ಚಿತ್ರದುರ್ಗ:
ನಗರದ ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಕಾರ್ತಿಕ ಮಾಸದ ಈ ಸಂದರ್ಭದಲ್ಲಿ ಶ್ರೀಮಠವು ಅಕ್ಟೋಬರ್ ೨೩, ೨೦೨೫ರಿಂದ ನವೆಂಬರ್ ೨೩, ೨೦೨೫ರವರೆಗೆ ೩೩ದಿನಗಳ ಕಾಲ ವಚನ ಕಾರ್ತಿಕ ಕಾರ್ಯಕ್ರಮ ನಡೆಸುತ್ತಿದೆ.
ಮುಂಚೂಣಿಯಲ್ಲಿಲ್ಲದ, ಅಲಕ್ಷಿತ, ಇದುವರೆಗೂ ಕೆಲ ವಚನಕಾರರ ಹೆಸರುಗಳೇ ಗೊತ್ತಿರದ ೬೬ ಶರಣ ಹಾಗೂ ಶರಣೆಯರ ವ್ಯಕ್ತಿತ್ವದ ಬಗೆಗೆ ಮಹಾಕರ್ತೃ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಪ್ರತಿ ದಿನ ಸಂಜೆ ೬-೩೦ರಿಂದ ಇಬ್ಬರು ವಚನಕಾರರ ಬಗೆಗೆ ವಚನ ಕಾರ್ತಿಕ ಶೀರ್ಷಿಕೆಯಡಿಯಲ್ಲಿ ವಿಷಯ ಚಿಂತನೆ, ವಚನಪಠಣ ಹಾಗೂ ಗಾಯನವನ್ನು ಆಯೋಜಿಸಲಾಗಿದೆ.

ಈ ಹಿನ್ನೆಲೆಯಲ್ಲಿ ನವೆಂಬರ್ ೨೩ರ ಸಮಾರೋಪದ ಸವಿನೆನಪಿಗಾಗಿ ಎರಡು ವಿಭಾಗಗಳಲ್ಲಿ ವಚನ ಕಂಠಪಾಠ ಸ್ಪರ್ಧೆ ಆಯೋಜಿಸಲಾಗಿದೆ.
ಭಾಗ ಒಂದರಲ್ಲಿ ೬೬ಶರಣ ಶರಣೆಯರ ಹೆಸರು, ಕಾಲ, ವಚನದ ಅಂಕಿತ ಹಾಗೂ ವಚನಗಳ ಸಂಖ್ಯೆ ಮತ್ತು ಪ್ರತಿ ವಚನಕಾರರ ಒಂದೊಂದು ವಚನದ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿದೆ.
ಭಾಗ-೨ರಲ್ಲಿ ೬೬ವಚನಕಾರರ ಹೆಸರು ಹಾಗೂ ೫೦೦ ವಚನಗಳ ಕಂಠಪಾಠ ಸ್ಪರ್ಧೆಯನ್ನು ದಿನಾಂಕ: ೨೩-೧೧-೨೦೨೫ ನೇ ಭಾನುವಾರ ಸಮಯ: ಬೆಳಗ್ಗೆ ೯-೦೦ಗಂಟೆಗೆ ಶ್ರೀ ಮುರುಘಾಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರ ಹಾಗೂ ಬಸವೇಶ್ವರ ಸಭಾಂಗಣದಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ.
ಸ್ಪರ್ಧೆಯ ವಿವರ ಈ ಕೆಳಕಂಡಂತಿದೆ:
ವಿಭಾಗ-೧ರಲ್ಲಿ: ೬೬ ವಚನಕಾರರ ಹೆಸರು, ಕಾಲ, ವಚನಗಳ ಸಂಖ್ಯೆ, ಅಂಕಿತ ಹಾಗೂ ಒಂದೊಂದು ವಚನ ಹೇಳಬೇಕು.
ವಿಭಾಗ-೨ರಲ್ಲಿ : ೬೬ ವಚನಕಾರರ ೫೦೦ ವಚನಗಳನ್ನು ಹೇಳಬೇಕು.
*ವಯಸ್ಸಿನ ಮಿತಿ ಇರುವುದಿಲ್ಲ
* ಪ್ರತಿಯೊಬ್ಬರು ತಾವು ಹೇಳುವ ವಚನಗಳನ್ನು ಬರಹ ರೂಪದಲ್ಲಿ ತಂದು ತೀರ್ಪುಗಾರರಿಗೆ ಅಥವಾ ನಿರ್ವಾಹಕರಿಗೆ ಒಂದು ಪ್ರತಿ ನೀಡತಕ್ಕದ್ದು.
*ವಚನಗಳನ್ನು ರಾಗವಾಗಿ ಹೇಳುವಂತಿಲ್ಲ.
*ವಚನ ವಾಚನ ಮಾತ್ರ ಮಾಡಬೇಕು.
*ತಪ್ಪು ಉಚ್ಚಾರಣೆ ಮತ್ತು ಪುನರಾವರ್ತನೆ ಮಾಡುವಂತಿಲ್ಲ.
*ವಚನ ಪ್ರಸ್ತುತ ಪಡಿಸಲು ಕಾಲಮಿತಿ ಇರುವುದಿಲ್ಲ.
*ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ.
ಬಹುಮಾನ ವಿವರ ಭಾಗ ೧ರಲ್ಲಿ ಪ್ರಥಮ ರೂ.೨೦೦೦, ದ್ವಿತೀಯ ರೂ.೧,೫೦೦, ತೃತೀಯ ರೂ.೧೦೦೦ ಹಾಗೂ ಸಮಾಧಾನಕರ ರೂ.೫೦೦.
ಭಾಗ ೨ರಲ್ಲಿ ಪ್ರಥಮ ರೂ.೧೦,೦೦೦, ದ್ವಿತೀಯ ರೂ.೭,೫೦೦, ತೃತೀಯ ರೂ.೫೦೦೦ ಹಾಗೂ ಸಮಾಧಾನಕರ ರೂ.೨, ೫೦೦ ನಿಗಧಿ ಪಡಿಸಲಾಗಿದೆ.
ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಮತ್ತು ಭಾಗವಹಿಸಿದವರೆಲ್ಲರಿಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ದಿನಾಂಕ ೨೦-೧೧-೨೦೨೫ ಗುರುವಾರ ಕೊನೆಯ ದಿನವಾಗಿದೆ. ಈ ಕೆಳಕಂಡ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಲಾಗಿದೆ. ೯೪೪೮೨೯೫೯೦೧, ೯೯೪೫೯೫೦೩೦೩, ೯೯೦೨೯೨೯೭೦೧, ೯೪೪೯೯೭೪೦೦೪, ೯೭೪೦೦೩೭೧೭೬, ೯೪೪೮೬೬೪೯೩೨.
