ಚರ್ಚೆ: ಲಿಂಗಾಯತರು ಗಣಾಚಾರಿಗಳು, ಬೆದರಿಕೆಗಳಿಗೆ ಬಗ್ಗದವರು

ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿನಿಂದ ಸನಾತನಿಗಳ ಬುಡಕ್ಕೆ ಬೆಂಕಿ ಬಿದ್ದಿದೆ

ಗುಳೇದಗುಡ್ಡ

ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿನ ನಂತರ ಹಿಂದುತ್ವ ಸಂಘಟನೆಗಳು ಚಿಗುರುತ್ತಿರುವ ಲಿಂಗಾಯತ ಧರ್ಮವನ್ನು ಚಿವುಟಿ ಹಾಕಲು ಮುಂದಾಗಿವೆ.

ಲಿಂಗಾಯತ ಪೂಜ್ಯರ, ಮುಖಂಡರ, ಇಡೀ ಸಮಾಜದ ಮೇಲೆ ವ್ಯವಸ್ಥಿತ ದಾಳಿ ಶುರುವಾಗಿದೆ. ಬಸವ ಸಂಸ್ಕೃತಿ ಅಭಿಯಾನಕ್ಕೆ ವಿರುದ್ಧವಾಗಿ ತಾಲೂಕು ಮಟ್ಟದಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಮಾಡಲು ಆರೆಸ್ಸೆಸ್ ಜನ ಸಜ್ಜಾಗುತ್ತಿದ್ದಾರೆ.

ಈ ಬೆಳವಣಿಗೆಗಳನ್ನು ಅರ್ಥೈಸಲು ನಾಡಿನ ಪ್ರಮುಖ ಚಿಂತಕ, ಹೋರಾಟಗಾರರಿಗೆ ಬಸವ ಮೀಡಿಯಾ ಕೆಲವು ಪ್ರಶ್ನೆಗಳನ್ನು ಕೇಳಿದೆ. ಇಂದು ಗುಳೇದಗುಡ್ಡದದ ಪ್ರೊ. ಸಿದ್ಧಲಿಂಗಪ್ಪ ಬ. ಬರಗುಂಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಗಮನಿಸಿ – ಈ ಚರ್ಚೆಯಲ್ಲಿ ಹೊಮ್ಮುವ ಅಭಿಪ್ರಾಯಗಳು ಆಯಾ ಲೇಖಕರದು. ಬಸವ ಮೀಡಿಯಾ ಅವುಗಳನ್ನು ಪ್ರಕಟಿಸಲು ಒಂದು ವೇದಿಕೆಯಷ್ಟೆ.

1) ಅಭಿಯಾನ, ಲಿಂಗಾಯತ ಪೂಜ್ಯರ, ಮುಖಂಡರ ಮೇಲೆ ಹಿಂದುತ್ವವಾದಿಗಳಿಗೆ ಇಷ್ಟೊಂದು ಉದ್ವೇಗ ಬಂದಿರುವುದು ಯಾಕೆ?

ವಚನ ಸಂಸ್ಕೃತಿ ಅಭಿಯಾನವು ಇಷ್ಟೊಂದು ಯಶಸ್ವಿಯಾಗುತ್ತದೆಯೆಂದು ಅವರು ಭಾವಿಸಿರಲಿಲ್ಲ. ಮೇಲಾಗಿ ಲಿಂಗಾಯತ ಪೂಜ್ಯರು ಮತ್ತು ಮುಖಂಡರು ಈ ರೀತಿ ಅಭಿಯಾನವನ್ನು ಸಂಘಟಿಸುತ್ತಾರೆಂದು ಅವರು ಭಾವಿಸಿರಲಿಕ್ಕಿಲ್ಲ. ಇದು ನೇರವಾದ ಅವರ ವಿಚಾರಧಾರೆಗೆ ಪೆಟ್ಟು ಕೊಡುತ್ತದೆಯೆಂದು ಅವರು ಭಾವಿಸಿರಬೇಕು.

ಲಿಂಗಾಯತ ತತ್ವಗಳು ಹಿಂದುತ್ವದ ಮೌಢ್ಯದ ದಮನಕಾರಿ ನೀತಿಯನ್ನೇ ಅಲ್ಲಾಡಿಸುವುದರಿಂದ, ಲಿಂಗಾಯತ ಮುಖಂಡರ ಮೇಲೆ ಅವರಿಗೆ ಉದ್ವೇಗವಾಗಿರಬೇಕು. ಅವರ ಬುಡಕ್ಕೆ ಬೆಂಕಿ ಬಿದ್ದ ಹಾಗಾಗಿರುವುದು ಕೂಡ ಕಾಣಬರುವ ಸತ್ಯ.

ಲಿಂಗಾಯತ ತತ್ವಗಳು ಹಿಂದುತ್ವದ ಮೌಢ್ಯದ ದಮನಕಾರಿ ನೀತಿಯನ್ನೇ ಅಲ್ಲಾಡಿಸುತ್ತವೆ

2) ಲಿಂಗಾಯತರ ಮೇಲೆ ಕೆಲವು ಸ್ವಾಮೀಜಿಗಳನ್ನು, ನಾಯಕರನ್ನು ಛೂ ಬಿಟ್ಟಿದ್ದಾರೆ. ಲಿಂಗಾಯತರ ವಿರುದ್ಧ ಸಮಾವೇಶ, ಹೋರಾಟ ಮಾಡುವ ಬೆದರಿಕೆ ಹಾಕಿದ್ದಾರೆ. ಇವರ ಉದ್ದೇಶವೇನು?

ಕೈಲಾಗದವನು ಮೈಯನ್ನು ಪರಚಿಕೊಂಡ ಎಂಬ ಗಾದೆಯ ಮಾತೇ ಇದೆ. ಪ್ರತ್ಯಕ್ಷವಾಗಿ ಎದುರಾ ಎದುರು ಹೋರಾಟ ಸಾಧ್ಯವಿಲ್ಲದಿದ್ದಾಗ, ಇಲ್ಲಿಯವರೆಗೆ ನಮ್ಮವರ ಹಾಗೆ ನಟಿಸಿರುವ ಕೆಲವು ಸ್ವಾಮೀಜಿಗಳನ್ನು ಆಯ್ದುಕೊಂಡು ನಮ್ಮವರ ಮೇಲೆ ಛೂ ಬಿಟ್ಟಿದ್ದಾರೆ. ಇದರ ಹಿಂದೆ ಯಾವುದೋ ಪ್ರಲೋಬನೆ ಇದೆ ಎಂಬುದು ನಮ್ಮ ಗುಮಾನಿ.

ಏನಾದರೂ ಮಾಡಿ ಬಸವಾಭಿಮಾನಿಗಳನ್ನು ಹೆದರಿಸುವ ಕಾರಣವಾಗಿ ನಮ್ಮ ವಿರುದ್ಧ ಸಮಾವೇಶ, ಹೋರಾಟ ಮಾಡುವ ಅನುಚಿತ ಮಾರ್ಗ ಅನುಸರಿಸುತ್ತಿದ್ದಾರೆ. ಆದರೆ ಅವರ ಕುಟಿಲ ಉದ್ಧೇಶ ಈಡೇರದು. ಲಿಂಗಾಯತ ಅಭಿಯಾನದಲ್ಲಿ ಸ್ವಯಂಪ್ರೇರಿತ, ಸ್ವಯಂ ಖರ್ಚಿನಿಂದ ಜನ ಬಂದವರಾಗಿದ್ದಾರೆ. ಒಂದು ರೀತಿ ಇವರು ಗಣಾಚಾರಿಗಳು, ಕೂಡಲಸಂಗನ ಶರಣರು ಸ್ವತಂತ್ರಧೀರರು. ಅದಕ್ಕೆ ಅವರ ಬೆದರಿಕೆಯ ಉದ್ಧೇಶ ಸಫಲವಾಗದು.

ಕೂಡಲಸಂಗನ ಶರಣರು ಸ್ವತಂತ್ರಧೀರರು…. ಅವರ
ಬೆದರಿಕೆ ಸಫಲವಾಗದು

3) ಲಿಂಗಾಯತ ಪೂಜ್ಯರ ಹಾಗೂ ಮುಖಂಡರ ಮೇಲೆ ಬಳಕೆಯಾಗುತ್ತಿರುವ ಭಾಷೆಗೆ ನಿಮ್ಮ ಪ್ರತಿಕ್ರಿಯೆ ಏನು?

ಲಿಂಗಾಯತ ಪೂಜ್ಯರ ಹಾಗೂ ಮುಖಂಡರ ಮೇಲೆ ಬಳಕೆಯಾಗುತ್ತಿರುವ ಭಾಷೆ ಖಂಡನೀಯ. ಇದು ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಆಡಿದ ಮಾತು ಪ್ರಾದೇಶಿಕ ಭಾಷೆಯ ಮಾತು ಎಂದು ಅವರು ಸಮರ್ಥಿಸಿಕೊಳ್ಳುವದಾದರೆ, ಅದೇ ನೆಲದಲ್ಲಿನ ನಮಗೆ ಇನ್ನೂ ಒರಟಾದ ಅಶ್ಲೀಲವಾದ ಶಬ್ದಗಳು ನಮ್ಮ ಮನದಲ್ಲಿ ಹುದುಗಿವೆ. ಆದರೆ ಅವನ್ನು ನಾವು ಹೊರಬಿಟ್ಟಿಲ್ಲ ಅಷ್ಟೇ.

ತಾಳ್ಮೆಗೂ ಒಂದು ಮಿತಿ ಇದೆ. ಅದನ್ನು ಉಲ್ಲಂಘಿಸಿದರೆ ಮಾನ ಮರ್ಯಾದೆಯನ್ನು ಬದಿಗಿರಿಸಿ ನಾವೂ ಹೋರಾಟಕ್ಕಿಳಿಯ ಬೇಕಾಗುತ್ತದೆ. ಸ್ವತಃ ಅಂತಹ ಮಾತುಗಳು ನಾಗರಿಕ ಸಮಾಜದ್ದಲ್ಲ; ಅದರಲ್ಲೂ ಖಾವಿಧಾರಿಗಳು ಉಪಯೋಗಿಸುವಂತಹುದಲ್ಲ ಎಂದು ನ್ಯಾಯಾಲಯಗಳೇ ಹೇಳುತ್ತಿವೆ.

ತಾಳ್ಮೆಗೂ ಮಿತಿ ಇದೆ… ಮಾನ ಮರ್ಯಾದೆಯನ್ನು
ಬದಿಗಿರಿಸಿ ನಾವೂ ಹೋರಾಟಕ್ಕಿಳಿಯ ಬೇಕಾಗುತ್ತದೆ.

ಕನ್ನೇರಿ ಸ್ವಾಮಿಯ ವಿರುದ್ದ ಬಸವ ಭಕ್ತರ ಆಕ್ರೋಶ

4) ಈ ಸಂದರ್ಭದಲ್ಲಿ ಲಿಂಗಾಯತ ಪೂಜ್ಯರ ಹಾಗೂ ಮುಖಂಡರ ಪರವಾಗಿ ಬಸವ ಸಂಘಟನೆಗಳು ನಿಲ್ಲಬೇಕೆ? ಅವರೇನು ಮಾಡಬೇಕು?

ಈ ಸಂದರ್ಭದಲ್ಲಿ ಲಿಂಗಾಯತ ಪೂಜ್ಯರ ಹಾಗೂ ಮುಖಂಡರ ಪರವಾಗಿ ಬಸವಪರ ಸಂಘಟನೆಗಳು ಖಡ್ಡಾಯವಾಗಿ ನಿಲ್ಲಬೇಕು. ಆ ಮುಖಂಡರು ಬಸವತತ್ವಕ್ಕಾಗಿ ಹೋರಾಡಿದವರಾದುದರಿಂದ, ಅವರ ಮೇಲಿನ ದಾಳಿ ಎಲ್ಲ ಬಸವಾಭಿಮಾನಿಗಳ ಮೇಲೆ ಮಾಡಿದ ದಾಳಿಯಾಗಿದೆ. ಎಲ್ಲ ಬಸವಪರ ಸಂಘಟನೆಗಳೂ ಈ ಸಂದರ್ಭದಲ್ಲಿ ಒಂದಾಗಿ ನಿಂತು ಒಕ್ಕಟ್ಟನ್ನು ಪ್ರದರ್ಶಿಸಬೇಕು.

ಪೂಜ್ಯರ ಮೇಲಿನ ದಾಳಿ ಎಲ್ಲ ಬಸವಾಭಿಮಾನಿಗಳ ಮೇಲೆ ಮಾಡಿದ ದಾಳಿಯಾಗಿದೆ

5) ಈ ಬೆಳವಣಿಗೆಗೆಳಿಂದ ಲಿಂಗಾಯತರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆಯೇ? ಅದನ್ನು ಉಳಿಸಿಕೊಳ್ಳುವುದು ಹೇಗೆ?

ಇಂತಹ ಘಟನೆಗಳು ಹಲವಾರು ಬಾರಿ ನಡೆದದ್ದು ಇತಿಹಾಸದಲ್ಲಿ ದಾಖಲಾಗಿವೆ. ಲಿಂಗಾಯತರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಈಗ ಧಕ್ಕೆ ಬಂದ ಹಾಗೆಯೇ. ಇದನ್ನು ವ್ಯಷ್ಠಿ ಹಾಗೂ ಸಮಷ್ಠಿ ರೀತಿಯಲ್ಲಿ ಎದುರಿಸಿ ನಮ್ಮ ಲಿಂಗಾಯತತ್ವನ್ನು ಉಳಿಸಿಕೊಳ್ಳಬೇಕು. ಇಂಥ ಧಾರ್ಮಿಕ ಸ್ವಾತಂತ್ರ್ಯವನ್ನು ಲಿಂಗಾಯತ ತತ್ವಗಳನ್ನು ತನು-ಮನಗಳಿಂದ ಪ್ರಾಮಾಣಿಕವಾಗಿ ಆಚರಿಸುವ ಮೂಲಕ ಉಳಿಸಿಕೊಳ್ಳಬೇಕು.


ಇಂತಹ ಘಟನೆಗಳು ಹಲವಾರು ಬಾರಿ ನಡೆದದ್ದು ಇತಿಹಾಸದಲ್ಲಿ ದಾಖಲಾಗಿವೆ.

6) ಸಾರ್ವಜನಿಕ ಸಂವಾದದಲ್ಲಿ ನಾವೂ ಸಭ್ಯತೆ ಕಳೆದುಕೊಳ್ಳಬೇಕೇ? ನಮ್ಮ ಸೈದ್ಧಾಂತಿಕ ವಿರೋಧಿಗಳ ಮೇಲೆ ಇದೇ ಭಾಷೆ ಬಳಸಬೇಕೇ?

ಸಾಮಾನ್ಯವಾಗಿ ನಾವು ಬಸವತತ್ವಕ್ಕೆ ಬದ್ಧರಾಗಿ ನುಡಿದರೆ ಲಿಂಗ ಮೆಚ್ಚುವ ರೀತಿಯಲ್ಲಿ ನಡೆದುಕೊಳ್ಳಬೇಕು. ಆದರೆ ಇಲ್ಲಿ ನಮ್ಮೆದುರಿಗಿನ ವಿರೋಧಿಗಳು ನಮ್ಮನ್ನು ಕೆಣಕುತ್ತಿರುವುದರಿಂದ, ಕೆಲವರು ಕೋಪಾವಿಷ್ಠರಾಗಿ ಗಣಾಚಾರದ ನಿಟ್ಟಿನಲ್ಲಿ ಅವರ ಭಾಷೆಯಲ್ಲಿಯೇ ಉತ್ತರ ಕೊಡಬಹುದು. ಅದನ್ನು ತಡೆಯಲಿಕ್ಕೆ ಸಾಧ್ಯವಿಲ್ಲ. ಹಾಗೆಯೇ ಇನ್ನೂ ಕೆಲವು ಸಭ್ಯರು ಶಾಂತವಾಗಿ ಪ್ರತಿಕ್ರಿಯಿಸಬಹುದು. ಆದರೆ ಇದು ಕೈಲಾಗದವರ ಸತ್ತ ಧ್ವನಿಯಾಗಬಾರದು. ನಿರ್ಭಯದ ಸಭ್ಯ ಭಾಷೆಯಾಗಬೇಕು.

7) ಈ ಸಮಯದಲ್ಲಿ ಬಸವಾದಿ ಶರಣರಿದ್ದರೆ ಏನು ಮಾಡುತ್ತಿದ್ದರು?

ಈ ಸಮಯದಲ್ಲಿ ಬಸವಾದಿ ಶರಣರಿದ್ದರೆ ಎರಡು ಬಗೆಯಲ್ಲಿ ಬಹುಶಃ ಪ್ರತಿಕ್ರಿಯಿಸುತ್ತಿದ್ದರೆನಿಸುತ್ತದೆ. ಕೇವಲ ಇದು ನಮ್ಮ ಊಹೆ. ಒಂದು ಅಪ್ಪ ಬಸವಣ್ಣ, ಅಲ್ಲಮ ಮೊದಲಾದವರು ತಾತ್ವಿಕವಾಗಿ, ಶಾಂತವಾಗಿ ಪ್ರತಿಕ್ರಿಯಿಸುತ್ತಿದ್ದರು. ವೀರ ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯನಂಥವರು ಉಗ್ರ ಪ್ರತಿಭಟನೆಯನ್ನು ಮಾಡುತ್ತಿರಬಹುದು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
8 Comments
  • ಬಿಜೆಪಿಯಲ್ಲಿ ಈಗ ಎರಡು ತಂಡಗಳಾಗಿವೆ. ಯಡಿಯೂರಪ್ಪ ಬಳಗವನ್ನು ತುಳಿಯಲು,ಯತ್ನಾಳ ಬಳಗ ಲಿಂಗಾಯತ ವಿಷಯವನ್ನು ದೊಡ್ಡ ವಿಷಯವಾಗಿ ತೊರಿಸಿ ಪ್ರಚಾರ ಪಡೆಯುವ ಪ್ರಯತ್ನ ನಡಿತಾಯಿದೆ.

    • ಯತ್ನಾಳ್ ಹಾಗೂ ಯಡಿಯೂರಪ್ಪ ಇಬ್ಬರು ಅಧಿಕಾರ ದಾಹಿಗಳು, ನಾಮಧಾರಿಗಳ ಮೂಗಿನ ಮೇಲಿನ ತುಪ್ಪಕ್ಕೆ ಸೀಮಿತರಾಗೋದು ಖಂಡಿತ, ಪುರೋಹಿತರ ಒಬ್ಬ ಗದ್ದುಗೆ ಹಿಡಿಯುತ್ತಾನೆ

  • ಈ ಎಲ್ಲ ಬೆಳವಣಿಗೆಗಳು ಕರ್ನಾಟಕದಲ್ಲಿ ಲಿಂಗಾಯತ ವೀರಶೈವ ಮಧ್ಯ ಬಿರುಕು ಬೀಳಿಸುವ ಕಾಂಗ್ರೆಸ್ಸಿನ ವ್ಯವಸ್ಥಿತ ಸಂಚಾಗಿದೆ ಇದಕ್ಕೆ ಲಕ್ಷ ಕೊಡದೆ ಲಾಂಗಾಯತ ಸಮುದಾಯವನ್ನು ಬಲಿಷ್ಠ ಮಾಡಿ ರಾಜಕೀಯ ಚುಕ್ಕಾಣಿ ಹಿಡಿಯಲು ಎಲ್ಲ ಮಠಆ ಧೀಷರು ಪ್ರಯತ್ನಿಸಬೇಕು

    • ಈ ಹಿಂದಿನಿಂದಲೂ ಲಿಂಗಾಯತರ ಮೇಲೆ ಅವ್ಯಾಹತವಾಗಿ ದಬ್ಬಾಳಿಕೆಗಳು ನಿರಂತರವಾಗಿ ನಡೆಯುತ್ತಲೇ ಬಂದಿವೆ.ಅದರಲ್ಲಿ ಈ ಕನ್ನೇರಿ ಪೀಠಾಧಿಪತಿ ಆರ್.ಎಸ್.ಎಸ್.ಕೃಪಾಪೋಷಿತದಲ್ಲಿ ನಾಟಕವಾಡುತ್ತಿದ್ದಾನೆ,ನಾ ಆಡಿದ್ಟೆ ಆಟ ಮಾಡಿದ್ಡೆ ಮಾಟ ಎಂಬ ಹಮ್ಮಿನಲ್ಲಿ ಹೊಂಬತನದ ಅವಾಚ್ಯ ಶಬ್ದಗಳಿಂದ ಬೈದದ್ದು ಖಂಡನಾರ್ಹ,ನಾವು ಎಂದಿಗೂ ಸಹಿಸುವುದಿಲ್ಲ.ಅದಕ್ಕೆಂದೇ ನಮ್ಮ ಗಣಾಚಾರಿ ಗಣ ಸಿದ್ದವಿದೆ,ಕನ್ನೇರಿಯಂಥಹ ನೂರಾರು ಕುಹಕಿಗಳು ಎದುರಾದರೂ ಎದುರಿಸಲು ಬದ್ಧರಾಗಿದ್ದೇವೆ.ನಾವು ರಣಹೇಡಿಗಳಲ್ಲ ನೆನಪಿರಲಿ ನಾವು ಯಾರ ಹೆಸರಿಗೂ ಬರಲ್ಲ, ಸುಮ್ಮನೆ ನಮ್ಮನ್ನು ಕೆಣಕಿದರೆ ಕೈಕಟ್ಟಿ ಕೂಡುವುದ್ದಿಲ್ಲ.

  • ವಚನ ಗಾಯನ, ವಚನ ವಿವರಣೆ, ಪ್ರಬಂಧ ಸ್ಪರ್ಧೆಗಳನ್ನು ನಡೆಯಿಸಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತರಲ್ಲಿ ಮಾಹಿತಿ ಪ್ರಚಾರ ಮತ್ತು ಪ್ರಸಾರ ಆಗುತ್ತದೆ.
    ಈ ಸ್ಪರ್ಧೆಯನ್ನು ಶಿಕ್ಷರಿಕ ಗಾಗಿ ಕೂಡ ಬೇರೆ ನಡೆಸಬೇಕ.

    ನಮ್ಮ ಬೆಂಬಲದ ಜೊತೆ ಉಳಿದ ಎಲ್ಲರ ಬೆಂಬಲ ಪಡೆಯಬೇಕು. ವಿರೋಧಿಗಲ್ ಗೆ ಅವಕಾಶ ಇರುವುದಿಲ್ಲ

  • ಎಲ್ಲಾ ಬಸವ ಪರಂಪರೆ ಮಠ ಮಂದಿರಗಳಲ್ಲಿ ಕಡ್ಡಾಯವಾಗಿ ಇಷ್ಟಲಿಂಗ ಪೂಜೆ ಶಿಬಿರಗಳನ್ನು ಮಾಡುವದು ಅದು ನಿರಂತರ ನಡೆಯಬೇಕು. ಅದರಿಂದ ಇನ್ನೂ ನಮ್ಮ ಸಮಾಜ ಗಟ್ಟಿಯಾಗುತ್ತದೆ.
    Social media ದಲ್ಲಿ ಹಿಂದೂ ಸಮರ್ಥನೆ ಮಾಡುವವರು ನಮ್ಮ ಚಿಂತನೆ ಮತ್ತು ಸ್ವಾಮೀಜಿಗಳಿಗೆ ಕೆಟ್ಟದಾಗಿ ಕಾಮೆಂಟ್ ಮಾಡ್ತಾ ಇದ್ದೀರಿ. ಅದಕ್ಕೆ ಪ್ರತಿಯಾಗಿ ನಾವು ಒಗ್ಗಟ್ಟಿನಿಂದ ರಿಪ್ಲೈ ಕೊಡಬೇಕು

  • ಹಿಂದೂ ಬಸವ ಸಂಸ್ಕೃತಿ ಎಂಬ ಈ ಪದವನ್ನು ಹುಟ್ಟಿಸಿದ ಆ ಸೂಲಿಬೆಲೆ ಎನ್ನುವ ಮುಟ್ಟಾಳನಿಗೆ ಬುದ್ದಿ ಕಲಿಸಬೇಕಾಗಿದೆ, ಅದು ಕಠಿಣವಲ್ಲ ಒಮ್ಮೆ ಝಾಡಿಸಿ ಇನ್ನೊಮ್ಮೆ ಇಂಥ ಕೆಲಸಕ್ಕೆ ಕೈ ಹಾಕಿದರೆ ಜೋಕೆ ಎಂದು ಎಚ್ಚರಿಸಬೇಕು.

Leave a Reply

Your email address will not be published. Required fields are marked *