ಬೆಳಗಾವಿ:
ಮಹಾನಗರ ಪಾಲಿಕೆ ವ್ಯಾಪ್ತಿಯ ಓಲ್ಡ್ ಪಿ.ಬಿ. ರಸ್ತೆ – ದಾಕೋಜಿ ಆಸ್ಪತ್ರೆ ಹತ್ತಿರ ಗುರುವಾರ ನಾಗನೂರ ರುದ್ರಾಕ್ಷಿಮಠದ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಅಭಿಷೇಕ ಗೋಪಾಲ ಶಾಹಪುರಿ ಅವರು ಹೊಸದಾಗಿ ತೆರೆಯುತ್ತಿರುವ A1 ಮೆನ್ಸ್ ಸಲೂನ್ ಅಂಗಡಿಯನ್ನು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಪೂಜ್ಯರು ಆಶೀರ್ವಚನ ನೀಡುತ್ತ, ಗುರು ಬಸವಣ್ಣನವರು ಹಾಗೂ ಹಡಪದ ಅಪ್ಪಣ್ಣನವರಿಗೂ ಇರುವ ಅವಿನಾಭಾವ ಸಂಬಂಧದ ಕುರಿತು ಮಾಹಿತಿ ನೀಡಿ; ಕಾಯಕದ ಮಹತ್ವವನ್ನು ತಿಳಿಸಿದರು.

ಅಂಗಡಿಯ ಗುರುಪ್ರವೇಶದ ವಚನಮೂರ್ತಿಗಳಾಗಿ ಬಸವರಾಜ ಹಿರೇಹೊಳಿ, ಮಹಾಂತೇಶ ತೋರಣಗಟ್ಟಿ, ಮಹಾದೇವಿ ಹಿರೇಹೊಳಿ ಸುನಿತಾ ತೋರಣಗಟ್ಟಿ ಕಾರ್ಯನಿರ್ವಹಿಸಿದರು. ಹಲಗಾ ಗುರುಬಸವ ಬಳಗದ ಅಧ್ಯಕ್ಷರಾದ ಪ್ರಕಾಶ ಶೀಲಿ, ಸಂಜು ಕೊಣೆ, ಪ್ರಕಾಶ ಹಂಪಣ್ಣವರ, ಈರಪ್ಪ ಹಂಪಣ್ಣವರ, ಶಿವಾನಂದ ಹಡಪದ ಹಾಗೂ ಹಲಗಾ ಗುರುಬಸವ ಬಳಗದ ಸರ್ವ ಸದಸ್ಯರು ಉಪಸ್ಥಿತರಿದ್ದರು.

