ಬಸವಕಲ್ಯಾಣ
೧೨ನೇ ಶತಮಾನದಲ್ಲಿ ಸಮಾನತೆ ಸಹೋದರತ್ವ ಮಾವೀಯತೆಯ ತತ್ವಕ್ಕಾಗಿ ಕಲ್ಯಾಣ ಕ್ರಾಂತಿ ನಡೆಯಿತು. ಈ ಕ್ರಾಂತಿಯಲ್ಲಿ ಸಾವಿರಾರು ಶರಣರ ಶರಣೆಯರು ತಮ್ಮ ಪ್ರಾಣ ಬಲಿದಾನಗೈದರು.
ಅವರ ಸ್ಮರಣೆಗಾಗಿ ಪ್ರತಿ ವರ್ಷ ಅಂತರರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಇಲ್ಲಿನ ಹರಳಯ್ಯನವರ ಗವಿಯಲ್ಲಿ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಆಚರಿಸಿಕೊಂಡು ಬರುತ್ತಿದ್ದು
ಈ ವರ್ಷ ಸೆಪ್ಟೆಂಬರ್ ೨೨ ರಿಂದ ಅಕ್ಟೋಬರ್ ೦೨ ರವರೆಗೆ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕಾಗಿ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ. ೨೨ ರಂದು ಮುಂಜಾನೆ ೮-೦೦ ಗಂಟೆಗೆ ಆರಂಭೋತ್ಸವ ಶ್ರೀ ಬಸವೇಶ್ವರ ದೇವಸ್ಥಾನದಿಂದ ಹೂವಿನಿಂದ ಅಲಂಕೃತ ಪಲ್ಲಕ್ಕಿಯಲ್ಲಿ ಪೂಜ್ಯರ ಸಾನಿಧ್ಯದಲ್ಲಿ ವಚನ ಸಾಹಿತ್ಯದ ಮೆರವಣಿಗೆ ನಡೆಯುವುದು.

ಛತ್ರ ಚಾಮರ ಡೊಳ್ಳು ವಚನ ಉಗ್ಘಡನೆ, ಶರಣರ ವೇಷಧಾರಿಗಳು ಉತ್ಸವದ ಮೆರಗನ್ನು ಹೆಚ್ಚಿಸಲಿವೆ ನಂತರ ಪರುಷ ಕಟ್ಟೆಯಲ್ಲಿ ವಚನ ಪಠಣದೊಂದಿಗೆ ಮಂಗಲಗೊಳ್ಳುವುದು.
ಸಾಯಂಕಾಲ ೬ ಗಂಟೆಗೆ ಪೂಜ್ಯ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಅಥಣಿಯವರ ಸಾನಿಧ್ಯ ಪೂಜ್ಯ ಡಾ. ಗಂಗಾಂಬಿಕಾ ಅಕ್ಕನವರ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಉದ್ಘಾಟಿಸುವರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಉಡಿಕೇರಿ ಮುಖ್ಯ ಅಥಿಗಳಾಗಿ ಆಗಮಿಸುವರು ಶಾಸಕರು ಹಾಗೂ ಸ್ವಾಗತ ಸಮಿತತಿ ಅಧ್ಯಕ್ಷರಾದ ಶರಣು ಸಲಗರ ಉದ್ಘಾಟಿಸುವರು.
ಪ್ರತಿ ದಿನ ಮುಂಜಾನೆ ಇಷ್ಟಲಿಂಗ ಪೂಜೆ ಹಾಗೂ ಪ್ರವಚನ ಸಾಯಂಕಾಲ ಅನುಭಾವ ವಚನ ಸಂಗೀತ, ನೃತ್ಯ ನಾಟಕ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ವೇದಿಕೆ : ಬರುವ ಪ್ರಜ್ಯರಿಗೆ ಅತಿಥಿಗಳಿಗಾಗಿ ಸುಮಾರು ೪೦*೪೦ ಅಳತೆಯ ವೇದಿಕೆ ಸಿದ್ಧಗೊಂಡಿದೆ.
ಮಂಟಪ: ಸುಮಾರು ೨ ಸಾವಿರಕ್ಕೂ ಅಧಿಕ ಜನ ಕುಳಿತುಕೊಳ್ಳುವ ಬೃಹತ್ ಮಂಟಪ ನಿರ್ಮಿಸಲಾಗಿದ್ದು. ಮಳೆಗಾಲವಿರುವುದರಿಂದ ತೊಂದರೆಯಾಗಬಾರದೆಂದು ವಾಟರ್ ಪ್ರೂಪ್ ಟೆಂಟ್ ಹಾಕಲಾಗಿರುತ್ತದೆ.
ಗವಿಯ ಸುತ್ತ-ಮುತ್ತಲಿನ ರಸ್ತೆಗೆ ಶರಣರ ಭಾವಚಿತ್ರವಿರುವ ಸ್ವಾಗತ ಕಮಾನುಗಳು ನಿರ್ಮಿಸಲಾಗಿದೆ.
ಪ್ರಸಾದ ಮತ್ತು ವಸತಿ ವ್ಯವಸ್ಥೆ: ಕಾರ್ಯಕ್ರಮಕ್ಕೆ ಆಗಮಿಸುವವರೆಲ್ಲರಿಗೂ ೧೦ ದಿನಗಳ ಕಾಲ ಪ್ರಸಾದ ವ್ಯವಸ್ಥೆ ಇರುತ್ತದೆ. ದೇಸಿ ಊಟ ಇರಲಿದ್ದು ಕುಟ್ಟಿದ ಗೋಧಿ ಹುಗ್ಗಿ ಅನ್ನ ಸಾಂಬಾರು, ಸಜ್ಜೆ ಮತ್ತು ಜೋಳದ ರೊಟ್ಟಿ ಮುಂತಾದವುಗಳು ಹಸಿವನ್ನು ತಣಿಸಲಿವೆ. ಊಟದ ವ್ಯವಸ್ಥೆ ಅಚ್ಚು-ಕಟ್ಟಾಗಿರಲು ಪ್ರತ್ಯೇಕ ಸಮಿತಿ ಹಾಗೂ ಸ್ವಯಂ ಸೇವಕರ ತಂಡಗಳು ಇವೆ. ಬೇರಡೆಯಿಂದ ಆಗಮಿಸುವವರೆಗೆ ವಸತಿ ವ್ಯವಸ್ಥೆ ಇರುತ್ತದೆ.