ಡಾ. ಶಶಿಕಾಂತ ಪಟ್ಟಣ ಅವರು ಶರಣರು ಸನಾತನ ವ್ಯವಸ್ಥೆಗೆ ಪ್ರತಿಯಾಗಿ ಬಹುದೊಡ್ಡ ಆಂದೋಲನವನ್ನು ಹುಟ್ಟು ಹಾಕಿದರು ಎಂದು ಹೇಳುತ್ತಾ ತಮ್ಮ ಉಪನ್ಯಾಸವನ್ನು ಪ್ರಾರಂಭ ಮಾಡಿದರು.
ಹರಿಹರ, ರಾಘವಾಂಕ, ಪಾಲ್ಗುರಿಕೆ ಸೋಮನಾಥ, ಕೆರೆಯ ಪದ್ಮರಸನಂಥವರು ಅತ್ಯಂತ ನವಿರಾಗಿ ಖೋಟಾ ವಚನಗಳನ್ನು ಸೇರಿಸಿದ್ದಾರೆ. ಭೀಮಕವಿ, ಚಾಮರಸ, ಲಕ್ಕಣ್ಣ, ಸಿಂಗಿರಾಜ ಅಂಥವರು ಕೂಡ ಕಲಬೆರಕೆ ಮಾಡಿದರು ಎಂದು ಅಭಿಪ್ರಾಯ ಪಟ್ಟರು.
ಭೀಮಕವಿ, ಹಲಗೆಯಾರ್ಯ ಮುಂತಾದವರು ತಮ್ಮ ಪುಸ್ತಕಗಳಲ್ಲಿ ಬಹಳಷ್ಟು ವಿಷಯಗಳನ್ನು ತಪ್ಪಾಗಿ ಉಲ್ಲೇಖ ಮಾಡಿದರು. ನಾವು ಇದನ್ನೆಲ್ಲ ಪರಾಮರ್ಶೆ ಮಾಡದೆ ಇತ್ಯರ್ಥಕ್ಕೆ ಬಂದು ಬಿಡುತ್ತೇವೆ ಎಂದು ಕಳವಳ ವ್ಯಕ್ತಪಡಿಸಿದರು.
ನೂರು ಜನರು ಮಾಡದ ಕೆಲಸವನ್ನು ಎಂ. ಎಂ. ಕಲ್ಬುರ್ಗಿ ಸರ್ ಒಬ್ಬರೇ ಮಾಡಿದ್ದಾರೆ ಎಂದು ಅವರನ್ನು ನೆನೆಯುತ್ತಾ ಈಗೀರುವ ಸತ್ಯಾಸತ್ಯತೆಯನ್ನು ಒಳಗೆ ನುಂಗುವ ಹಾಗಿಲ್ಲ, ಉಗುಳುವ ಹಾಗಿಲ್ಲ, ಸೂಕ್ಷತೆಯಿಂದ ಕೆಲಸ ಮಾಡಬೇಕು ಎಂದು ಮಾರ್ಮಿಕವಾಗಿ ನುಡಿದರು.
ವಚನ ಪರಿಷ್ಕರಣೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು, ಪದಗಳು ಪಲ್ಲಟಗೊಂಡಿರುತ್ತವೆ, ಅವುಗಳನ್ನು ಬದ್ಧತೆ ಮತ್ತು ನಿಷ್ಠೆಯಿಂದ ಸರಿ ಮಾಡಬೇಕು ಎನ್ನುವುದನ್ನು ಒತ್ತಿ ಹೇಳಿದರು.
ರುದ್ರಮೂರ್ತಿ ಅವರ ನಿರೂಪಣೆ, ಕುಮಾರಿ ಗ್ರೀಷ್ಮಾ ಅವರ ವಚನ ಪ್ರಾರ್ಥನೆ, ಶರಣೆ ವಿದ್ಯಾ ಮುಗ್ದುಮ್ ಅವರ ವಚನ ಮಂಗಳ, ಮತ್ತು ಬಹಳಷ್ಟು ಸಹೋದರ -ಸಹೋದರಿಯರು ಸಂವಾದದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಕಾರ್ಯಕ್ರಮ ಮುಕ್ತಾಯವಾಯ್ತು.
(ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ ಅವರ ತಂದೆಯವರಾದ ಲಿಂಗೈಕ್ಯ ಶರಣ ಬಿ.ಎಮ್.ಪಾಟೀಲ್ ಮತ್ತು ತಾಯಿಯವರಾದ ಲಿಂಗೈಕ್ಯ ಶರಣೆ ಅಕ್ಕಮಹಾದೇವಿ ಪಾಟೀಲ್ ಅವರ ಸ್ಮರಣಾರ್ಥ ನಡೆದ ಶ್ರಾವಣ ಮಾಸದ ದತ್ತಿ ಉಪನ್ಯಾಸದ 29 ನೆಯ ದಿವಸದ ವರದಿ. ಸೆಪ್ಟೆಂಬರ್ 01)
ಸುಧಾ ಪಾಟೀಲ ಅವರ ಪರಿಚಯ
ಸುಧಾ ಪಾಟೀಲ್ ಅವರು ಒಬ್ಬ ಸಾಹಿತಿ,ಲೇಖಕಿ, ಕವಿಯಿತ್ರಿ, ವಿಮರ್ಶಕಿ ಹಾಗೂ ಸಾಮಾಜಿಕ ಕಳಕಳಿಯುಳ್ಳ ಚಿಂತಕಿ. ಇವರು ಗದಗ ಜಿಲ್ಲೆಯ ಮಲ್ಲಸಮುದ್ರದ ಸಹಕಾರಿ ಧುರೀಣರೆಂದೇ ಹೆಸರಾದ ಗೌಡರ ಮನೆತನದಲ್ಲಿ
ಜನಿಸಿದರು. ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ಗದಗ, ಬಿಜಾಪುರ, ಧಾರವಾಡ,
ಬೆಳಗಾವಿ, ಕಲ್ಬುರ್ಗಿ ಮತ್ತು ಬೆಂಗಳೂರಿನಲ್ಲಿ ಪೂರೈಸಿ, ಅಲ್ಲಿಯೇ ಗೃಹ ವಿಜ್ಞಾನ ಕಾಲೇಜಿನಲ್ಲಿ ಸೈಕಾಲಜಿ, ಸೋಶಿಯಲ್ ವೆಲ್ಫೇರ್ ಮತ್ತು ಹ್ಯೂಮನ್ ಡೆವಲಪ್ಮೆಂಟ್ ಗಳ ವಿಷಯಗಳನ್ನು ಆಯ್ದುಕೊಂಡು ಡಿಗ್ರಿ ಮುಗಿಸಿದರು.
ಈಗ ಸಧ್ಯ ಶರಣೆ ಸುಧಾ ಶಿವಾನಂದ ಪಾಟೀಲ್ ಅವರು ಒಬ್ಬ ಅತ್ಯಂತ ಸೃಜನಶೀಲ ಕವಿಯಿತ್ರಿ ಎಂದು ಗುರುತಿಸಿಕೊಂಡ ಶರಣ ಜೀವಿ. ಬೆಳಗಾವಿ ಜಿಲ್ಲೆಯ ಲೇಖಕ ಲೇಖಕಿಯರ ಸಮುದಾಯದಲ್ಲಿ
ಕೊಡುಗೈ ದಾನಿ ಎಂದೇ ಪ್ರತೀತಿ ಪಡೆದಿದ್ದಾರೆ. ಇವರು ಅನೇಕ ಲೇಖನಗಳು, ಶರಣ ಸಾಹಿತ್ಯದ ವಚನ ವಿಶ್ಲೇಷಣೆ,ಗಜಲ್, ವಿಮರ್ಶೆ, ಕವನಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಣೆ ಗೊಂಡಿವೆ.ಇವರ ಎರಡು ಕವನ ಸಂಕಲನಗಳು, ಕಿರುಹೊತ್ತಿಗೆ ಮತ್ತು ಐದು ಸಂಪಾದನೆಯ
ಕೃತಿಗಳಲ್ಲಿ ಸಹಸಂಪಾದಕಿ ಯಾಗಿ ಕೆಲಸ ನಿರ್ವಹಿಸಿದ್ದಾರೆ. ಒಟ್ಟಾರೆ ಇವರ ಕವನರಚನಾ ಶೈಲಿ , ಭಾಷಾ ಶುದ್ಧತೆ, ಪ್ರತಿಮೆ ಗಳ ಅಳವಡಿಕೆ ಮುಂತಾದ ಕಾವ್ಯ ರಚನೆಯಲ್ಲಿ ಎತ್ತಿದ ಕೈ ಎಂದೇ ಹೇಳಬಹುದು.
ಈಗ ಸಧ್ಯ ಇವರು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಡಿ
ಯಲ್ಲಿ ನಡೆಯುತ್ತಿರುವ ಅಕ್ಕನ ಅರಿವು ಮತ್ತು ವಚನ ಅಧ್ಯಯನ ವೇದಿಕೆಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಒಬ್ಬ ಮಹಿಳಾ ಸಂಘಟಕಿಯಾಗಿ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ನಿರಂತರವಾಗಿ ತಮ್ಮ ಸೇವೆ ಸಲ್ಲಿಸುವುದರ ಮೂಲಕ ಬೆಳಗಾವಿಯಲ್ಲಿ ಎಲ್ಲರಿಗೆ ಚಿರಪರಿತರು.
ಸುಧಾ ಪಾಟೀಲ ಅವರ ಪ್ರಕಟಿತ ಕೃತಿಗಳು
ಕಿರುಹೊತ್ತಿಗೆ
1..ಡಾ. ಜ. ಚ. ನಿ ಬದುಕುಬರಹ
ಸಹ -ಸಂಪಾದನೆ
1.. ವಚನಗಳಲ್ಲಿ ಗುರು ಲಿಂಗಜಂಗಮ
2..ಅನುಭವ ಸಿರಿ
3.. ಕನ್ನಡದ ಕಬ್ಬಿಗರು
4.. ದಾಸೋಹಮ್
5.. ಸಂಯುಕ್ತ
6..ತಾಯಿಯಿದ್ದರೆ ತವರೆಚ್ಚು
ಕವನ ಸಂಕಲನ
1.. ಹೆಜ್ಜೆ ಗುರುತು
2.. ಹೃದಯದ ಮಾತು
3..ಚುಕ್ಕಿ ಹೇಳಿದ ಕಥೆ
ಸುಧಾ ಪಾಟೀಲ್ ಅವರು ಕಾರ್ಯಕಾರಿ ಸದಸ್ಯೆಯಾಗಿ ಮತ್ತು ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಸಂಘ – ಸಂಸ್ಥೆಗಳು
1..ಬಸವ ತಿಳುವಳಿಕೆ ಮತ್ತು ಅಧ್ಯಯನ ಕೇಂದ್ರ.. ಪುಣೆ
2.. ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ
3.. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್
4.. ಲಿಂಗಾಯತ ಮಹಿಳಾ ಸಮಾಜ
5.. ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನ
6.. ಅಖಿಲ ಭಾರತ ವೀರಶೈವ ಮಹಾಸಭಾ
7.. ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್
8..ಕಾಯಕಕಟ್ಟೆ (ಲಿಂಗಾಯತ ಮಹಿಳಾ ಸ್ವಉದ್ಯೋಗ ಸಂಘ )
9.. ವಿಸ್ತಾರ ಫೌಂಡೇಶನ್ (ಸಾಮಾಜಿಕ ಕಾರ್ಯಕ್ರಮ ಬೆಳಗಾವಿ ಶಾಖೆ )
10.. ಮೈತ್ರಿ ಸಂಘ
11.. ಸಂಸ್ಕೃತಿ ಮಹಿಳಾ ಮಂಡಲ
12.. ಬೆಳಗಾವಿ ಲೇಡೀಸ್ ಮೀಟ್
13..ಕರ್ನಾಟಕ ಲೇಖಕಿಯರ ಸಂಘ
14..ರೋಷ್ಟ್ರಂ ಡೈರೀಸ
ಸುಧಾ ಪಾಟೀಲ್ ಅವರಿಗೆ ದೊರೆತ ಪ್ರಶಸ್ತಿಗಳು
1.. ರಾಜ್ಯೋತ್ಸವ ಪ್ರಶಸ್ತಿ..
ಚೇತನಾ ಫೌಂಡೇಶನ್ ಅವರ ವತಿಯಿಂದ…
ಕನ್ನಡ ಪರ ಕಾಳಜಿ ಮತ್ತು ಸಾಮಾಜಿಕ ಕಾರ್ಯಗಳಿಗಾಗಿ ಸಂದ ಪ್ರಶಸ್ತಿ
2.. ಅನುಪಮ ಸೇವಾ ರತ್ನ ಪ್ರಶಸ್ತಿ…ಪೃಥ್ವಿ ಫೌಂಡೇಶನ್ ವತಿಯಿಂದ…
ಸಾಹಿತ್ತಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗೈದ ಅಪರಿಮಿತ ಸಾಧನೆಗಾಗಿ
3.. ಮಿನರ್ವ ಅವಾರ್ಡ್
ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನ (ಯುರೋಪ್ ಖಂಡದ ರೋಮ್ ನಲ್ಲಿ )
ಅಂತರಾಷ್ಟೀಯ ಸಮ್ಮೇಳನದಲ್ಲಿ ಕವನವಾಚನ
4..ದತ್ತಿನಿಧಿ ಪ್ರಶಸ್ತಿ
ಅಖಿಲ ಭಾರತ ಕವಿಯಿತ್ರಿಯರ
ಸಮ್ಮೇಳನ ( ಬೆಳಗಾವಿ )
ಸಾಮಾಜಿಕ ಕಾರ್ಯಕ್ಕಾಗಿ..
ಸುಧಾ ಪಾಟೀಲ್ ಅವರ ದತ್ತಿದಾನ
1.. ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ… ಪುಣೆ
ಲಿಂ.. ಶ್ರೀ ಬಿ. ಎಂ. ಪಾಟೀಲ್ ಮತ್ತು ಲಿಂ.. ಶ್ರೀಮತಿ ಅಕ್ಕಮಹಾದೇವಿ ಪಾಟೀಲ್
( ನನ್ನ ತಂದೆ -ತಾಯಿಯ ಹೆಸರಿನಲ್ಲಿ )ದತ್ತಿಉಪನ್ಯಾಸದ ಸಲುವಾಗಿ ದತ್ತಿನಿಧಿ
2.. ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದಲ್ಲಿ
ಅತ್ಯುತ್ತಮ ಕವಿಯಿತ್ರಿಯ ಪ್ರಶಸ್ತಿ..
ಲಿಂ.. ರಾಚಮ್ಮ ವೀರನಗೌಡ ಪಾಟೀಲ್ ಗಂದಿಗವಾಡ ( ನನ್ನ ಅತ್ತೆಯವರು ) ಇವರ ಹೆಸರಿನಲ್ಲಿ ದತ್ತಿನಿಧಿ
3… ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನ
ಅತ್ಯುತ್ತಮ ಲೇಖಕಿ ಪ್ರಶಸ್ತಿ ಲಿಂ. ಬಿ. ಎಂ. ಪಾಟೀಲ್ ( ನನ್ನ ತಂದೆಯವರು )ಅವರ ಹೆಸರಿನಲ್ಲಿ ದತ್ತಿನಿಧಿ
ಲಿಂ. ಅಕ್ಕಮಹಾದೇವಿ ಪಾಟೀಲ ಮತ್ತು ಲಿಂ. ಬಿ. ಎಂ. ಪಾಟೀಲ
ಸುಧಾ ಪಾಟೀಲ್ ಅವರ ತಾಯಿ ಲಿಂ. ಅಕ್ಕಮಹಾದೇವಿ ಪಾಟೀಲ ಅವರು ಡಾ. ಜ. ಚ. ನಿ ಶ್ರೀಗಳನ್ನು ಅಂಬಡಗಟ್ಟಿಯಿಂದ ಕರೆತಂದು ತಮ್ಮ ಮನೆಯಲ್ಲಿ ಒಂದೆರಡು ವರ್ಷ ಇಟ್ಟುಕೊಂಡು ಹಾನಗಲ್ ಕುಮಾರ ಸ್ವಾಮಿಗಳ ಅಣತಿಯಂತೆ ಶಿವಯೋಗಮಂದಿರಕ್ಕೆ ಕಳಿಸಿ, ಮುಂದೆ ಅವರು 360 ಪುಸ್ತಕಗಳನ್ನು ಬರೆದು, ನಡೆದಾಡುವ ವಿಶ್ವವಿದ್ಯಾಲಯವೆಂದೇ ಪ್ರಸಿದ್ದರಾಗಲು ಕಾರಣರಾದ ಅಡ್ನೂರಿನ ಮಲ್ಲಿಕಾರ್ಜುನ ಗೌಡರ ಮಗಳು.
ಆಧ್ಯಾತ್ಮದ ಸಂಸ್ಕಾರವುಳ್ಳ ಮನೆತನದಿಂದ ಬಂದ ಹೆಣ್ಣುಮಗಳು ಸಹಜವಾಗಿಯೇ ದಾಸೋಹ, ಆಧ್ಯಾತ್ಮದ ಪುಸ್ತಕಗಳನ್ನು ಓದುವುದು ಮತ್ತು ಚರ್ಚೆಯಲ್ಲಿ ತೊಡಗುವುದನ್ನು ರೂಢಿಸಿಕೊಂಡಿದ್ದರು ಮತ್ತು ಮನೆಗೆ ಬಂದ ಅತಿಥಿಗಳ ಆದರ -ಆತಿಥ್ಯದಲ್ಲಿ ಎತ್ತಿದ ಕೈ ಎಂದೇ ಹೇಳಬಹುದು. ಸೀರೆ -ಬಂಗಾರದ ಆಸೆಯಿಲ್ಲದ ಅಪರೂಪದ ಹೆಣ್ಣುಮಗಳು ನಮ್ಮ ತಾಯಿಯವರು.
ನಮ್ಮ ತಂದೆಯವರು ಲಿಂ. ಬಿ. ಎಂ. ಪಾಟೀಲ ಅವರು ರಾಜ್ಯ ಮಟ್ಟದ ಸರ್ಕಾರಿ ಅಧಿಕಾರಿಯಾಗಿ, ಒಬ್ಬ ನಿಷ್ಠಾವಂತರಾಗಿ ಶಿಸ್ತುಬದ್ಧತೆಯಿಂದ ಕೆಲಸ ಮಾಡಿದರು. ಅವರು ಮಲ್ಲಸಮುದ್ರದ ಸಹಕಾರಿ ಧುರೀಣರೆಂದೇ ಖ್ಯಾತಿಪಡೆದು, ಈಗಿನ ಗದಗ ಮೆಡಿಕಲ್ ಕಾಲೇಜು ( ಮೊದಲಿನ ಟಿ. ಬಿ. ಹಾಸ್ಪಿಟಲ್ ) ಸಲುವಾಗಿ 52 ಎಕರೆ ಭೂಮಿದಾನ ಮಾಡಿದ ಮಾರ್ತಾoಡಗೌಡರ ಸುಪುತ್ರರು.ತಮ್ಮ ಊರಿನಲ್ಲಿ ಹಲವಾರು ದೇವಸ್ಥಾನಗಳ ಜೀರ್ಣೋದ್ದಾರ, ಸಾಮೂಹಿಕ ಮದುವೆ, ಮತ್ತು ಸಹಾಯ ಕೇಳಿ ಬಂದ ಎಲ್ಲರಿಗೂ ತಮ್ಮ ಅಧಿಕಾರದ ಇತಿ -ಮಿತಿಯಲ್ಲಿ ಏನೂ ಅಪೇಕ್ಷೆ ಮಾಡದೆ ಲೆಕ್ಕವಿಲ್ಲದಷ್ಟು ಜನರಿಗೆ ಕೆಲಸ ಮಾಡಿ ಕೊಟ್ಟ ಮಹನೀಯರು.
ಇಬ್ಬರೂ ದಂಪತಿಗಳಿಗೆ ತಮ್ಮ ಮಕ್ಕಳಿಗಿಂತ ಸುತ್ತ ಮುತ್ತ ಇರುವ ಜನರಿಗೆ ಸ್ಪಂದಿಸಿ, ಅವರ ಕೆಲಸ -ಕಾರ್ಯಗಳನ್ನು ಮಾಡಿಕೊಡುವಲ್ಲೇ ಹೆಚ್ಚಿನ ಆಸಕ್ತಿ.
ನನ್ನ ತಂದೆ -ತಾಯಿಯ ಹೆಸರಿನಲ್ಲಿ ಆಗಸ್ಟ್ 24 ರಿಂದ ಸೆಪ್ಟೆಂಬರ್ 2 ನೆಯ ತಾರೀಕು ವರೆಗೆ ಹತ್ತು ದಿವಸ ನಮ್ಮ ಬಸವ ತಿಳುವಳಿಕೆ ಮತ್ತು ಸಂಶೋಧನಕೇಂದ್ರ -ಪುಣೆಯ ವಚನ ಅಧ್ಯಯನ ವೇದಿಕೆಯಿಂದ ನಡೆಯುತ್ತಿರುವ ಒಂದು ತಿಂಗಳು ಶ್ರಾವಣಮಾಸದ ಗೂಗಲ್ ಮೀಟ್ ನಲ್ಲಿ ದತ್ತಿ ಉಪನ್ಯಾಸಗಳು ಯಶಸ್ವಿಯಾಗಿ ಜರುಗಿದವು. ಇನ್ನೂ ಮೂರು ದಿವಸ ವಿವಿಧ ದತ್ತಿ ಉಪನ್ಯಾಸಗಳು ನಡೆಯುತ್ತವೆ. ಮೊದಲ ಹತ್ತು ದಿವಸ ಪ್ರೊ. ಶಾರದಮ್ಮ ಪಾಟೀಲ್ ಅವರ ದತ್ತಿದಾಸೋಹ, ನಂತರ ಹತ್ತು ದಿವಸ ಶರಣ ಶಿವಾನಂದ ಕಲಕೇರಿ ಅವರ ದತ್ತಿ ದಾಸೋಹ ನಡೆದವು.