ಸೊಲ್ಲಾಪುರ
ಸೊಲ್ಲಾಪುರದಲ್ಲಿ೨೦೦ ಹಾಸಿಗೆಯ ಮಹಿಳಾ ಮತ್ತು ಮಕ್ಕಳಿಗಾಗಿ ನಿರ್ಮಾಣವಾಗಿರುವ ಆಸ್ಪತ್ರೆಗೆ ಕಿತ್ತೂರಿನ ರಾಣಿ ಚನ್ನಮ್ಮನವರ ಹೆಸರು ಇಡಲು ಮತ್ತು ಮಂಗಳವೇಡೆಯಲ್ಲಿ ಬಸವಣ್ಣನವರ ಸ್ಮಾರಕ ನಿರ್ಮಿಸಲು ಮಹಾರಾಷ್ಟ್ರದ ಲಿಂಗಾಯತ ಮುಖಂಡ, ಮಾಜಿ ಸಚಿವ, ಶಾಸಕ ವಿನಯ ಕೋರೆಯವರಿಗೆ ಮಹಾರಾಷ್ಟ್ರದ ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯಾಧ್ಯಕ್ಷ ವಿಜಯಕುಮಾರ ಹತ್ತುರೆ ಮನವಿ ಸಲ್ಲಿಸಿದ್ದಾರೆ.
ಭಾನುವಾರ ಕಾರ್ಯಕ್ರಮದ ನಿಮಿತ್ತ ಸೊಲ್ಲಾಪುರಕ್ಕೆ ಆಗಮಿಸಿದ ಕೊಲ್ಲಾಪುರದ ಶಾಸಕ ಲಿಂಗಾಯತ ಸಾಹುಕಾರ ವಿನಯ ಕೋರೆ ಅವರನ್ನು ಹತ್ತುರೆ ಮತ್ತು ಕರ್ನಾಟಕದ ಬೃಹತ್ ಕೈಗಾರಿಕೆ ಸಚಿವ ಎಮ್.ಬಿ. ಪಾಟೀಲರನ್ನು ಭೇಟಿಯಾಗಿ ಬಸವಣ್ಣನವರ ಪ್ರತಿಮೆ ನೀಡಿ ಗೌರವಿಸಿ, ಚರ್ಚೆ ನಡೆಸಿದರು.
ಜನಸುರಾಜ್ಯ ಪಕ್ಷದ ಸಂಸ್ಥಾಪಕರಾಗಿರುವ ವಿನಯ ಕೋರೆಯವರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸರ ಗಮನಕ್ಕೆ ಈ ವಿಷಯ ತಂದು ಆಸ್ಪತ್ರೆಗೆ ಚೆನ್ನಮನ್ನವರ ಹೆಸರಿಡಲು ಪ್ರಯತ್ನಿಸಬೇಕೆಂದು ಕೇಳಲಾಯಿತು.
ಮಂಗಳವೇಡೆಯಲ್ಲಿ ಬಸವಣ್ಣನವರ ಸ್ಮಾರಕವಾಗಬೇಕು ಎಂದು ಲಿಂಗಾಯತರ ಬಹುದಿನಗಳ ಬೇಡಿಕೆಯಾಗಿದೆ. ಮುಂದಿನ ದಿನಗಳಲ್ಲಿ ಮಂಗಳವೇಡೆಯಲ್ಲಿ ಬಸವಣ್ಣನವರ ಸ್ಮಾರಕ ನಿರ್ಮಾಣವಾಗಬೇಕು ಎಂಬುದನ್ನೂ ಹೇಳಲಾಯಿತು.
ಈ ವಿಷಯಕ್ಕೆ ಧ್ವನಿಗೂಡಿಸಿದ ಎಂ. ಬಿ. ಪಾಟೀಲರು ನಿಜವಾಗಿಯೂ ಈ ಎರಡು ಕೆಲಸಗಳು ಆಗಬೇಕು ಅದಕ್ಕೆ ವಿನಯ ಕೋರೆಯವರು ಪ್ರಯತ್ನಿಸಬೇಕು. ಮಹಾರಾಷ್ಟ್ರದಲ್ಲಿ ಸುಮಾರು ಒಂದು ಕೋಟಿ ಸಮೀಪ ಲಿಂಗಾಯತರಿದ್ದಾರೆ. ಅವರ ಪ್ರತಿನಿಧಿಯಾಗಿ ವಿನಯ ಕೋರೆ ಸಾಹುಕಾರವರು ಈ ಕಾರ್ಯ ನೇರವೇರಿಸಬೇಕು ಎಂದು ಹೇಳಿದರು.
ಮನವಿ ಸ್ವೀಕರಿಸಿ ಮಾತನಾಡಿದ ವಿನಯ ಕೋರೆಯವರು ಈ ವಿಷಯದ ಕುರಿತು ತಾವು ಮುಖ್ಯಮಂತ್ರಿಗಳ ಜತೆ ಚರ್ಚಿಸಿ, ಆಸ್ಪತ್ರೆಗೆ ರಾಣಿ ಕಿತ್ತೂರು ಚೆನ್ನಮ್ಮಳ ಹೆಸರಿಡಲು ತಾವು ಪ್ರಯತ್ನಿಸುವದಾಗಿ ಮತ್ತು ಮಂಗಳವೇಡೆಗೆ ಹೋಗಿ ತಾವು ಸ್ವತ: ಬಸವಣ್ಣನವರ ಸ್ಮಾರಕಕ್ಕೆ ಬೇಕಾದ ಸ್ಥಳ ವಿಕ್ಷೀಸುವದಾಗಿ ಹೇಳಿದರು.
ಸಿದ್ಧರಾಮೇಶ್ವರ ಮಂದಿರ ಸಮಿತಿಯ ಅಧ್ಯಕ್ಷ ಧರ್ಮರಾಜ ಕಾಡಾದಿ, ಜನಸುರಾಜ್ಯ ಪಕ್ಷ ಕೋರ್ ಕಮೀಟಿಯ ರವಿ ಕೋರೆ, ವೀರೇಶ ಸಕ್ಕರಗಿ, ಲಿಂಗಾಯತ ಸಮನ್ವಯ ಸಮಿತಿಯ ಶಹರ ಅಧ್ಯಕ್ಷ ಸಕಲೇಶ ಭಾಭುಳಗಾವಕರ, ನಾಮದೇವ ಫುಲಾರಿ, ಸಿದ್ಧರಾಮ ಕಟಾರೆ ಸೇರಿದಂತೆ ಹಲವರು ಇದ್ದರು.
ಒಳ್ಳೆಯ ಬೆಳವಣಿಗೆ