ಆಂತರಿಕ ವಿರೋಧಕ್ಕೆ ಬಲಿಯಾದ ಅನುಭವ ಮಂಟಪ (ಅನುಭವ ಮಂಟಪ 1/2)

ಅನುಭವ ಮಂಟಪ

ಅನುಭವ ಮಂಟಪಕ್ಕೆ ಮರುಹುಟ್ಟು ನೀಡಿದ ಸಿದ್ದಲಿಂಗಯತಿಗಳು

ಆಂತರಿಕ ವಿರೋಧಕ್ಕೆ ಬಲಿಯಾದ ಅನುಭವ ಮಂಟಪ

೧೨ನೇ ಶತಮಾನದಲ್ಲಿ ಅರ್ಚಕರ ಹಿಡಿತದಲ್ಲಿದ್ದ ದೇವಾಲಯಗಳು ಮತ್ತು ಆಚಾರ್ಯರ ಹಿಡಿತದಲ್ಲಿದ್ದ ಮಠಗಳು ಸಮಾಜವನ್ನು ಶೋಷಿಸುವ ಬೃಹತ್ ಸಂಸ್ಥೆಗಳಾಗಿ ಬೆಳೆದಿದ್ದವು.

ಇವುಗಳಿಗೆ ವಿರುದ್ಧವಾಗಿ ಬಸವಣ್ಣನವರು ಜಾತಿ, ಮತ, ಲಿಂಗ ಭೇದವಿಲ್ಲದೆ ಎಲ್ಲರೂ ಮುಕ್ತವಾಗಿ ಚರ್ಚಿಸಬಹುದಾದ ವೇದಿಕೆಯಾಗಿ ಅನುಭವ ಮಂಟಪವನ್ನು ಹುಟ್ಟುಹಾಕಿದರು.

ಈ ಪ್ರಯತ್ನಕ್ಕೆ ಆಗಮಿಕ ಶೈವರಿಂದ ಪ್ರಬಲ ವಿರೋಧ ಬಂದಿತು. ಬಸವಣ್ಣನವರ ಪ್ರಭಾವದಿಂದ ಇವರು ಲಿಂಗಾಯತರಾಗಿದ್ದರೂ ವೈದಿಕತೆ ಬಿಡದೆ, ತಾವು ಮೇಲೆಂದು ಭಾವಿಸಿಕೊಂಡಿದ್ದರು.

ಜಾತಿವಾದಿಗಳಾದ ಇವರು ಶೂದ್ರ ಅಲ್ಲಮರನ್ನು ಅಧ್ಯಕ್ಷ ಪೀಠದಲ್ಲಿ ಕೂರಿಸುವುದನ್ನು ಸಹಿಸಲಾಗದೆ ಪ್ರತಿಭಟಿಸಿ ಸಭೆಯಿಂದ ಎದ್ದು ಹೋದರು (ಶೂನ್ಯ ಸಂಪಾದನೆ ಕಾಂಡ – ೧೮).

ಧಿಕ್ಕರಿಸಿ ಹೋದ ಶೈವರು ಬೇರೆ ಯಾರಿಗೂ ಪೀಠವನ್ನೇರಲು ಅವಕಾಶ ಮಾಡಿಕೊಡಲಿಲ್ಲ. ಅಲ್ಲಮರ ನಂತರ ಚನ್ನಬಸವಣ್ಣ, ಸಿದ್ದರಾಮರು ಪೀಠವನ್ನೇರಿದರು ಎನ್ನಲು ಸಮಕಾಲೀನ ಆಧಾರಗಳಿಲ್ಲ.

ಹೀಗೆ ನಾಶವಾದ ಅನುಭವ ಮಂಟಪದ ಪರಿಕಲ್ಪನೆಗೆ ಮತ್ತೆ ಜೀವ ತುಂಬುವ ಧೈರ್ಯ ಮಾಡಿದ್ದು ೧೬ನೇ ಶತಮಾನದಲ್ಲಿ ದ್ವಿತೀಯ ಅಲ್ಲಮರೆಂದು ಪ್ರಸಿದ್ಧರಾದ ಎಡೆಯೂರು ಸಿದ್ದಲಿಂಗಯತಿಗಳು.

(‘ಅನುಭವ ಮಂಟಪ: ಹುಟ್ಟು-ಮರುಹುಟ್ಟು’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ 4)

Share This Article
Leave a comment

Leave a Reply

Your email address will not be published. Required fields are marked *