಾಡಬೇಕೆಂಬ ಪ್ರಜ್ಞೆಯಿಲ್ಲ ನಿನಗೆ. ಬಸವರಾಜ ಎಂದು ಹೆಸರಿಟ್ಟುಕೊಂಡು ನೀನು ಬೆಂಕಿ ಹಚ್ಚುತ್ತಿದ್ದೀಯಾ. ನೀನು ಎಲ್ಲರಿಗೂ ಕನಿಷ್ಠವಾಗಿ ಮಾತನಾಡುತ್ತಿಯಲ್ಲ, ಅದನ್ನು ಕರ್ನಾಟಕದ ಎಲ್ಲ ಮಠಾಧೀಶರು ಖಂಡಿಸಿದ್ದಾರೆ. ಅದಕ್ಕಾಗಿ ನೀನು ಕರ್ನಾಟಕದ ಪ್ರತಿಯೊಬ್ಬ ಜನತೆಯಲ್ಲಿ ಕ್ಷಮೆ ಕೇಳಬೇಕು. ಇಲ್ಲದೆ ಹೋದರೆ ದೊಡ್ಡದಾದ ಹೋರಾಟ ಲಿಂಗಾಯತರೆಲ್ಲ ಕೂಡಿಕೊಂಡು ಮಾಡುತ್ತೇವೆ, ಈ ಎಚ್ಚರಿಕೆ ನಿನಗೆ ಕೊಡುತ್ತೇವೆ ಎಂದರು.

302
"ಬಸವಣ್ಣನವರಂತೆ ಹೊಳ್ಯಾಗ ಜಿಗೀರಿ" ಎಂದಿರುವ ಯತ್ನಾಳ್:

ನೀನು ಮಾತಾಡುವ ಮಾತುಗಳು ತುಂಬಾ ಹಗುರವಾಗಿದೆ. ಬಸವಣ್ಣವರ ಬಗ್ಗೆ, ಸ್ವಾಮಿಗಳ ಬಗ್ಗೆ ಮಾತಾಡ್ತಾ ತಾನೊಬ್ಬನೇ ತೀರ್ಸ್ಮಾರ್ಕ್ ಅಂತ ತಿಳ್ಕೊಂಡಗಿದೆ. ಎಂಎಲ್ಎ ಆದ್ರ ಭಾರಿ ದೊಡ್ಡವ ಅಂತ ತಿಳ್ಕೊಂಡಾನ. ಪ್ರತಿಯೊಂದು ಜನಾಂಗದವರು ನಿನಗೆ ವೋಟ್ ಹಾಕಿ ಆರಿಸಿ ತಂದಾಗಲೇ ನೀನು ಎಂಎಲ್ಎ ಆಗಿದ್ದಿಯಾ, ವೋಟ್ ಹಾಕೋ ಜನಗಳಿಗೂ ಗೌರವ ಕೊಡಂಗಿಲ್ಲ ಅಂದ್ರೆ ನೀನೆಂತ ಎಮ್ಎಲ್ಎ ಇದ್ದೀಯ ಎಂದು ಹಂಗಿಸಿದರು.

ನಾನೇ ಬಸವಣ್ಣ ಅಂತ ಹೇಳಿ ನಾಲಾಯಕತನ ಪ್ರದರ್ಶನ ಮಾಡ್ಯಾನ, ಯಾರು ಬಸವಣ್ಣ ಆಗಾಕ ಸಾಧ್ಯ ಇಲ್ಲ. ಬಸವಣ್ಣನ ಸರಿಸಮ ನಿಲ್ಲತಕ್ಕಂತ ವ್ಯಕ್ತಿ ಯಾರೂ ಇಲ್ಲ. ಈ ಜಗತ್ತಿನಲ್ಲಿ ಯಾರಾದರೂ ಒಬ್ಬ ಬಸವಣ್ಣ ಇದ್ರೆ, 12ನೇ ಶತಮಾನದ ಧರ್ಮಗುರು ಬಸವಣ್ಣವ್ರ ಬಿಟ್ರ ಯಾರು ಬಸವಣ್ಣ ಆಗಕ್ಕೆ ಸಾಧ್ಯ ಇಲ್ಲ. ಸುಮ್ಮನೆ ನೀವು ಬರ್ಕೊಬಹುದು ಅಭಿನವ ಬಸವಣ್ಣ, ಆ ಬಸವಣ್ಣ ಈ ಬಸವಣ್ಣ, ಶರಣ ಅಂತ ಬರ್ಕೋಬಹುದು. ಇವೆಲ್ಲ ಸುಳ್ಳಾಗುತ್ತವೆ. ಅದಕ್ಕಾಗಿ ಯತ್ನಾಳ ನಿನ್ನ ಮಾತುಗಳನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ. ನೀನು ಆಡಿದ ಮಾತು ವಾಪಸ್ ತಕ್ಕೋಬೇಕು, ಇಲ್ಲಾಂದ್ರ ನೀನು ಮುಂದಿನ ಚುನಾವಣೆಯಲ್ಲಿ ಬಿದ್ದೋಗ್ತಿಯಾ. ಈ ಮಾತನ್ನು ನಾನು ಚಾಲೆಂಜ್ ಕೊಟ್ಟು ಹೇಳುತ್ತಿದ್ದೇನೆ. ಅಕಸ್ಮಾತ್ ನೀನು ಮುಂದಿನ ಸಲ ಚುನಾವಣೆಯಲ್ಲಿ ಬೀಳದಿದ್ದರೆ ನಾನು ಈ ಮಠದ ಪೀಠವನ್ನೇ ತ್ಯಾಗ ಮಾಡ್ತೀನಿ ಎಂದು ಸವಾಲು ಹಾಕಿದರು.

ಯಾಕಂದ್ರೆ ಜನ ನಿನ್ನನ್ನು ಬಹಿಷ್ಕಾರ ಮಾಡ್ತಿದ್ದಾರೆ. ಅದಕ್ಕಾಗಿ ನೀನು ಕೂಡಲೇ ನಾಡಿನ ಜನರ ಕ್ಷಮೆ ಕೇಳಬೇಕೆಂದು ಶಿವಾನಂದ ಸ್ವಾಮೀಜಿ ಮನವಿ ಮಾಡಿದರು.

ಬಸನಗೌಡ ಯತ್ನಾಳ ಅಲ್ಲ: ಯಡವಟ್ಟು ಯತ್ನಾಳ

“ಬಸವಣ್ಣನವರ ಕುರಿತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಆಡಿರುವ ಮಾತುಗಳು ಖಂಡನಾರ್ಹ. ಯತ್ನಾಳ ಮೂರ್ಖರಂತೆ ವರ್ತಿಸುತ್ತಿದ್ದಾರೆ. ಬಸವಣ್ಣನವರ ಚರಿತ್ರೆ, ಸಿದ್ಧಾಂತ ಸರಿಯಾಗಿ ಗೊತ್ತಿಲ್ಲದಿರುವುದು ವಿಷಾದನೀಯ ಸಂಗತಿ’ ಎಂದು ಗುಣತೀರ್ಥವಾಡಿ ಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

‘ಬಸನಗೌಡ ಯತ್ನಾಳ ಅಲ್ಲ; ಅವರು ಯಡವಟ್ಟು ಯತ್ನಾಳ. ಬಸವಣ್ಣನವರ ಕುರಿತು ಇಲ್ಲಸಲ್ಲದ ಮಾತುಗಳನ್ನು ಆಡಿ ಬಸವಾದಿ ಶರಣರ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಕೂಡಲೇ ಬಸವಾದಿ ಶರಣರ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ನಾಡಿನ ಶರಣರು ಕೈ ಕಟ್ಟಿ ಕೂಡುವುದಿಲ್ಲ’ ಎಂದರು.

ಉತ್ಸವದಲ್ಲಿ ಹವಗಿಸ್ವಾಮಿ ಮಠದ ಶಂಭುಲಿಂಗ ಸ್ವಾಮೀಜಿ, ಉರಿಲಿಂಗಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ, ಸಾಯಗಾಂವ ಮಠದ ಶಿವಾನಂದ ಸ್ವಾಮೀಜಿ, ಹುಡುಗಿ ಮಠದ ಚನ್ನಮಲ್ಲ ಸ್ವಾಮೀಜಿ ಅವರಿಗೆ ಉತ್ಸವದಲ್ಲಿ ಸಮಾಜ ಸೇವಾರತ್ನ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. ಮಹಿಳೆಯರಿಂದ ವಚನ ರಥೋತ್ಸವ ನಡೆಯಿತು.

ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಪ್ರವಚನ ಹಾಗೂ ಸಾಮೂಹಿಕ ಸಹಜ ಶಿವಯೋಗ ನಡೆಸಿಕೊಟ್ಟರು.

ಬೆಂಗಳೂರಿನ ಚೆನ್ನಬಸವ ಸ್ವಾಮೀಜಿ, ಮತ್ತಿತರ ಪೂಜ್ಯರು ವೇದಿಕೆಯಲ್ಲಿದ್ದರು. ಶಾಸಕ ಶರಣು ಸಲಗರ ಶಿವಾನಂದ ಸ್ವಾಮೀಜಿಯವರನ್ನು ಸನ್ಮಾನಿಸಿ ಗುರುಕಾಣಿಕೆ ನೀಡಿದರು.

ಶಾಸಕ ಶೈಲೇಂದ್ರ ಬೆಲ್ದಾಳೆ, ಸುರೇಶ್ ಚನ್ನಶೆಟ್ಟಿ, ಶರಣಪ್ಪ ಮಿಠಾರೆ, ಸುಧೀರ ಕಾಡಾದಿ, ಗುರುನಾಥ ಮೂಲಗೆ, ನವಲಿಂಗ ಪಾಟೀಲ, ವೀರಯ್ಯಸ್ವಾಮಿ,ಹುಲಸೂರ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನ ಭಕ್ತರು ಪಾಲ್ಗೊಂಡಿದ್ದರು.

Share This Article
3 Comments
  • ಸ್ವಾಮೀಜಿಯವರ ಈ ದಿಟ್ಟತನಕ್ಕೆ ಸಾವಿರ ಶರಣು…ಖಂಡಿತಾ ಇಂತಹ ಅವಿವೇಕಿ ದುರಹಂಕಾರಿಗೆ ತಕ್ಕ ಶಾಸ್ತಿ ಮಾಡಲೇಬೇಕು…ವಿಶ್ವ ಗುರು ಬಸವೇಶ್ವರರಿಗೆ ಅವಮಾನ ಮಾಡುವ ಇಂತಹವರಿಗೆ ಭಗವಂತನಿಂದಲೇ ತಕ್ಕ ಪಾಠವಾಗಲಿ

  • Basava drohe RSS nalli gulamaragetuva ellaru solaneku
    1) Yadeyrappa
    2)Vijyendra
    3) Shatru
    4 ) Somanna
    5)yathnal
    6) all bjp MP MLAs

Leave a Reply

Your email address will not be published. Required fields are marked *