ಬೆಳಗಾವಿ:
ತಾಲ್ಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಕಬ್ಬು ಬೆಳೆಗಾರ ರೈತರು ನಡೆಸಿರುವ ಹೋರಾಟಕ್ಕೆ ಲಿಂಗಾಯತ ಮಠಾದೀಶರ ಒಕ್ಕೂಟ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನೆಗಳು ಗುರುವಾರ ಭಾಗವಹಿಸಿ ಬೆಂಬಲ ಸೂಚಿಸಿದವು.

ಸಕ್ಕರೆ ಕಾರ್ಖಾನೆಗಳಿಂದ ಪ್ರತಿ ಟನ್ನಿಗೆ ಯೋಗ್ಯ ಬೆಲೆಯನ್ನು ಸರಕಾರಗಳು ನಿಗದಿಪಡಿಸಬೇಕೆಂದು, ಹಿರೇಬಾಗೇವಾಡಿ ಸೇರಿದಂತೆ ರಾಜ್ಯದ ಹಲವಾರು ಕಡೆಗಳಲ್ಲಿ ರೈತರು ಬೃಹತ್ ಹೋರಾಟ ನಡೆಸಿದ್ದಾರೆ.

ಮಠಾಧೀಶರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಂದಿಗುಂದದ ಪೂಜ್ಯ ಶಿವಾನಂದ ಮಹಾಸ್ವಾಮಿಗಳು, ಬೆಳಗಾವಿಯ ನಾಗನೂರ ರುದ್ರಾಕ್ಷಿಮಠದ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಶೇಗುಣಿಸಿಯ ಪೂಜ್ಯ ಮಹಾಂತಪ್ರಭು ಸ್ವಾಮಿಗಳು, ಅರಳಿಕಟ್ಟಿ ಪೂಜ್ಯರು, ಶಿವಬಸವ ದೇವರು ಹಾಗೂ ಸಿದ್ಧಬಸವ ಸ್ವಾಮಿಗಳು ಭಾಗವಹಿಸಿ ಮಾತನಾಡಿದರು.
ಜಾಗತಿಕ ಲಿಂಗಾಯತ ಮಹಾಸಭಾದಿಂದ ಜಿಲ್ಲಾಧ್ಯಕ್ಷರು ಹಾಗೂ ನ್ಯಾಯವಾದಿಗಳಾದ ಬಸವರಾಜ ರೊಟ್ಟಿ, ಮೋಹನ ಗುಂಡ್ಲೂರ, ಸಿ.ಎಂ. ಬೂದಿಹಾಳ, ಮುರಿಗೆಪ್ಪ ಬಾಳಿ, ಎಫ್.ಆರ್. ಪಾಟೀಲ, ಬಿ. ಜಿ. ವಾಲಿ ಇಟಗಿ ಮತ್ತಿತರ ಪಧಾದಿಕಾರಿಗಳು ಭಾಗವಹಿಸಿದ್ದರು.

ಕಿತ್ತೂರಲ್ಲಿ ನಡೆದಿರುವ ರೈತ ಹೋರಾಟದಲ್ಲಿ ಬುಧವಾರ ಬೈಲೂರು ನಿಷ್ಕಲ ಮಂಟಪದ ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳು, ಕಿತ್ತೂರು ಕಲ್ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಜನವಾಡದ ಮಲ್ಲಿಕಾರ್ಜುನ ಸ್ವಾಮೀಜಿ ಭಾಗವಹಿಸಿ ಮಾತಾಡಿ ಬೆಂಬಲ ಸೂಚಿಸಿದರು.
