ಅಸ್ಪೃಶ್ಯತೆ ವಿರುದ್ಧ ಶರಣರು ಹೋರಾಡಿದ ರೀತಿ

೧೨ನೇ ಶತಮಾನದಲ್ಲಿ ಸಮ ಸಮಾಜವನ್ನು ಕಟ್ಟಲು ಶರಣರು ದೊಡ್ಡ ಹೋರಾಟ ನಡೆಸಿದರು. ಅಸ್ಪೃಶ್ಯತೆಯನ್ನು ನಿವಾರಿಸಲು ಅವರು ಕೈಗೊಂಡ ಅನೇಕ ಕ್ರಮಗಳನ್ನು ಸಂಗ್ರಹಿಸಬಹುದು:

ದಲಿತರನ್ನು ‘ಪಿರಿಯ ಮಾಹೇಶ್ವರರು’ ಎಂದು ಗೌರವದಿಂದ ಕರೆಯಲಾರಂಭಿಸಿದರು. ಅವರನ್ನು ನಿಸ್ಸಂಕೋಚದಿಂದ ಮುಟ್ಟಿಸಿಕೊಂಡು, ಸಾಮೂಹಿಕ ವೇದಿಕೆಗಳನ್ನು ಹಂಚಿಕೊಂಡರು.

ಅಂತ್ಯಜರಿಗೂ ನಮಸ್ಕಾರ, ಪ್ರತಿನಮಸ್ಕಾರಗಳನ್ನು ಸಾರ್ವಜನಿಕವಾಗಿ ಮಾಡುವ ಮುಕ್ತ ಪರಿಸರವನ್ನು ಶರಣರು ನಿರ್ಮಿಸಿದರು.

ಶರಣರಾಗಿದ್ದ ಅಂತ್ಯಜರು ಮತ್ತು ಕುಲಜರು ಸಹ ಪಂಕ್ತಿಯಲ್ಲಿ ಸಹ ಭೋಜನ ಮಾಡುವುದು ಸಾಮಾನ್ಯವಾಯಿತು. ಕಲ್ಯಾಣದಲ್ಲಿ ಅನೇಕ ಅಂತರ್ಜಾತಿ ವಿವಾಹಗಳು ನಡೆದಿರುವ ಸಾಧ್ಯತೆಯಿದೆ.

ಎಲ್ಲಾ ವೃತ್ತಿಗಳನ್ನು ಕಾಯಕಗಳೆಂದು ಕರೆದು, ದೈಹಿಕ ಶ್ರಮದ ಕಮ್ಮಾರ, ಚಮ್ಮಾರ, ಕುಂಬಾರ, ಮಡಿವಾಳರನ್ನು ಬೌದ್ಧಿಕ ಶ್ರಮದ ಬ್ರಾಹ್ಮಣರ ಸಮಕ್ಕೆ ತಂದರು. ಹುಟ್ಟಿನ ಜಾತಿ ಶ್ರೇಷ್ಠತೆಯನ್ನು ನಿರಾಕರಿಸಿದರು.

ದಲಿತರಿಗೆ ಗುರುಕರುಣೆ, ಲಿಂಗ ದೀಕ್ಷೆಗಳು ಮುಕ್ತವಾಗಿ ಲಭ್ಯವಾಗುವಂತೆ ಮಾಡಿದರು . ಶರಣರು ವಚನ ಸಾಹಿತ್ಯವನ್ನು ವರ್ಣಬೇಧದ ನಿರ್ಮೂಲನದ ಮಾಧ್ಯಮವಾಗಿ ಬಳಸಿಕೊಂಡರು.

(‘ಅಸ್ಪ್ರಶ್ಯತೆಯ ನಿರ್ಮೂಲನ : ಶರಣರ ಕಾರ್ಯವಿಧಾನ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೧)

Share This Article
Leave a comment

Leave a Reply

Your email address will not be published. Required fields are marked *