ಗದಗ
ಗಜೇಂದ್ರಗಡದಲ್ಲಿ ಇದೇ ೨೦, ೨೧ರಂದು ನಡೆಯಲಿರುವ ಗದಗ ಜಿಲ್ಲಾ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಶರಣ ಸಾಹಿತಿ ನಿವೃತ್ತ ಪ್ರಾಚಾರ‍್ಯರಾದ ಚಂದ್ರಶೇಖರ ವಸ್ತ್ರದ ಅವರಿಗೆ ಗದುಗಿನ ಬಸವಪರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ವಸ್ತ್ರದ ಅವರ ಮನೆಯಲ್ಲಿ ಭೇಟಿಯಾಗಿ ಅಭಿನಂದಿಸಿ, ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಕೆ.ಎಸ್.ಚಟ್ಟಿ, ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷ ಶೇಖಣ್ಣ ಕಳಸಾಪೂರಶೆಟ್ರ, ಬಸವದಳದ ಪ್ರಕಾಶ ಅಸುಂಡಿ, ಬಸವ ಕೇಂದ್ರ ಹಾಗೂ ಜಾ.ಲಿಂ.ಮ. ಜಿಲ್ಲಾ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ, ಎಮ್.ಬಿ. ಲಿಂಗದಾಳ, ಚಿನ್ನಮ್ಮ ವಸ್ತ್ರದ, ಸಿದ್ದಣ್ಣ ಅಂಗಡಿ, ಸೋಮು ಪುರಾಣಿಕ ಉಪಸ್ಥಿತರಿದ್ದರು.