ಕಲ್ಯಾಣ ಕರ್ನಾಟಕ ಸೇರಿ ರಾಜ್ಯದ ವಿವಿಧೆಡೆ ಮನುಸ್ಮೃತಿ ದಹನ ದಿನಾಚರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಕಲಬುರಗಿ:

ಡಾ. ಬಿ.ಆರ್. ಅಂಬೇಡ್ಕರ್ 1927ರ ಡಿಸೆಂಬರ್ 25ರಂದು ಮನುಸ್ಮೃತಿಯನ್ನು ದಹಿಸಿದ ನೆನಪಿಗಾಗಿ ಕಲ್ಯಾಣ ಕರ್ನಾಟಕ ಸೇರಿದಂತೆ ಮೈಸೂರು, ಮಂಡ್ಯ, ಗದಗ, ವಿಜಯಪುರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ದಲಿತ ಹೋರಾಟಗಾರರು, ಪ್ರಗತಿಪರ ಚಿಂತಕರು ಸೇರಿ ಮನುಸ್ಮೃತಿ ದಹನ ದಿನ ಆಚರಿಸಿದರು.

ಕಲಬುರಗಿ ನಗರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ)ಯ ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ನೇತೃತ್ವದಲ್ಲಿ ನಗರದ ಜಗತ್ ವೃತ್ತದಲ್ಲಿರುವ ಅಂಬೇಡ್ಕರ್ ಮೂರ್ತಿ ಎದುರು ಮನುಸ್ಮೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ನಗರದ ಸರ್ದಾ‌ರ್ ವಲ್ಲಭ್ ಭಾಯಿ ಪಟೇಲ್ ವೃತ್ತದಿಂದ ಶುರುವಾದ ಪ್ರತಿಭಟನಾ ಮೆರವಣಿಗೆ ಜಗತ್ ವೃತ್ತದವರೆಗೂ ನಡೆಯಿತು. ಮಲ್ಲಿಕಾರ್ಜುನ್ ಖನ್ನಾ, ಮಲ್ಲಿಕಾರ್ಜುನ್ ಕ್ರಾಂತಿ, ಮರಿಯಪ್ಪ ಹಳ್ಳಿ, ಮಹಾಂತೇಶ್ ಬದದಾಳ, ಸೂರ್ಯಕಾಂತ್ ಆಜಾದಪೂರ, ಮಹೇಶ್ ಕೋಕಿಲೆ ಸೇರಿದಂತೆ ಹಲವರಿದ್ದರು.

ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ ಚಿಂತಕರು ಹಾಗೂ ದಲಿತ ಕಾರ್ಯಕರ್ತರು ಸಾಂಕೇತಿಕವಾಗಿ ಮನುಸ್ಮೃತಿಯ ನಕಲು ಪ್ರತಿ ದಹಿಸಿದರು.

ಈ ವೇಳೆ ಮುಖಂಡರಾದ ಗೌತಮ ಬಿ. ಬೊಮ್ಮನಹಳ್ಳಿ, ಚೇತನ ನಿರಾಕ್ಟರ್, ಸುನೀಲ ತ್ರಿಪಾಟಿ, ಗುಂಡಪ್ಪ ಹಸಿರಗುಂಡಗಿ, ರಮೇಶ ದೋಟಿಕೊಳ್, ಸಂಜು ಗುರಂಪಳ್ಳಿ, ಅಕ್ಷಯ ಬೊಮ್ಮನಳ್ಳಿ, ರಾಹುಲ್ ಟಿ ಯಾಕಾಪುರ್, ನಾಗಸೇನ್ ಬೊಮ್ಮನಳ್ಳಿ ಚಂದ್ರು ಐನೋಳ್ಳಿ ನಾಗು ಚಿಂಚೋಳಿ, ಲಕ್ಷ್ಮಿಕಾಂತ್ ಐನಾಪುರ ಸೇರಿದಂತೆ ಇತರರಿದ್ದರು.

ಬೀದರ್ ನಗರದ ಅಂಬೇಡ್ಕರ್ ವೃತ್ತದ ಎದುರುಗಡೆ ಮನುಸ್ಮೃತಿ ಪ್ರತಿಗಳನ್ನು ಸುಟ್ಟು ದಲಿತ ಸಂಘರ್ಷ ಸಮಿತಿಯಿಂದ ಮನುಸ್ಮೃತಿ ದಹನ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ಪ್ರದೀಪ್ ನಾಟಿಕರ್, ಸಂದೀಪ್ ಕಾಂಟೆ ಮಾತನಾಡಿದರು.

ಬಸವಕಲ್ಯಾಣದ ದಲಿತ ಮುಖಂಡರು ನಗರದ ಅಂಬೇಡ್ಕರ್ ಪ್ರತಿಮೆ ಎದುರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಮನುಸ್ಮೃತಿ ಪ್ರತಿಕೃತಿ ದಹಿಸಿದರು. ಈ ವೇಳೆ ಭಾರತೀಯ ಬೌದ್ಧ ಮಹಾಸಭಾದ ತಾಲೂಕು ಅಧ್ಯಕ್ಷ ಮನೋಹರ್ ಮೈಸೆ, ಭಾರತೀಯ ಬೌದ್ಧ ಮಹಾಸಭಾದ ಮಹಿಳಾ ರಾಜ್ಯಾಧ್ಯಕ್ಷೆ ವೈಶಾಲಿತಾಯಿ ಮೋರೆ, ಮುಖಂಡರಾದ ಮನೋಹರ್ ಮೋರೆ, ಸಿಕಂದರ್, ವಿಜಯಕುಮಾರ್ ಡಾಂಗೆ, ಸಂಜು ಸಂಗನೋರೆ, ಅಶೋಕ್ ಸಂಗನೋರೆ, ದಶರಥ್ ಕೋಟಮಾಳೆ, ಆಶೋಕ್ ಮಧಾಳೆ, ಕವಿರಾಜ್, ಝರನಾಥ್ ಮಾಲೆ, ದೀಪಕ್ ಮೋರೆ, ಸುಧಾಕರ್ ಸೂರ್ಯವಂಶಿ ಹಾಗೂ ಅನಸುಯಾ ಮಂತಾಳಕರ್ ಸೇರಿದಂತೆ ಭಾರತೀಯ ಬೌದ್ಧ ಮಹಾಸಭಾದ ಮಹಿಳಾ ಘಟಕದ ಅನೇಕ ಸದಸ್ಯರು ಉಪಸ್ಥಿತರಿದ್ದರು.

ಇನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಜೈ ಭೀಮ್ ವೃತ್ತದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿಯ ಅಡಿಯಲ್ಲಿ ಮನುಸ್ಮೃತಿ ದಹನ ದಿನ ಆಚರಿಸಲಾಯಿತು.

ಈ ಸಂದರ್ಭ ಸಂಚಾಲಕರಾದ ಸೋಮಶೇಖರ್ ಬಣ್ಣದಮನೆ, ಮರಡಿ ಜಂಬಯ್ಯ ನಾಯಕ, ಶಿವುಕುಮಾರ್, ತಾಯಪ್ಪ ನಾಯಕ, ರಾಮಚಂದ್ರ ಬಾಬು, ನಗರಸಭಾ ಸದಸ್ಯರಾದ ಖದೀರ್, ಗುಜರಿ ಮೊಹಮದ್, ಜೆ.ಸಿ. ಈರಣ್ಣ ರಮೇಶ್, ವೆಂಕಟರಮಣ, ಬಿಸಾಟಿ ಮಹೇಶ್, ರವಿ ಕುಮಾರ್, ಸಾದ್ ಖಾನ್, ಇಂತಿಯಾಜ್ ಪಾಲ್ಗೊಂಡಿದ್ದರು. ಸಂವಿಧಾನ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು, ವಿವಿಧ ದಲಿತ ಪರ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರಿದ್ದರು.

ಯಾದಗಿರಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಮನುಸ್ಮೃತಿ ದಹನ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸರಕಾರಿ ಪದವಿ ಕಾಲೇಜು ಪ್ರಾಧ್ಯಾಪಕ ಡಾ. ಎಸ್. ಎಸ್. ನಾಯಕ, ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ರೇರಕರ್, ಗೋಪಾಲ ತೆಳಗೇರಿ, ಭೀಮರಾಯ ಲಿಂಗೇರಿ, ಸೇರಿ ಅನೇಕ ದಲಿತ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಮೈಸೂರು ಜಿಲ್ಲೆಯ ಹುಣಸೂರು ನಗರದ ಸಂವಿಧಾನ ವೃತ್ತದಲ್ಲಿ ದಸಂಸ ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ಮನುಸ್ಮೃತಿ ದಹಿಸಲಾಯಿತು.

ದಲಿತ ಹಿರಿಯ ಹೋರಾಟಗಾರ ಜೆ.ಮಹದೇವು, ಮುಖಂಡರಾದ ಅತ್ತಿಕುಪ್ಪೆ ರಾಮಕೃಷ್ಣ, ವಿ. ಬಸವರಾಜು ಕಲ್ಕುಣಿಕೆ, ರಾಜು ಚಿಕ್ಕಹುಣಸೂರು, ಮುತ್ತುರಾಯನ ಹೊಸಳ್ಳಿ ಶಿವರಾಜು, ಪ್ರಕಾಶ್, ಸಿದ್ದೇಶ್ ಅತ್ತಿಕುಪ್ಪೆ, ಬೀರನಹಳ್ಳಿ ಬಾಲಸುಂದರ್, ರುಕ್ಕಿಣಿ, ಹಳೇಪುರ ಕೃಷ್ಣ ಚಲುವರಾಜು, ಗಿರೀಶ್ ಬಿಳಿಕೆರೆ, ನಾರಾಯಣ, ವಕೀಲ ಅಶೋಕ್ ಸುಂದರ್ ಹೊಸಕೋಟೆ ಮುಂತಾದವರಿದ್ದರು.

ಮಂಡ್ಯ:

ಕರ್ನಾಟಕ ಜನಶಕ್ತಿ, ದಲಿತ ಸಂಘರ್ಷ ಸಮಿತಿ ಮತ್ತು ಇತರ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ನಗರದ ಸಂಜಯ ವೃತ್ತದಲ್ಲಿ ಮನುಸ್ಮೃತಿ ಪ್ರತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು, ಕರ್ನಾಟಕ ಜನಶಕ್ತಿಯ ಪೂರ್ಣಿಮಾ, ಸಿದ್ದರಾಜು, ಸಿಐಟಿಯುನ ಸಿ.ಕುಮಾರಿ, ಮುಡಾ ಅಧ್ಯಕ್ಷ ಬಿ.ಪಿ. ಪ್ರಕಾಶ್, ಜಾಗೃತ ಕರ್ನಾಟಕದ ಸಂಚಾಲಕ ನಗರಕೆರೆ ಜಗದೀಶ್, ಮಹಿಳಾ ಮನ್ನಡೆಯ ಶಿಲ್ಪಾ, ಹಲವಾರು ಸಂಘಟನೆಗಳ ಮುಖಂಡರಿದ್ದರು.

ಗದಗ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಮನುಸ್ಮೃತಿ ದಹನ ಕಾರ್ಯಕ್ರಮ ನಡೆಯಿತು. ದಲಿತ ಮತ್ತು ಬಸವಪರ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *