ಜಾತಿ ಮುಕ್ತ ಸಮಾಜವನ್ನು ಕಟ್ಟಲು ಬಸವಣ್ಣನವರು ಪ್ರಯತ್ನಿಸಿದರೂ, ಕಲ್ಯಾಣ ಕ್ರಾಂತಿಯ ನಂತರ ಆಂಧ್ರದ ಆರಾಧ್ಯರ ಪ್ರಭಾವದಿಂದ ಲಿಂಗಾಯತರಲ್ಲಿ ಜಾತಿಗಳು ಮರುಕಳಿಸಿದವು.
ಆರಾಧ್ಯರು ಬಸವ ತತ್ವ ಒಪ್ಪಿದ್ದರೂ ವೈದಿಕತೆ ಬಿಡದೆ ಜನಿವಾರ, ಇಷ್ಟಲಿಂಗ ಎರಡನ್ನೂ ಪಾಲಿಸುತ್ತಿದರು. ಇವರು ಮೊದಲು ಪುರೋಹಿತಶಾಹಿ ‘ಜಂಗಮ’ ಜಾತಿ ಹುಟ್ಟುಹಾಕಿದರು.
ಇದರಿಂದ ಲಿಂಗಾಯತರಲ್ಲಿ ಜಂಗಮ-ಭಕ್ತರೆಂಬ ಬಿರುಕು ಮೂಡಿತು. ಕ್ರಮೇಣ ಸಮಾಜ ಇನ್ನೂ ಒಡೆದು ಕಾಯಕಗಳಾಗಿದ್ದ ವೃತ್ತಿಗಳು ಮತ್ತೆ ಜಾತಿಗಳಾಗಿ 4 ವರ್ಗಗಳಲ್ಲಿ ಗುಂಪಾದವು:
1)ಸ್ಪ್ರಶ್ಯ ಮೇಲು ಜಾತಿ – ಜಂಗಮ, ಬಣಜಿಗ, ಪಂಚಮಸಾಲಿ… 2)ಸ್ಪ್ರಶ್ಯ ಕೆಳ ಜಾತಿ – ಅಗಸ, ಕ್ಷೌರಿಕ. .. 3) ಸ್ಪ್ರಶ್ಯ ಹೊರ ಜಾತಿ – ಕುರುಬ, ಅಂಬಿಗ.. 4)ಅಸ್ಪ್ರಶ್ಯ ಹೊರ ಜಾತಿ – ಮಾದಿಗ, ಡೋಹರ…
1ನೆ, 2ನೆ ವರ್ಗಗಳು ಸ್ಪಷ್ಟವಾಗಿ ಲಿಂಗಾಯತರು. 3ನೆ, 4ನೆ ವರ್ಗಗಳು ದೂರ ಹೋಗಿದ್ದರೂ ಶರಣರೊಬ್ಬರ ಮೂಲ ಹೇಳಿಕೊಳ್ಳುತ್ತಾ ಲಿಂಗಾಯತ ಅಂಶಗಳನ್ನು ಉಳಿಸಿಕೊಂಡಿದ್ದಾರೆ.
ಇಂದೂ ಕೂಡ 4 ವರ್ಗಗಳೂ, ಇಷ್ಟಲಿಂಗ, ವಿಭೂತಿಧಾರಣೆ ಪಾಲಿಸುತ್ತಾರೆ. 1 ಮತ್ತು 2 ವರ್ಗಗಳು ಶಾಖಾಹಾರಿಗಳಾಗಿದ್ದರೆ, 3 ಮತ್ತು 4ನೇ ವರ್ಗಗಳು ಅದರಿಂದ ವಿಮುಖರಾಗಿದ್ದಾರೆ.
1ನೇ ವರ್ಗದ ಲಿಂಗಾಯತರು ಮಿಕ್ಕ 3 ವರ್ಗಗಳನ್ನು ಅದರಲ್ಲೂ ಕೊನೆಯ 2 ವರ್ಗದ ಲಿಂಗಾಯತರನ್ನು ಅಪ್ಪಿಕೊಳ್ಳುವುದು ಇಂದಿನ ಅಗತ್ಯವೆನಿಸಿದೆ.
(‘ಲಿಂಗಾಯತ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೫)