ಮೊಯ್ಲಿ ಕಾರ್ಯಕ್ರಮದಲ್ಲಿ ಕಾವೇರಿದ ಲಿಂಗಾಯತ, ವೀರಶೈವ ವಿವಾದ

ಬಾಗಲಕೋಟೆ

ಬಾಗಲಕೋಟೆಯಲ್ಲಿ ನಡೆದ ವೀರಪ್ಪ ಮೊಯ್ಲಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವೀರಶೈವ-ಲಿಂಗಾಯತ ಧರ್ಮದ ಬಗ್ಗೆ ವಾಗ್ವಾದ ನಡೆಯಿತು. ಶರಣ ಸಾಹಿತಿ ಡಾ. ವೀರಣ್ಣ ರಾಜೂರ ಅವರು ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮಗಳು ಎಂದು ವಾದಿಸಿದರೆ, ದಿಂಗಾಲೇಶ್ವರ ಸ್ವಾಮೀಜಿ ಒಂದೇ ಧರ್ಮ ಎಂದು ಪ್ರತಿಪಾದಿಸಿದರು. ಮೊಯ್ಲಿ ಅವರ ಪುಸ್ತಕದಲ್ಲಿನ ಉಲ್ಲೇಖಗಳನ್ನು ಆಧರಿಸಿ ಈ ವಾಗ್ವಾದ ನಡೆಯಿತು.

ಬಸವಣ್ಣನವರ ಇಷ್ಟಲಿಂಗದ ಪ್ರತಿರೂಪದ ಬಗ್ಗೆಯೂ ಚರ್ಚೆ ನಡೆಯಿತು.

ಮೊಯ್ಲಿ ಅವರ ವಿಶ್ವಸಂಸ್ಕೃತಿ ಮಹಾಯಾನ ಕಾವ್ಯದಲ್ಲಿ ವೀರಶೈವ ಲಿಂಗಾಯತ ಧರ್ಮ ಅಂತ ಪ್ರಸ್ತಾಪ ಮಾಡಲಾಗಿದೆ. ಒಂದು ಧರ್ಮಕ್ಕೆ ‌ಎರಡು ಹೆಸರಿರುವುದಿಲ್ಲ. ಹೀಗಾಗಿ, ವೀರಶೈವ ಲಿಂಗಾಯತ ಬೇರೆ ಎಂದು ಡಾ. ವೀರಣ್ಣ ರಾಜೂರ ಮಾತಾಡಿದರು.

ವೀರಶೈವ ಲಿಂಗಾಯತ ಎರಡೂ ಒಂದೇ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ಒಂದು ಧರ್ಮಕ್ಕೆ ಎರಡು ಹೆಸರು ಇರಲ್ಲ ಎಂದು ಡಾ. ವೀರಣ್ಣ ರಾಜೂರ ಪ್ರತಿವಾದಿಸಿದರು.

ಡಾ. ವೀರಣ್ಣ ರಾಜೂರ ಅವರು ಮೊಯ್ಲಿ ಅವರ ಕಾವ್ಯದಲ್ಲಿ ವೀರಶೈವ ಲಿಂಗಾಯತ ಅಂತ ಶಬ್ದ ಪ್ರಯೋಗ ಬಂದಿದೆ ಅಂದರು. ವೀರಣ್ಣ ರಾಜೂರ ಅವರು ಲಿಂಗಾಯತ ಅನ್ನೋದು ನಿರ್ಣಯಿಸಲ್ಪಟ್ಟಿದೆ ಅಂತ ಹೇಳಿದರು. ಆದರೆ ಎಲ್ಲಿ ಯಾವಾಗ ನಿರ್ಣಯ ಆಯ್ತು ನನಗಂತೂ ಗೊತ್ತಿಲ್ಲ. ನನ್ನ ವೈಯಕ್ತಿಕ ವಿಚಾರ ಬಹುದೊಡ್ಡ ವಿಚಾರ ನಡೆದಾಗಲೂ ಹೇಳಿದ್ದೇನೆ. ವೀರಶೈವ-ಲಿಂಗಾಯತ ಅನ್ನೋದು ಬೇರೆಯಲ್ಲ ಅದು ಯಾವಾಗಲೂ ಒಂದೇ. ಅದನ್ನು ಯಾವಾಗಲೂ ಬೇರೆ ಮಾಡಬಾರದು ಎಂದು ದಿಂಗಾಲೇಶ್ವರ ಹೇಳಿದರು.

ವೀರಣ್ಣ ರಾಜೂರ ಅವರು ಮೊಯ್ಲಿ ಅವರ ಕಾವ್ಯದಲ್ಲಿ ಒಂದು ದೋಷ ಎತ್ತಿ ಹಿಡಿದಿದ್ದಾರೆ. ಬಸವಣ್ಣನವರ ಕೈಯಲ್ಲಿ ಸ್ಥಾವರಲಿಂಗದ ಆಕಾರ ಇದೆ. ಅದು ಇಷ್ಟಲಿಂಗ ಆಗಬೇಕು ಅಂತ ಹೇಳಿದ್ದಾರೆ. ಅದು ನೆದರ ಚೂಕಿನಿಂದ ಆಗಿರತಕ್ಕಂತದ್ದು. ನಂತರದಲ್ಲಿ ಬದಲಾವಣೆ ಮಾಡುವುದಾಗಿ ಹೇಳಿದ್ದಾರೆ. ಬಸವಣ್ಣನವರ ಕೈಯಲ್ಲಿ ಇಷ್ಟಲಿಂಗ ಬರಬೇಕು ಅಂತ ನಾನೂ ಬಯಸುತ್ತೇನೆ. ಏಕೆಂದರೆ ಬಸವಣ್ಣನವರು ಇಷ್ಟಲಿಂಗ ಉಪಾಸಕರು ಎಂದರು.

ವೀರಶೈವ ಲಿಂಗಾಯತ ಬಗ್ಗೆ ಮೊಯ್ಲಿ ಅವರು ಶಾಸನ ಮಾಡಿಟ್ಟ ಹಾಗೆ ಬರೆದಿದ್ದಾರೆ. ವೀರಶೈವ ಲಿಂಗಾಯತ ಬೇರೆ ಅಂತ‌ ಹೇಳ್ತಿರಲ್ಲಾ ಅವರ ಸಿದ್ಧಾಂತಗಳು ಯಾವವು? ಅಷ್ಟಾವರಣ, ಪಂಚಾಚಾರ, ಷಟಸ್ಥಲ ಈ ಮೂರನ್ನು ಬಿಟ್ಟು ಲಿಂಗಾಯತ ಮಾಡಲು ಸಾಧ್ಯ ಇದೆಯಾ? ಈ‌ ಮೂರನ್ನು ಬಿಟ್ಟು ವೀರಶೈವರೂ ಹೋಗಲು ಆಗುವುದಿಲ್ಲ. ಲಿಂಗಾಯತರು ಬಿಟ್ಟಿರುವುದಕ್ಕೆ ಆಗುವುದಿಲ್ಲ. ಅಷ್ಟಾವರಣ, ಪಂಚಾಚಾರ, ಷಟಸ್ಥಲ ವೀರಶೈವ ಲಿಂಗಾಯತರ ಮೂಲಸ್ತಂಭಗಳು ಡಾ. ವೀರಣ್ಣ ರಾಜೂರ ಹೇಳಿದರು.

ದಿಂಗಾಲೇಶ್ವರ ಸ್ವಾಮೀಜಿ ಸಾಮಾಜಿಕ ಸೌಕರ್ಯ ಪಡೆಯಲು ಲಿಂಗಾಯತ ಮಾಡುತ್ತೇವೆ ಅಂತೀರಲ್ಲ ಅದಕ್ಕೆ ನನ್ನ ವಿರೋಧವಿಲ್ಲ. ಅದಕ್ಕೆ ನೀವು ಏನಾದರೂ ಮಾಡಿ. ಆದರೆ ಸಾವಿರಾರು ವರ್ಷದಿಂದ ಬಂದ ಇತಿಹಾಸ ಬದಲಾವಣೆ ಮಾಡಿ. ನಾ ಮೊದಲನೇ ಪುಸ್ತಕದಲ್ಲಿ ಹಾಗೆ ಹೇಳಿದ್ದೀನಿ. ಎರಡನೇ ಪುಸ್ತಕದಲ್ಲಿ ಹಾಗೆ ಹೇಳಿದ್ದೀವಿ, ಅದನ್ನು ‌ಬಿಡ್ರಿ ಇದನ್ನು ನಂಬ್ರಿ ಅಂದ್ರ ನಾವು ಅಷ್ಟು ಬುದ್ದಿಗೇಡಿಗಳಲ್ಲ ಎಂದು ಗರಂ ಆದರು.

ಡಾ. ವೀರಣ್ಣ ರಾಜೂರ ಪ್ರತಿಯಾಗಿ ತೀರುಗೇಟು ನೀಡಿದರು ನೀವು ಬುದ್ದಿಗೇಡಿಗಳಲ್ಲ ನೀವು ಶಾಣ್ಯಾರ ಅದಿರಿ. ಆದರೆ ನಾ ಹೇಳ್ತಿನಿ ನೋಡಿ ಒಂದು ಮಾತು. ಹೊಸ ಹೊಸ ಆಧಾರ ಸಿಕ್ಕಾಗ ನಾವು ಹಿಂದೆ‌ ಮಾಡಿದ ತಪ್ಪು ತಿದ್ದುಕೊಳ್ಳೋದು ಸಹಜ. ಆದರೆ ಒಂದು ಧರ್ಮಕ್ಕೆ ಎರಡು ಹೆಸರು ಇರುವುದಿಲ್ಲ ಎಂದು ಸ್ವಾಮೀಜಿಗಳ ಹೇಳಿಕೆಗೆ ತಿರುಗೇಟು ನೀಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
12 Comments
  • ಅರೋಗ್ಯಕರ ಚರ್ಚೆ. ಇಂತಹ ಚಿಂತನೆಗಳು ನಡೆಯಬೇಕು. ಮೇಲಿಂದ ಮೇಲೆ ಸ್ಪಷ್ಟತೆ ಕೊಡುತ್ತಾ ಇರಬೇಕು. ಲಿಂಗಾಯತ ಅಸ್ಮಿತೆ ಉಳಿಸಬೇಕಾದ ಕ್ರಮಗಳಲ್ಲಿ ಇದೂ ಒಂದು ಅಂಶ. ಉತ್ತಮವಾಗಿ ವರದಿ ಮಾಡಿದ್ದೀರಿ. ಶರಣು ಶರಣಾರ್ಥಿಗಳು

  • ಸ್ಪಷ್ಟತೆ ಇರುವಾಗ , ಹಾಗೂ ಸಾವಿರಾರು ವರ್ಷಗಳ ಇತಿಹಾಸ ಕಣ್ಣು ಎದುರೆ ಇರುವಾಗ ಯಾರಿಗೂ ಯಾವುದನ್ನು ಬದಲಾಯಿಸಲು ಸಾಧ್ಯವಿಲ್ಲ,

  • ಮತ್ತೆಕೆ ದಿಂಗಾಲೇಶ್ವರ್ ಶ್ರೀಗಳು ಅಡ್ಡ ಹೊಂಟಾರು,
    ಬಸವ ತತ್ವ ಪಾಲನೆ ಮಾಡೋರು, ವಿ,,,,ವ – ಲಿಂಗಾಯತ ಒಂದೆ ಅಂತಾ ಹೇಳ್ತಿದ್ದಾರೆ? ರಾಜಕೀಯ ಮೇಲಾಟಕ್ಕೆ ಒಳಗಾದರೆ 🤔

  • ಪೂಜ್ಯ ದಿಂಗಾಲೇಶ್ವರ ಸ್ವಾಮೀಜಿ ಯವರು ತಾವು ಬಸವ ತತ್ವಗಳನ್ನು ಒಪ್ಪುವುದಾಗಿ ತುಟಿಯ ಮೇಲೆ ಹೇಕುತ್ತಾರೆ.ಆದರೆ ಅವರ ಹೃದಯದಲ್ಲಿ ವಿಶ್ವಗುರು ಬಸವಣ್ಣ ನವರ ಬಗ್ಗೆ ಭಕ್ತಿ ಮತ್ತು ಶ್ರದ್ಧೆ ಇರುವ ಹಾಗೆ ಕಾಣುತ್ತದೆ. ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಗೆ ಸಮರ್ಥನೆ ಮಾಡಿಕೊಳ್ಳುತ್ತಾರೆ? ಎರಡೂ ಒಂದೇ ಆದರೆ ಲಿಂಗಾಯತ ಧರ್ಮವನ್ನೇ ಒಪ್ಪಿಕೊಳ್ಳಲು ಏನು ಅಡ್ಡ ಬರುತ್ತದೆ. ವೀರಶೈವ ಲಿಂಗಾಯತ ಧರ್ಮ ಎಂಬ ಕಲಬೆರಕೆ ಮಾಡಿದ ಧರ್ಮ ಎಂದು ಅಸ್ತಿತ್ವಕ್ಕೆ ಬಂದಿತು? ಅದರ ಸ್ಥಾಪಕರು ಯಾರು? ಇದಕ್ಕೆ ವೈಜ್ಞಾನಿಕವಾಗಿ ಉತ್ತರ ಕೊಡಲು ಸಾಧ್ಯವೇ? ಪ್ರಾಜ್ಞರು, ತತ್ವ ನಿಷ್ಟರು ಆದ ಅಣ್ಣ ವೀರಣ್ಣ ರಾಜೂರ ಅವರು ಕರ್ನಾಟಕದ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಆಗಿದ್ದಂತ ಶ್ರೀ ಮಾನ್ ವೀರಪ್ಪ ಮೊಯ್ಲಿ ಅವರು ಈಗ ಬರೆದು ಬಿಡುಗಡೆ ಮಾಡಿದ ವಿಶ್ವ ಸಂಸ್ಕೃತಿ ಮಹಾಯಾನ ಎಂಬ ಪುಸ್ತಕದಲ್ಲಿ ವೀರಶೈವ ಲಿಂಗಾಯತ ಎಂಬ ಪದ ಬಳಕೆ ಹಾಗೂ ವಿಶ್ವ ಗುರು ಬಸವಣ್ಣ ಅವರ ಕೈಯಲ್ಲಿ ಇಷ್ಟ ಲಿಂಗದ ಬದಲು ಸ್ಥಾವರ ಲಿಂಗ ಕೊಟ್ಟಿರುವ ಬಗ್ಗೆ ಸಮಯೋಚಿತವಾಗಿ ಆಕ್ಷೇಪ ಪಡಿಸಿದ್ದು ಅವರಿಗೆ ಬಸವ ತತ್ವದ ಬಗ್ಗೆ ಇರುವ ಬದ್ಧತೆ ಯನ್ನು ಸಾಬೀತುಪಡಿಸಿದಂತೆ ಆಗಿದೆ.ಅದಕ್ಕಾಗಿ ನಾನು ಡಾ.ವೀರಣ್ಣ ರಾಜೂರ ಅವರನ್ನ ಅಭಿನಂದಿಸುತ್ತೇನೆ. ಅವರ ಜೊತೆಗೆ ಸರಜೂ ಕಾಟ್ಕ ರ ಅವರೂ ಆಕ್ಷೇಪ ವ್ಯಕ್ತ ಪಡಿಸಿದ್ದು ಡಾ.ವೀರಣ್ಣ ರಾಜೂರ ಅವರ ವಾದಕ್ಕೆ ಪುಷ್ಟಿ ನೀಡಿದೆ. ವೀರಶೈವವು ಬಸವ ಪೂರ್ವದಲ್ಲೇ ಅಸ್ತಿತ್ವದಲ್ಲಿ ಇತ್ತು ಎಂದು ಅವರ ವಾದ ಆದರೆ ಲಿಂಗಾಯತ ಎಂಬ ಪದ ಸೇರಿಸಿಕೊಳ್ಳದೆ ಸರ್ಕಾರದಿಂದ ವೀರಶೈವ ಧರ್ಮ ಒಂದು ಸ್ವತಂತ್ರ ಧರ್ಮ ಎಂದು ಮಾನ್ಯತೆ ಪಡೆದು ಕೊಳ್ಳಲಿ. ಅದು ಬಿಟ್ಟು ಲಿಂಗಾಯತ ಧರ್ಮದ ಹೆಗಲ ಮೇಲೆ ಕುಳಿತು ವೀರಶೈವ ಲಿಂಗಾಯತ ಧರ್ಮ ಎಂಬ ಹೆಸರನಲ್ಲಿ ಮಾನ್ಯತೆ ಕೇಳುವುದು ಸಮಂಜಸವಲ್ಲ. ವೀರಶೈವ ಲಿಂಗಾಯತ ಎಂಬ ಪದ ಬಳಕೆ ಸುಮಾರು 25 ವರ್ಷಗಳ ಈಚೆಗೆ ಪಟಭದ್ರ ಹಿತಾಸಕ್ತರು ಹುಟ್ಟು ಹಾಕಲಾಗಿದೆ. ಇದು ವೀರಶೈವರ ಕುಚೇಷ್ಟೆ ಅಷ್ಟೇ .ಇಂದು,ಮುಂದೆ ಮತ್ತು ಎಂದೆಂದಿಗೂ ವಿಶ್ವಗುರು ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮವೆ ಸತ್ಯ ಎಂದು ಗಟ್ಟಿ ದ್ವನಿಯಲ್ಲಿ ಎಲ್ಲಾ ಬಸವ ತತ್ವ ಅನುಯಾಯಿಗಳು ಹೇಳುತ್ತೇವೆ.

  • ವೀರಶೈವ ಲಿಂಗಾಯತ ಎಂಬ ಪದ ಬಳಕೆ ಸುಮಾರು 25 ವರ್ಷಗಳ ಈಚೆಗೆ ಪಟಭದ್ರ ಹಿತಾಸಕ್ತರು ಹುಟ್ಟು ಹಾಕಲಾಗಿದೆ. ಇದು ವೀರಶೈವರ ಕುಚೇಷ್ಟೆ ಅಷ್ಟೇ .ಇಂದು,ಮುಂದೆ ಮತ್ತು ಎಂದೆಂದಿಗೂ ವಿಶ್ವಗುರು ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮವೆ ಸತ್ಯ ಎಂದು ಗಟ್ಟಿ ದ್ವನಿಯಲ್ಲಿ ಎಲ್ಲಾ ಬಸವ ತತ್ವ ಅನುಯಾಯಿಗಳು ಹೇಳುತ್ತೇವೆ.

    • ನಿಮ್ಮ ಕುಚೇಷ್ಟೆ ಬಿಡಿ , ಬಸವಣ್ಣ ನವರು ಯಾವುದೇ ಧರ್ಮವನ್ನು ಸ್ಥಾಪಿಸಿಲ್ಲ, ಅಂಥ ಅವ್ರು ಎಲ್ಲಿ ಹೇಳಿಕೊಂಡಿಲ್ಲ ಯಾವ ವಚನದಲ್ಲಿ ಲಿಂಗಾಯತ ಅಂಥ ಎಲ್ಲೂ ಉಲ್ಲೇಖ ಇಲ್ಲ, ಹಾಗೂ ನೀವು ಅಂಥ , ಮಹಾ ವೇಧಾವಿ, ಅನುಭವ ಮಂಟಪದ ಅಧ್ಯಕ್ಷರು , ಸರ್ವ ಶ್ರೇಷ್ಠರಾದ ಅಲ್ಲಮಪ್ರಭು ಅವರನ್ನೇ ಯಾರು ನೆನೆಸೋದಿಲ್ಲ ಯಾಕೆ , ಅವ್ರು ಬಸವಣ್ಣ ಅವರಿಗಿಂತ ಮುಂಚೂಣಿ ಅಲ್ಲಿ ಇದ್ರು ಅವರನ್ನು ಯಾಕೆ ಸ್ಮರಿಸಿಲ್ಲ??????

    • ಹಾನಗಲ್ಲ ಕುಮಾರ ಸ್ವಾಮಿಗಳ , 25 ವರ್ಷದ ಹಿಂದೆ , ಅಖಿಲಾ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಮಾಡಿಧರ , ಮಾತಾಡುವುದಕ್ಕೂ ಮೀತಿ ಇರಬೇಕು , ನಮ್ಮ ಉತ್ತರ ಕರ್ನಾಟಕ, ಎಷ್ಟೋ ವಿರಕ್ತ ಮಠಗಳಳ್ಳಿ ಇಂದಿಗೂ ಪೂಜೆ ಪುನಸ್ಕಾರಗಳು ನಡೆಯುತ್ತವೆ, sir ನೆನಪಿಟ್ಟುಕೊಳ್ಳಿ ಇತಿಹಾಸ, ಸಂಸ್ಕೃತಿ ಯಾವುದನ್ನು ಭಾದಲಾಯಿಸಲು ಸಾಧ್ಯ ವಿಲ್ಲ,

  • ಇಷ್ಟ ಲಿಂಗ ಸ್ಥಾವರ್ ಲಿಂಗದ ಮಿನಿಚರ್ ರೂಪ ಅದರ ಮೇಲೆ ಪ್ರಿಥ್ವಿ ಯ ಗೊಲಅಕಾರಾ. ದಿನಗಲೇಶ್ವರ್ ಸ್ವಾಮಿ ಗಳ ಹೇಳಿಕೆ ಯಲ್ಲಿ ತತ್ವ ಇದೆ ಅವರ ಮೇಲೆ ಗೂಬೆ ಕೂಡಿಸುವದು ತಪ್ಪು

  • ವೀರಶೈವರು ,ಪಂಚ ಪೀಠ, ಪುರೋಹಿತಶಾಹಿ, ಅರಮನೆ, ಗುರು ಮನೆ, ಎಂಬ ಹೆಸರಿನಲ್ಲಿ ವೃತ್ತಿ ಜಂಗಮರಿಗೆ ದೊರಕುವಯೆಲ್ಲ ಸೌಲಭ್ಯ ಪಡೆಯಲು ಎರಡು ಒಂದೆ ಎನ್ನುತ್ತಿದ್ದಾರೆ. ಅವರಲ್ಲಿ ವರ್ಗ ಭೇದ, ವರ್ಣ ಭೇದ, ಲಿಂಗ ಭೇದ, ಜಾತಿ ಭೇದ, ಕುಲ ಭೇದ, ಇತ್ಯಾದಿ ಭೇದಗಳನ್ನು ಸೃಷ್ಟಿಸಿ ಜನರನ್ನು ಗುಲಾಮರನ್ನಾಗಿ ಆಳುವ ನೀತಿ. ಲಿಂಗಾಯತರಲ್ಲಿ ಎಲ್ಲರೂ ದೇವನ ಮಕ್ಕಳು ಎಂಬ ಭಾವನೆ ಮೂಡಿಸುವಲ್ಲಿ ಸಫಲರಾಗಿದ್ದಾರೆ. ದೇವನೊಬ್ಬ ನಾಮ ಹಲವು ಎಂದು, ಇಷ್ಟ ಲಿಂಗವನ್ನು ಅರಿವಿನ ಕುರುಹು ಎಂದು ದ್ವಂದವವಿಲ್ಲದೆ , ಮನದ ಕೊನೆಯ ಮೊನೆಯ ಮೇಲೆ ಪರಮ ಜ್ಯೋತಿಯ ಕಂಡು ಅನುಭವಿಸಲು ಅರಿವಿನ ಕುರುಹು ಕೊಟ್ಟ ಅಪ್ಪ ಬಸವಣ್ಣನವರು ಧನ್ಯರು. ಶರಣು ಶರಣಾರ್ಥಿ.

    • ,qSir ಎಲ್ಲಾ ಭಾಸವಾದೀ ಶರಣರು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಾರೆ, ಎಸ್ಟೊಂದು ಶರಣರ ಮನೆಯಲ್ಲಿ ಕೆಲಸದವರಿಗೆ ಮನೆಯ ಅಡುಗೆ ಕೋಣೆ ಯಲ್ಲಿ ಕೂರಿಸಿ ಊಟ ಹಾಕ್ತೀರಾ, ಹೀಗೆ ಹೇಳುತಾ ಹೋದರೆ ಬಹಳಷ್ಟು ಸಾಕ್ಷಿ ಸಮೇತ ಊಧಾಹರಣೆಗಳಿವೆ, ನಿಮ್ಮಲ್ಲಿರುವ ಬೇದ ಭಾವ ನೀತಿಯನ್ನು ಸರಿ ಪಡಿಸಿಕೊಳ್ಳಿ,

  • “ಸತ್ಯವನ್ನೇ ಮರೆದು, ಅಸತ್ಯವನ್ನೇ ಹಿಡಿದು, ಸತ್ತುಹೋದರು, ಗುಹೇಶ್ವರಾ !!”
    – ಅಲ್ಲಮ ಪ್ರಭುದೇವ

  • “ಮರದೊಳಗಣ ಬೆಂಕಿ ತನ್ನ ತಾನೇ ಉರಿಯಬಲ್ಲುದೆ ? ಶಿಲೆಯೊಳಗಣ ದೀಪ್ತಿ
    ಆ ಬೆಳಗ ತನ್ನ ತಾನೆ ಬೆಳಗಬಲ್ಲುದೆ ?
    ಆ ತೆರನಂತೆ ಕುಟಿಲನ ಭಕ್ತಿ, ಕಿಸಕುಳನ ವಿರಕ್ತಿ
    ಮಥನಿಸಿಯಲ್ಲದೆ ದಿಟಹುಸಿಯ ಕಾಣಬಾರದು.
    ಸತ್ಯವನು ಅಸತ್ಯವನು ಪ್ರತ್ಯಕ್ಷ ಪ್ರಮಾಣಿಸಿದಲ್ಲದೆ ನಿಶ್ಚಯವನರಿಯಬಾರದು,
    ಗುರುವಾದಡೂ ಲಿಂಗವಾದಡೂ ಜಂಗಮವಾದಡೂ ಪರೀಕ್ಷಿಸಿ ಹಿಡಿಯದವನ ಭಕ್ತಿ, ವಿರಕ್ತಿ, ತೂತ ಕುಂಭದಲ್ಲಿಯ ನೀರು, ಸೂತ್ರ ತಪ್ಪಿದ ಬೊಂಬೆ, ನಿಜ ನೇತ್ರ ತಪ್ಪಿದ ದೃಷ್ಟಿ;
    ಬೇರು ಮೇಲಾದ ಸಸಿಗೆ ನೀರಿನಾರೈಕೆಯುಂಟೆ ?
    ಇಂತು ಆವ ಕ್ರೀಯಲ್ಲಿಯೂ ಭಾವ ಶುದ್ಧಾತ್ಮನಾಗಿ ಆರೈಕೆ ಬೇಕು, ಭೋಗ ಬಂಕೇಶ್ವರ ಲಿಂಗದ ಸಂಗದ ಶರಣನ ಸುಖ.”
    – ಅಂಗಸೋಂಕಿನ ಲಿಂಗತಂದೆ

Leave a Reply

Your email address will not be published. Required fields are marked *