ಕದಳಿ ವೇದಿಕೆಯಿಂದ ದಾವಣಗೆರೆಯಲ್ಲಿ 170ನೇ ಕಮ್ಮಟ

ಮಮತಾ ನಾಗರಾಜ
ಮಮತಾ ನಾಗರಾಜ

ದಾವಣಗೆರೆ

ಕದಳಿ ಮಹಿಳಾ ವೇದಿಕೆ, ತಾಲೂಕು ಘಟಕ ವತಿಯಿಂದ ವಿದ್ಯಾನಗರದ ಲಯನ್ಸ್ ಕ್ಲಬ್ಬಿನಲ್ಲಿ 170ನೇ ಕಮ್ಮಟ ನಡೆಯಿತು.

ಬಸವಾದಿ ಶರಣರಾದ ಶಂಕರ ದಾಸಿಮಯ್ಯ, ಅಕ್ಕನಾಗಮ್ಮ ಹಾಗೂ ನುಲಿಯ ಚಂದಯ್ಯನವರ ಜಯಂತಿ, ವಚನೋತ್ಸವ ಹಾಗೂ ದತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಚನೋತ್ಸವ ಕಾರ್ಯಕ್ರಮದಡಿಯಲ್ಲಿ ಖ್ಯಾತ ಗಾಯಕಿ ಯಶಾ ದಿನೇಶ್ ಅವರು ಐವರು ಶರಣೆಯರ ವಚನಗಳ ಗಾಯನ ತರಬೇತಿಯನ್ನು ನೀಡಿದರು.

ಲಿಂ. ಸುನಂದಮ್ಮ ಆಲೂರು ಮತ್ತು ಲಿಂ. ಚಂದ್ರಶೇಖರಪ್ಪ ಆಲೂರು ದತ್ತಿ ಕಾರ್ಯಕ್ರಮದಲ್ಲಿ ಕದಳಿ ವೇದಿಕೆಯ ಪೂರ್ವಾಧ್ಯಕ್ಷರು ಹಾಗೂ ಸಲಹಾ ಸಮಿತಿ ಸದಸ್ಯರಾದ ಶರಣೆ ವಿನೋದ ಅಜಗಣ್ಣನವರ ಅವರು “ಶರಣರ ವಚನ-ನವ ಮೆರುಗು” ವಿಷಯ ಕುರಿತು ಮಾತನಾಡುತ್ತ, ಶರಣರು ವಚನಗಳನ್ನು ರಚಿಸಿ ೯೦೦ ವರುಷಗಳಾದರೂ ಇಂದಿಗೂ ನಿತ್ಯ ನೂತನವಾಗಿವೆ. ಜಾಗತಿಕ ಸಾಹಿತ್ಯಕ್ಕೆ ೧೨ನೇಯ ಶತಮಾನದ ಬಸವಾದಿ ಶಿವಶರಣರು ಕೊಟ್ಟ ಅನನ್ಯ ಕೊಡುಗೆ ವಚನ ಸಾಹಿತ್ಯವಾಗಿದೆ.

ಅಂದಿನ ಸಮಾಜದಲ್ಲಿ ಅಗಾಧ ಕಂದಕವನ್ನು ಉಂಟು ಮಾಡಿದ ಕಾಲದಲ್ಲಿ ದಲಿತರು, ಶೋಷಿತ ಕೆಳವರ್ಗದವರು ಮೊದಲ ಬಾರಿಗೆ ಅನುಭಾವ ಮಂಟಪದಲ್ಲಿ ವಚನಗಳ ಮುಖಾಂತರ ಮಾತನಾಡಿದರು. ಜಾತಿ, ಮತ, ಪಂಥಗಳನ್ನು ಬಿಟ್ಟು ಮೇಲು ಕೀಳು ತಾರತಮ್ಯಗಳನ್ನು ಹೊಡೆದು ಹಾಕುತ್ತ, ಸ್ತ್ರೀ ಪುರುಷರೆಂಬ ಅಸಮಾನತೆಯನ್ನು ಅಳಿಸಿ ಸಮಾಜದಲ್ಲಿ ಬದಲಾವಣೆಯ ಕ್ರಾಂತಿಯನ್ನು ಮಾಡಿದರು ಎಂದರು.

ದತ್ತಿ ದಾಸೋಹಿಗಳಾಗಿ ಆಗಮಿಸಿದ್ದ ಕದಳಿ ವೇದಿಕೆಯ ಪೂವಾಧ್ಯಕ್ಷರಾದ ಸುಜಾತ ರವೀಂದ್ರ ಅವರು ತಮ್ಮ ಕುಟುಂಬಗಳಲ್ಲಿ ಮೂಢನಂಬಿಕೆಗಳಿಗೆ ಅವಕಾಶ ಕೊಡದೆ, ತಮ್ಮನ್ನು ಶಿಸ್ತಿನಿಂದ ನಮ್ಮ ತಂದೆ ತಾಯಿಯವರು ಬೆಳೆಸಿದ್ದರು ಎಂದು ಈ ಸಂದರ್ಭದಲ್ಲಿ ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷರಾದ ನಿರ್ಮಲ ಶಿವಕುಮಾರ್ ತಮ್ಮ ನುಡಿಯಲ್ಲಿ, ೧೨ನೇ ಶತಮಾನದ ಶರಣ ಶಂಕರ ದಾಸೀಮಯ್ಯ, ಶರಣೆ ಅಕ್ಕನಾಗಮ್ಮ ಹಾಗೂ ಶರಣ ನುಲಿಯ ಚಂದಯ್ಯ ಕುರಿತು ಮಾಹಿತಿ ನೀಡಿದರು.

ದಾವಣಗೆರೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣ ಕೆ. ಬಿ. ಪರಮೇಶ್ವರಪ್ಪ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿ ತಮ್ಮ ಹಾಗೂ ದತ್ತಿ ಕುಟುಂಬದವರ ಕುರಿತು ಅಭಿಮಾನದ ಮಾತುಗಳನ್ನಾಡಿದರು.

ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಮಮತಾ ನಾಗರಾಜ ಅವರು ವಚನ ಗಾಯನದ ವಚನಗಳಿಗೆ ಅರ್ಥ ಹಾಗೂ ವಿವರಣೆಯನ್ನು ನೀಡಿದರು.

ಕಾರ್ಯಕ್ರಮ ಪ್ರಾರಂಭವನ್ನು ಗಂಗಾಬಿಕೆ ತಂಡದವರು ವಚನ ಪ್ರಾರ್ಥನೆಯ ಮೂಲಕ ಮಾಡಿದರು. ದತ್ತಿ ಹಾಗೂ ದತ್ತಿ ದಾನಿಗಳ ಪರಿಚಯವನ್ನು ಲಕ್ಷ್ಮಿ ಮಲ್ಲಿಕಾರ್ಜುನ್ ಮಾಡಿದರು.
ರತ್ನ ಕಾರ್ಯಕ್ರಮವನ್ನು ನಿರೂಪಿಸಿದರು.

ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಮಲ್ಲಿಕಾರ್ಜುನಪ್ಪ, ಸಿದ್ದೇಶಪ್ಪ, ರುದ್ರಮುನಿ ಅವರು ಕಾರ್ಯಕ್ರಮದಲ್ಲಿದ್ದರು. ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಗಾಯತ್ರಿ ವಸ್ತ್ರದ್, ಸಲಹಾ ಸಮಿತಿ ಸದಸ್ಯರಾದ ಪಂಕಜಾ ದಯಾನಂದ್ ಹಾಗೂ ನಿರ್ಮಲ ಮಹೇಶ್ವರಪ್ಪ ಉಪಸ್ಥಿತರಿದ್ದರು.

ಸಮಿತಿ ಸದಸ್ಯರಾದ ವಿಜಯ ಚಂದ್ರಶೇಖರ, ವಸಂತ ಕೆ. ಆರ್., ನಂದಿನಿ ಗಂಗಾಧರ, ಸೌಮ್ಯ ಸತೀಶ, ಪೂರ್ಣಿಮ ಹಾಗೂ ದತ್ತಿ ಕುಟುಂಬದ ಗಂಗಾಬಿಕ ಪ್ರಭಾಕರ ಹಾಗೂ ಅನಿತಾ ಬಸವರಾಜ ಮತ್ತಿತರರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *