ಬೆಳಗಾವಿ:
ವೈದ್ಯ ವಿಜ್ಞಾನವು ಆಧುನಿಕತೆಯ ಆವಿಷ್ಕಾರ ಎಂದೇ ಎಲ್ಲರ ವಾದ. ಆದರೆ ಹನ್ನೆರಡನೇ ಶತಮಾನದ ಬಸವಾದಿ ಶರಣರಿಗೆ ಮಾನವ ಶರೀರದ ರಚನೆ, ಅಂಗಾಂಗಗಳ ಕಾರ್ಯವೈಖರಿ ಮತ್ತು ಭ್ರೂಣಾವಸ್ಥೆಯಿಂದ ಮುಪ್ಪಿನವರೆಗೆ ದೇಹದ ಬದಲಾವಣೆಗಳ ಅರಿವಿತ್ತೆಂದು ಹಲವು ವಚನಗಳಿಂದ ತಿಳಿದು ಬರುತ್ತದೆಂದು ವೈದ್ಯರಾದ ಡಾ. ಭವ್ಯ ಅಶೋಕ ಸಂಪಗಾರ ಅವರು ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಬೆಳಗಾವಿ ಮಹಾಂತೇಶ ನಗರದ ಮಹಾಂತಭವನದಲ್ಲಿ ಶನಿವಾರ ನಡೆದ ಮಾಸಿಕ ಅನುಭಾವ ಗೋಷ್ಠಿಯಲ್ಲಿ “ವಚನ ಸಾಹಿತ್ಯದಲ್ಲಿ ವೈದ್ಯ ವಿಜ್ಞಾನ ” ವಿಷಯವಾಗಿ ಅವರು ಮಾತನಾಡಿದರು.

ಶರಣ ಚಳುವಳಿಯು ಅಂದಿನ ಸಮಾಜದ ಹಲವು ಸಮಸ್ಯೆಗಳಿಗೆ ದಿಕ್ಸೂಚಿಯಂತಿದೆ. ವಚನ ಸಾಹಿತ್ಯ ರಚನೆಕಾರರಲ್ಲಿ ಬೆರಳೆಣಿಕೆಯಷ್ಟು ಶರಣರನ್ನು ಹೊರತುಪಡಿಸಿ ಮತ್ತಾರೂ ಸಾಂಪ್ರದಾಯಕ ಶಿಕ್ಷಣವನ್ನು ಪಡೆದವರಾಗಿರಲಿಲ್ಲ. ಆದಾಗ್ಯೂ ಅವರೆಲ್ಲರೂ ಕನ್ನಡ ಸಾಹಿತ್ಯಕ್ಕೆ ಮುಕುಟದಂತಿರುವ ವಚನಗಳನ್ನು ರಚಿಸಿ ‘ಲೌಖಿಕ ಜೀವನದ ಸತ್ಯಗಳಿಗೆ ಅಲೌಕಿಕ ಆಧ್ಯಾತ್ಮಿಕತೆಯ ಬೆಳಕು ಚೆಲ್ಲಿ ಮನುಷ್ಯನ ಜೀವಿತವನ್ನು ಸುಂದರವಾಗಿಸುವ ಪಾಠವನ್ನು ಸಮರ್ಥವಾಗಿ ಮಾಡಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಶಿವಾನಂದ ಜಾಮದಾರ ಅವರು ಮಾತನಾಡುತ್ತ, ವಿಚಾರ ಆಚಾರಗಳಿಂದ ಹುಟ್ಟಿದ ಧರ್ಮವೇ ಲಿಂಗಾಯತ ಧರ್ಮ. ಬಸವಣ್ಣನವರ ಬಗ್ಗೆ ಅರ್ಥವಾದರೆ ಮೂಢನಂಬಿಕೆಗಳು ಮಾಯವಾಗುತ್ತವೆ.
ಬಸವಣ್ಣನವರು ಸಾಕಾರದಲ್ಲಿ ನಿರಾಕಾರ ಕಂಡರು. ಆಗ ರೂಪಗೊಂಡಿದ್ದೇ ಇಷ್ಟಲಿಂಗ. ದೇವನೊಬ್ಬ ನಾಮ ಹಲವು ಎಂಬಂತೆ ಶರಣರು ಏಕದೇವ ಉಪಾಸಕರಾಗಿ ಧರ್ಮ ಕಟ್ಟಿದರು ಎಂದು ಹೇಳಿದರು.
ಪೂಜ್ಯ ಶಿವಬಸವ ದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಾ.ಲಿಂ. ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷರಾದ ಬಸವರಾಜ ರೊಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿಗೆ ಶ್ರಮಿಸಿದ ಕಾರ್ಯಕರ್ತರು, ದಾಸೋಹಿಗಳು ಹಾಗೂ ಸಾಧಕರನ್ನು ಗೌರವಿಸಲಾಯಿತು.
ಆರಂಭದಲ್ಲಿ ಸುನಿತಾ ಚಿನಿವಾರ ಹಾಗೂ ಸುವರ್ಣಾ ಬಾಳಿ ಷಟಸ್ಥಲ ಧ್ವಜಾರೋಹಣ ಮಾಡಿದರು. ಶೋಭಾ ಶಿವಳ್ಳಿ ಸ್ವಾಗತಿಸಿದರು. ಭಾರತಿ ರಾಮಗುರವಾಡಿ ಕಾರ್ಯಕ್ರಮ ನಿರೂಪಿಸಿದರು. ಅನುಸೂಯಾ ಬಶೆಟ್ಟಿ ವಂದಿಸಿದರು.

ಎಸ್. ಜಿ ಸಿದ್ನಾಳ, ಸಿ.ಎಂ. ಬೂದಿಹಾಳ, ಮುರಿಗೆಪ್ಪ ಬಾಳಿ, ಮೋಹನ ಗುಂಡ್ಲೂರ, ಅರವಿಂದ ಪರುಶೆಟ್ಟಿ, ಕೆಂಪಣ್ಣ ರಾಮಾಪುರಿ, ಸುಜಾತಾ ಮತ್ತಿಕಟ್ಟಿ, ಬಸವರಾಜ ಮತ್ತಿಕೊಪ್ಪ, ಬಸವರಾಜ ಸುಲ್ತಾನಪುರಿ, ಪ್ರೀತಿ ಮಠದ, ಭಾಗ್ಯಶ್ರೀ ಬೆಣಚನಮರಡಿ, ಕಾವೇರಿ ಕಿಲಾರಿ, ಮಹಾಂತೇಶ ತೋರಣಗಟ್ಟಿ, ಪ್ರವೀಣಕುಮಾರು ಚಿಕಲಿ, ಚೆನ್ನಪ್ಪ ನರಸನ್ನವರ, ಬಾಳಗೌಡ ದೊಡಬಂಗಿ ಮತ್ತಿತರರು ಉಪಸ್ಥಿತರಿದ್ದರು.


ಮೂಢ ನಂಬಿಕೆ ಇಲ್ಲದ ಯಾವ ಧರ್ಮ ಇದೆ? ಕಾರಣ ಕಾಲಕ್ಕೆ ತಕ್ಕ ಕೆಲುವು ಆಚರಣೆ ಕಾಲ ಗತಿಸಿದಂತೆ ತನ್ನ ಮಹತ್ವ ಮತ್ತು ಅವಶ್ಯಕತೆ ಅನ್ನಿಸದೆ ಇದ್ದಾಗಲೂ ಆಚರಿಸಿದ ಮಾತ್ರಕ್ಕೆ ಮೂಢ ನಂಬಿಕೆ ಅನ್ನಿಸಿದರೆ ಅದಕ್ಕಿಂತ ಮೂಢತೆ ಬೇರೆಯಿಲ್ಲ.
So called Modha nambike’s were infact developed to make people fall in line ..not all people could understand the scientific temper behind certain/many cultural things ..some became part of culture and some turned into moodha nambike…it’s wrong to restrict the awareness of science to Vachana Sahitya alone ..as Sanatana Tradition from where we evolved lies on the science bedrock