ಧಾರವಾಡ
ಇಂದು ನಗರದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನದ ಸಂಜೆಯ ಸಮಾವೇಶದಲ್ಲಿ ಪೂಜ್ಯ ಇಮ್ಮಡಿ ಸಿದ್ಧರಾಮ ಶ್ರೀಗಳು ‘ಶರಣರಲ್ಲಿ ಸಮಾನತೆ’ ವಿಷಯದ ಮೇಲೆ ಮಾತನಾಡಿದರು.
ಈ ನೆಲದಲ್ಲಿ ಅಸಮಾನತೆ ಮೊದಲು ಶುರುವಾಗಿದ್ದು ಮನೆಯಿಂದಲೇ. ಬಸವಣ್ಣನವರಿಗೆ ಜನಿವಾರ ಹಾಕುವ ಸಂದರ್ಭದಲ್ಲಿ ಅಕ್ಕನಿಗೆ ಕೊಡಿ ಎಂದಾಗ ಅವಳು ಶೂದ್ರಳು ಅವಳಿಗೆ ಕೊಡಲಾಗುವುದಿಲ್ಲ ಎಂದರು. ಅಕ್ಕನಿಗೆ ಸಂಸ್ಕಾರ ಕೊಡದ ಅಪ್ಪನ ಮನೆಯನ್ನೇ ತೊರೆದು ಪ್ರಪ್ರಥಮವಾಗಿ ಮನೆಯಲ್ಲಿಯೇ ಸಮಾನತೆಗಾಗಿ ಹೋರಾಡಿದ ಏಕೈಕ ಶಕ್ತಿಯೆಂದರೆ ಬಸವಣ್ಣ.
ನಿಮ್ಮನ್ನು ಗುಡಿಯೊಳಗೆ ಒಯ್ಯುವ ಕೆಲಸ ಮಾಡಲಿಲ್ಲ ಬದಲಿಗೆ ನಿಮ್ಮ ದೇಹವನ್ನೇ ದೇವಾಲಯ ಮಾಡಿದ ಕ್ರಾಂತಿ ಬಸವಣ್ಣನವರದ್ದು.
ನಮ್ಮ ಮನೆಯಲ್ಲಿ ಹುಟ್ಟಿದ ಸಹೋದರ ದಡ್ಡನಾಗಿದ್ದರೆ, ಯಾರಾದರೂ ಕೆಟ್ಟ ಪರಿಸ್ಥಿತಿಯಲ್ಲಿದ್ದರೆ ನಾವು ಅವರನ್ನು ನಮ್ಮ ಸಂಬಂಧಿಕರು ಎಂದು ಹೇಳಿಕೊಳ್ಳುವುದಿಲ್ಲ.

ಆದರೆ ಅಪ್ಪನು ನಮ್ಮ ಮಾದಾರ ಚನ್ನಯ್ಯ ಎಂದು ಹನ್ನೆರಡನೇ ಶತಮಾನದಲ್ಲಿ ಹೇಳಿದರು. ‘ಜೋಳ ಮುತ್ತಾಗಿಸಿದ ಬಸವ’ ಎಂಬ ಮಾತಿದೆ. ಅಂದರೆ ಬಸವಣ್ಣನವರು ಕಾಯಕವನ್ನು ಎತ್ತಿ ಹಿಡಿದು ಪೂಜ್ಯನೀಯ ಮಾಡಿದವರು.
ಇಳಕಲ್ಲ ಶ್ರೀಗಳು ತಮ್ಮ ಪಟ್ಟಾಧಿಕಾರದ ದಶಮಾನೋತ್ಸವದ ಸಂದರ್ಭದಲ್ಲಿ ತಮ್ಮ ತಲೆಯ ಮೇಲೆ ಸಂವಿಧಾನವನ್ನು ಹೊತ್ತುಕೊಂಡಿದ್ದರು ಕಾರಣ, ಅದರಲ್ಲಿ ವಚನಗಳ ಸಾರವಿದೆ ಎಂಬ ಕಾರಣ. ನಮ್ಮ ಕಾಲದ ಬಸವಣ್ಣನವರು ಯಾರೆಂದರೆ ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲಾ ಪೂಜ್ಯರು ಎಂದು ಹೇಳಲು ಇಚ್ಛೆ ಪಡುತ್ತೇನೆ ಎಂದು ಹೇಳಿದರು.