ದೇವರ ಭೀತಿಯಿಂದ ಸಮಾಜದಲ್ಲಿ ಮೌಢ್ಯ: ಶರಣ ಬಾಳೇಶ ಬಸರ್ಗಿ

ಬೆಳಗಾವಿ

ದೇವರ ಕುರಿತು ಜನರಿಗೆ ಬಹಳಷ್ಟು ಗೊಂದಲವಿದೆ. ಅದರ ಭೀತಿಯಿಂದಾಗಿ ಸಮಾಜದಲ್ಲಿ ಮೌಢ್ಯ ನೆಲೆಯೂರಿದೆ. ಊರ ದೇವರು, ನಾಡ ದೇವರು ಮತ್ತು ರಾಷ್ಟ್ರ ದೇವರು ಎಂಬ ಮೂರು ವಿಧದಿಂದ ಅವನ್ನು ಆರಾಧಿಸುತ್ತೇವೆ. ಆದರೆ ಈ ದೇವರುಗಳು ತಂದೆ-ತಾಯಿಯಿಂದ ಜನಿಸಿದವರು. ಅದಕ್ಕೆ ಈ ದೇವರುಗಳಿಗೆ ಸಾವು, ಅಂತ್ಯವಿದೆ.

ಆದರೆ ಶರಣರು ಕಂಡುಕೊಂಡ ದೇವರೆಂದರೆ ಹುಟ್ಟು-ಸಾವಿಲ್ಲದ ಕೇಡಿಲ್ಲದ ದೇವರು, ಅದು ವಿಶ್ವಚೈತನ್ಯ. ಆ ದೇವರು ಜಗದಗಲ, ಮುಗಿಲಗಲ, ಮಿಗೆಯಗಲವಾಗಿದ್ದು ಇಡೀ ಬ್ರಹ್ಮಾಂಡವೇ ಆ ದೇವರು. ಆ ಬ್ರಹ್ಮಾಂಡದ ಅಂಶವಾದ ಈ ಮಾನವ ಪಿಂಡಾಂಡವೂ ಸಹ ದೇವರು. ಇಷ್ಟಲಿಂಗವು ಈ ಸಮಸ್ತ ಪರಾಪರ ಶಕ್ತಿಯ ಕುರುಹು ಆಗಿದೆ ಎಂದು ಶರಣ ಬಾಳೇಶ ಬಸರ್ಗಿ ಅನುಭಾವ ನೀಡಿದರು.

ಲಿಂಗಾಯತ ಸಂಘಟನೆಯಿಂದ ಡಾ.ಪ.ಗು. ಹಳಕಟ್ಟಿ ಭವನದಲ್ಲಿ ರವಿವಾರ ಜರುಗಿದ ಸಾಮೂಹಿಕ ವಚನ ಪ್ರಾರ್ಥನೆ, ಉಪನ್ಯಾಸ ಮತ್ತು ಈ ತಿಂಗಳಲ್ಲಿ ಜನಿಸಿದ ಸದಸ್ಯರ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವದ ಸಾಮೂಹಿಕ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶರಣ ಸುರೇಶ ನರಗುಂದ ಅವರು ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಬಿ.ಪಿ. ಜೇವಣಿ, ಆನಂದ ಕರ್ಕಿ, ಜಯಶ್ರೀ ಚಾವಲಗಿ, ಮಂಗಳಾ ಕಾಕತಿಕರ, ಶ್ರೀದೇವಿ ನರಗುಂದ, ಬಸವರಾಜ ಬಿಜ್ಜರಗಿ, ವಿ.ಕೆ.ಪಾಟೀಲ, ವಚನ ಗಾಯನ ಮಾಡಿದರು. ಅಧ್ಯಕ್ಷ ರಾದ ಈರಣ್ಣ ದೇಯನ್ನವರ ಉಪನ್ಯಾಸಕರ ಪರಿಚಯ ಮಾಡಿಕೊಟ್ಟರು. ಸುರೇಶ ನರಗುಂದ ನಿರೂಪಿಸಿದರು. ಬಸವರಾಜ ಬಿಜ್ಜರಗಿ, ಸದಾಶಿವ ದೇವರಮನಿ, ಸುನೀಲ ಸಾಣಿಕೂಪ್ಪ, ಸಿದ್ದಪ್ಪ ಸಾರಾಪುರಿ, ವಿದ್ಯಾ ಕಕಿ೯, ಮಂಜುಳಾ ದೇಯಣ್ಣವರ, ಶಿವಾನಂದ ಲಾಳಸಂಗಿ, ಸಿದ್ದಲಿಂಗಪ್ಪ ರೇವಣ್ಣವರ, ಅನೀಲ ರಘಶೆಟ್ಟಿ, ಶೇಖರ ವಾಲಿ ಇಟಗಿ, ಸಿದ್ದಪ್ಪ ಸಾರಾಪೂರಿ ಹಾಗೂ ಅನೇಕ ಶರಣ ಶರಣೆಯರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *