ಬೀದರ:
ನೀಲಮ್ಮನ ಬಳಗ ಗೋಟಾ೯ ಗ್ರಾಮದ ಅಧ್ಯಕ್ಷೆಯಾಗಿ ವಿಜಯಲಕ್ಷ್ಮಿ ಭೀಮಣ್ಣ ರಾಜೋಳೆ ಅವರನ್ನು ನೇಮಕ ಮಾಡಲಾಗಿದೆ ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಮಹಾಸ್ವಾಮೀಜಿ ತಿಳಿಸಿದರು.
12ನೇ ಶತಮಾನ ಜಗತ್ತು ಕಂಡರಿಯದ ಕೇಳರಿಯದ ಅದ್ಭುತ ಕ್ರಾಂತಿ ಬಸವಕಲ್ಯಾಣದಲ್ಲಿ ನಡೆಯಿತು.
ಗುರು ಬಸವಣ್ಣನವರು ಕಲ್ಯಾಣದಲ್ಲಿ ಅನುಭವ ಮಂಟಪ ಕಟ್ಟಿ ಸರ್ವಸಮಾನತೆ ಶೋಷಣಾರಹಿತ ಸಮಾಜ ನಿರ್ಮಿಸಲು ಹಗಲಿರುಳು ಶ್ರಮಿಸಿದರು. ಗುರುದೇವರ ಈ ಮಹತ್ಕಾರ್ಯಕ್ಕೆ ಶಕ್ತಿಯಾಗಿ ನಿಂತವರು ನೀಲಾಂಬಿಕಾ ತಾಯಿ.

ಸಾಧನೆ ಮಾಡಬೇಕಾದರೆ ಮನೆ ತೊರೆದು ಹೋಗಬೇಕಾಗಿಲ್ಲ, ಗುಡ್ಡಗಾಡುಗಳಲ್ಲಿ ನಿಂತು ತಪಸ್ಸು ಮಾಡಬೇಕಾಗಿಲ್ಲ, ಸಂಸಾರದಲ್ಲಿ ಇದ್ದುಕೊಂಡೇ ಸದ್ಗತಿಯ ಪಥವನ್ನು ತೋರಿಸಿಕೊಟ್ಟವರು. ನೀಲಾಂಬಿಕಾತಾಯಿಯ ಆದರ್ಶ ಸಮಾಜಕ್ಕೆ ತಿಳಿಸಬೇಕು ಎಂಬ ಸದುದ್ದೇಶದಿಂದ ನೀಲಮ್ಮನ ಬಳಗ ಹುಟ್ಟು ಹಾಕಿದವರು ಲಿಂ. ಪೂಜ್ಯ ಅಕ್ಕ ಅನ್ನಪೂರ್ಣತಾಯಿಯರು.
ಅಕ್ಕನವರ ಸಂಕಲ್ಪದಂತೆ ಇಂದು ನಾಡಿನಾದ್ಯಂತ ನೀಲಮ್ಮನ ಬಳಗ ಪ್ರಾರಂಭಿಸಿದ್ದು ಗೋರಟಾ ಗ್ರಾಮದ ನೀಲಮ್ಮನ ಬಳಗದ ಅಧ್ಯಕ್ಷೆಯಾಗಿ ಶರಣೆ ವಿಜಯಲಕ್ಷ್ಮಿ ಭೀಮಣ್ಣ ರಾಜೋಳೆಯವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿಜಯಲಕ್ಷ್ಮಿ ರಾಜೋಳೆ, ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ ಕೊಟ್ಟಿರುವ ಜವಾಬ್ದಾರಿ ಶಿರಸಾವಹಿಸಿ ಪಾಲಿಸುತ್ತೇನೆ. ಸ್ಥಾನ ದೊರಕಿದ್ದು ದೊಡ್ಡದಲ್ಲ ಆ ಸ್ಥಾನಕ್ಕೆ ಯೋಗ್ಯ ರೀತಿಯಿಂದ ಕಾರ್ಯ ಮಾಡಿ ಆ ಸ್ಥಾನದ ಘನತೆ ಗೌರವ ಹೆಚ್ಚಿಸುವುದು ದೊಡ್ಡದು.
ಅಕ್ಕನವರ ಸಂಕಲ್ಪದಂತೆ ಪೂಜ್ಯರು ಕಾರ್ಯ ಮಾಡುತ್ತಿರುವರು. ಮಕ್ಕಳಲ್ಲಿ ಮಕ್ಕಳಾಗಿ, ಹಿರಿಯರಲ್ಲಿ ಹಿರಿಯರಾಗಿ, ಹೆಣ್ಣು- ಗಂಡು ಎಂಬ ತಾರತಮ್ಯವಿಲ್ಲದೆ ಸರ್ವರನ್ನು ತನ್ನವರೆಂದು ಇಂಬಿಟ್ಟುಕೊಳ್ಳುವ ಗುಣ ಪೂಜ್ಯರಲ್ಲಿದೆ.
ನೀಲಮ್ಮನ ಬಳಗದ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಬಸವಾದಿ ಶರಣರ ತತ್ವ ಜನಮಾನಸಕ್ಕೆ ಬಿತ್ತುವ ಕಾರ್ಯ ಮಾಡುತ್ತೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಿಲಮ್ಮನ ಬಳಗದ ಶರಣಿಯರೆಲ್ಲ ಸೇರಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ವಿಜಯಲಕ್ಷ್ಮೀ ರಾಜೋಳೆ ಅವರನ್ನು ಅಭಿನಂದಿಸಿದರು.
