ಯತ್ನಾಳ ವಜಾಗೊಳಿಸಲು ಚಿತ್ರದುರ್ಗದಲ್ಲಿ ಬಸವ ಸಂಘಟನೆಗಳ ಪ್ರತಿಭಟನೆ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಬಸವನಗೌಡ ಪಾಟೀಲ ಯತ್ನಾಳ ವಿರುದ್ಧ ನಗರದಲ್ಲಿ ರಾಷ್ಟ್ರೀಯ ಬಸವದಳ ಮತ್ತು ಇತರ ಬಸವಪರ ಸಂಘಟನೆಗಳು ಮಂಗಳವಾರ ಪ್ರತಿಭಟನೆ ನಡೆಸಿದವು.

ನಗರದ ಬಸವ ಮಂಟಪದಿಂದ ಡಿಸಿ ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ಸರ್ಕಾರಕ್ಕೆ ಮನವಿ ಪತ್ರ ಕೊಟ್ಟರು.

ಯತ್ನಾಳ ಬಸವಣ್ಣನವರ ಲಿಂಗೈಕ್ಯ ವಿಚಾರವಾಗಿ ಇತಿಹಾಸ ಪ್ರಜ್ಞೆ ಇಲ್ಲದೆ ಹಗುರವಾಗಿ ಮಾತನಾಡಿದ್ದಾರೆ. ಜನಪ್ರತಿನಿಧಿಯಾದ ಇವರು ಕೋಮುಗಲಭೆ ಸೃಷ್ಟಿ ಮಾಡುವ, ಸಮಾಜದ ಸ್ವಾಸ್ಥವನ್ನು ಹಾಳುಮಾಡುವ ಪ್ರಯತ್ನ ಮಾಡಿದ್ದಾರೆ. ಬಸವಣ್ಣನವರ ಅನುಯಾಯಿಗಳ ಮನನೋಯುವಂತೆ ನಡೆದುಕೊಂಡಿದ್ದಾರೆ. ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಸರ್ಕಾರವನ್ನು ಮನವಿ ಪಾತ್ರದ ಮೂಲಕ ಆಗ್ರಹಿಸಿದ್ದಾರೆ.

ಪ್ರತಿಭಟನಾ ಮೆರವಣಿಗೆಯ ನೇತೃತ್ವವನ್ನು ಪೂಜ್ಯ ದಾನೇಶ್ವರಿ ಮಾತಾಜಿ, ಕೆ. ವೀರೇಶಕುಮಾರ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಬಸವದಳ, ವೆಂಕಟೇಶ ಲಿಂಗಾಯತ ಜಿಲ್ಲಾಧ್ಯಕ್ಷರು, ರಾಷ್ಟ್ರೀಯ ಬಸವದಳ, ಚಿತ್ರದುರ್ಗ, ಶಂಕ್ರಪ್ಪ ಲಿಂಗಾಯತ ಜಿಲ್ಲಾಧ್ಯಕ್ಷರು, ಲಿಂಗಾಯತ ಧರ್ಮ ಮಹಾಸಭಾ ಚಿತ್ರದುರ್ಗ, ಶರಣೆಯರಾದ ಅಕ್ಕಮಹಾದೇವಿ, ವಿನೋದಮ್ಮ, ವೀಣಾ ರಾಷ್ಟ್ರೀಯ ಬಸವದಳ ಚಿತ್ರದುರ್ಗ, ಗೌರಮ್ಮ ಮತ್ತಿತರರು ವಹಿಸಿದ್ದರು.

ಬಸವ ಬಳಗ, ದಾವಣಗೆರೆ, ಚಳ್ಳಕೆರೆ ಮತ್ತು ಚಿತ್ರದುರ್ಗ ತಾಲೂಕುಗಳ ರಾಷ್ಟ್ರೀಯ ಬಸವದಳದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Share This Article
Leave a comment

Leave a Reply

Your email address will not be published. Required fields are marked *