ಬಂದವರಲ್ಲಿ 15-20 ಜನ ಪೂರ್ಣಾವಧಿ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುವುದಾಗಿ ಸ್ವಯಂ ಒಪ್ಪಿಕೊಂಡರು
ತಾವರಗೇರಾ
ಕೊಪ್ಪಳ ಜಿಲ್ಲೆಯ ತಾವರಗೇರಾ ಪಟ್ಟಣದ ಬುದ್ಧ ವಿಹಾರದಲ್ಲಿ ಲಿಂಗಾಯತ ಧರ್ಮದ ಇತಿಹಾಸ, ಸಿದ್ಧಾಂತ ಹಾಗೂ ಸಂಘಟನೆ ಕುರಿತು ಹಮ್ಮಿಕೊಂಡಿದ್ದ ಮೂರು ದಿನಗಳ ತರಬೇತಿ ಶಿಬಿರ ಯಶಸ್ವಿಯಾಗಿ ನಡೆಯಿತು.
ತರಬೇತಿಗಾಗಿ ಕೊಪ್ಪಳ, ವಿಜಯನಗರ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಿಂದ 70 ಜನ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು. ಇವರಲ್ಲಿ 15-20 ಜನ ಪೂರ್ಣಾವಧಿ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುವುದಾಗಿ ಸ್ವಯಂ ಒಪ್ಪಿಕೊಂಡರು.
![](https://basavamedia.com/wp-content/uploads/2025/01/tavaregera-5-1024x576.webp)
ವಿಜಯಪುರದ ಶರಣ ಚಿಂತಕ ಡಾ. ಜೆ.ಎಸ್. ಪಾಟೀಲ ಪ್ರಮುಖವಾಗಿ ತರಬೇತಿ ಪಾಠಗಳನ್ನು ಮಾಡಿದರು. ಪ್ರತಿದಿನ ಬೆಳಿಗ್ಗೆ ಇಷ್ಟಲಿಂಗ ಸಂಶೋಧನಾ ಕೇಂದ್ರದ ಬಸವರಾಜ ಲೆಕ್ಚರರ್ ಅವರು ಸಹಜ ಶಿವಯೋಗ ನಡೆಸಿಕೊಟ್ಟರು. ಜೆಎಲ್ಎಂ ರಾಯಚೂರು ಜಿಲ್ಲಾಧ್ಯಕ್ಷ ಪಿ. ರುದ್ರಪ್ಪ ಅವರು ಲಿಂಗಾಯತ ನಿಜಾಚರಣೆ ಕುರಿತು ಹೇಳಿಕೊಟ್ಟರು. ಸಮಾರೋಪದ ಅತಿಥಿಯಾಗಿ ಕಂಪ್ಲಿ ಹೇಮಯ್ಯಸ್ವಾಮಿ ಭಾಗಿಯಾಗಿದ್ದರು.
![](https://basavamedia.com/wp-content/uploads/2025/01/tavaregera-4-1024x576.webp)
ತರಬೇತಿದಾರರಿಗೆ ಮಾನವ ಬಂಧುತ್ವ ವೇದಿಕೆಯಿಂದ ಪೆನ್ನು, ಪ್ಯಾಡು, ಪ್ರಸಾದ, ವಸತಿ ವ್ಯವಸ್ಥೆ ಮಾಡಲಾಗಿತ್ತು. ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ನೀಡಲಾಯಿತು.
ಜನೇವರಿ 4, 5 ಮತ್ತು 6ರಂದು ನಡೆದ ಕಾರ್ಯಕ್ರಮವನ್ನು ಈ ನಾಲ್ಕು ಜಿಲ್ಲೆಗಳ ಬಸವಪರ ಸಂಘಟನೆಗಳು ಹಾಗೂ ಮಾನವ ಬಂಧುತ್ವ ವೇದಿಕೆ ಜಂಟಿಯಾಗಿ ಸಂಘಟಿಸಿದ್ದವು.
![](https://basavamedia.com/wp-content/uploads/2025/01/tavaregera-3-1024x576.webp)
![](https://basavamedia.com/wp-content/uploads/2025/01/tavaregera-2-1024x576.webp)
ಬಹುದಿನಗಳ ನಮ್ನ ಕನಸು ನನಸಾಗಲಿ
👍👍👍🌺
ದಯವಿಟ್ಟು ಶರಣ ಬಂಧುಗಳಲ್ಲಿ ವಿನಂತಿ ಮಾಡಿಕೊಳ್ಳುತ್ತಿನಿ, ಇಂತಹ ಶರಣರ ತತ್ವಗಳನ್ನು ಉಳಿಸುವ ಸಿಬಿರ ನಮ್ಮ ಕಲಬುರ್ಗಿಯಲ್ಲಿ ಮಾಡಿ 🙏 ನಾನು ಸೇರಬೇಕಿಂದುರುವೆ
ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ…. ಪ್ರತಿ ಜಿಲ್ಲೆ, ತಾಲೋಕು, ಹೋಬಳಿ, ಗ್ರಾಮಗಳಿಗೆ ವಿಸ್ತರಿಸುವ ಕಾರ್ಯಯೋಜನೆ ರೂಪಿಸಿ ಬಸವತತ್ವ ಆಲೋಚನೆಗಳು ಸೃಷ್ಟಿ ಆಗಲಿ