ರೋಣ
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಯಾವಗಲ್ಲ ಗ್ರಾಮದ ಹಳ್ಳಿರಂಗ ಶಾಲೆಯು ದೇಶದ ಪ್ರಥಮ ಮಹಿಳಾ ಶಿಕ್ಷಕಿ, ಅಕ್ಷರದವ್ವ “ಸಾವಿತ್ರಿ ಬಾ ಫುಲೆ” ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿದೆ .
ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಕೊಡಮಾಡುವ ಈ ಪ್ರಶಸ್ತಿಯು ಗ್ರಾಮೀಣ ಮಕ್ಕಳಿಗೆ ಉಚಿತ ಶಿಕ್ಷಣ, ಸಾಮಾಜಿಕ, ಸಾಂಸ್ಕೃತಿಕ, ಸೇವಾ ಮನೋಭಾವ ಪರಿಗಣಿಸಿ ನೀಡಲಾಗುತ್ತದೆ.

ವಿದ್ಯಾವಂತ ನೌಕರರು ತಮ್ಮ ಬಿಡುವಿನ ಸಮಯವನ್ನು ಸಮಾಜಕ್ಕೆ ಮೀಸಲಿಡಬೇಕು. ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಮರಳಿಸಬೇಕೆಂಬ ಆಶಯ ಇಟ್ಟುಕೊಂಡು ಸ್ಥಾಪಿತವಾದ ಈ ಸಂಸ್ಥೆಯು, ಕಳೆದ ಐದು ವರ್ಷಗಳಿಂದ ಕಾರ್ಯ ಚಟುವಟಿಕೆ ಮಾಡುತ್ತಿದೆ. ಈಗಾಗಲೇ ಈ ಸೇವೇ ಪರಿಗಣಿಸಿ 2022ರ ಸಾಲಿನ ಪ್ರಜಾವಾಣಿ ವರ್ಷದ ಸಾಧಕ ಪ್ರಶಸ್ತಿ, ಫುಲೆ ಮಾರ್ಗಿ, ಈಗ ಅಕ್ಷರದವ್ವನ ಪ್ರಶಸ್ತಿಗೆ ಭಾಜನವಾಗಿರುವುದು ನಮ್ಮ ಖುಷಿ ಮತ್ತು ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಇದರ ಸಂಸ್ಥಾಪಕರು, ಕವಿ, ರೈಲ್ವೆ ನೌಕರರಾಗಿರುವ
ವೀರಪ್ಪ.ಹ. ತಾಳದವರ ಹಾಗೂ ಹಳ್ಳಿರಂಗ ಆಡಳಿತ ಮಂಡಳಿ ಹರ್ಷ ವ್ಯಕ್ತ ಪಡಿಸಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಜನೇವರಿ 03/2025 ರಂದು ವಿಜಯಪುರದಲ್ಲಿ ನಡೆಯಲಿದೆ.
