ರೇವಣಸಿದ್ದರ ನಿಜ ಇತಿಹಾಸ 1-5
1) ರೇವಣಸಿದ್ಧರು: ನಾಥ ಗುರುವೋ ಅಥವಾ ವೀರಶೈವ ಆಚಾರ್ಯರೊ?
2) ಶರಣ ಚಳುವಳಿಯಿಂದ ದೂರವುಳಿದ ರೇವಣಸಿದ್ಧರು
3) ಆಚಾರ್ಯರಾಗಿ ಬದಲಾದ ರೇವಣಸಿದ್ಧರು
5) ರೇವಣಸಿದ್ಧರ ಭಕ್ತರ ಸೆಳೆದ ಚತುರಾಚಾರ್ಯರ ಪರಂಪರೆ
6) ಬಾಳೇಹಳ್ಳಿಯ ನಾಥ ಮಠ ಪಂಚಾಚಾರ್ಯ ಪೀಠವಾಯಿತು (1-5)
ರೇವಣಸಿದ್ಧರು ೧೧-೧೨ನೇ ಶತಮಾನಗಳಲ್ಲಿ ಜೀವಿಸಿದ್ದ ದೀರ್ಘಾಯುಷಿ. ಇವರು ಬಸವಣ್ಣನವರಿಗಿಂತ ಮುಂಚೆ ಹುಟ್ಟಿ ಕಲ್ಯಾಣ ಕ್ರಾಂತಿಯ ಕೊನೆಯವರೆಗೆ ಬದುಕಿದ್ದರು.
ಇವರಂತೆಯೇ ಕುರುಬ ಸಮಾಜದಿಂದ ಬಂದು ನಾಥ ಗುರುವಾದ ಸಿದ್ದರಾಮರು ಇವರ ಕಿರಿಯರು. ರೇವಣಸಿದ್ಧರ ಆಶೀರ್ವಾದದಿಂದಲೇ ಸಿದ್ದರಾಮರು ಜನಿಸಿದ ವಿಷಯ ಹಲವಾರು ಕೃತಿಗಳಲ್ಲಿ ಬರುತ್ತದೆ.
ಬಸವಣ್ಣನವರು ಕಟ್ಟಿದ ಶರಣ ಚಳುವಳಿಯಲ್ಲಿ ಸಿದ್ದರಾಮರು ತಮ್ಮ ಭಕ್ತರ ಜೊತೆ ಸೇರಿಕೊಂಡರು. ಆದರೆ ಅವರಿಬ್ಬರ ಹಿಂದಿನ ತಲೆಮಾರಿನ ರೇವಣ ಸಿದ್ದರು ನಾಥರಾಗಿಯೇ ಉಳಿದುಕೊಂಡರು.
ಇದರಿಂದ ಕುರುಬ ಸಮಾಜ ಕವಲೊಡೆಯಿತು. ಸಿದ್ದರಾಮರ ಶಿಷ್ಯ ಮಂಕಸಿದ್ದರ ಶಾಖೆ ಕುರುಬ ಜಾತಿ ಮತ್ತು ನಾಥ ಸಿದ್ದ ಪಂಥವನ್ನು ತ್ಯಜಿಸಿ ಶರಣ ಚಳುವಳಿಯಲ್ಲಿ ಲೀನವಾಯಿತು.
ರೇವಣಸಿದ್ದರ ಶಿಷ್ಯ ಶಾಂತ ಮುತ್ತಯ್ಯರ ಶಾಖೆ ನಾಥವಾಗಿಯೇ ಉಳಿದುಕೊಂಡಿತು. ಪ್ರಗತಿಪರ ಮಂಕಸಿದ್ದರ ಶಾಖೆಗಿಂತ ಶಾಂತ ಮುತ್ತಯ್ಯರ ಶಾಖೆಯಲ್ಲೇ ಹೆಚ್ಚಿನ ಭಕ್ತರು ಉಳಿದುಕೊಂಡರು.
ಚಿಕ್ಕನಾಯಕನ ಹಳ್ಳಿಯಲ್ಲಿರುವ ಸಿದ್ಧಮಂಕರ ಮಠದಲ್ಲಿ ಪೂಜೆ ಮಾಡುವವರು ಲಿಂಗಾಯತರು. ಆದರೆ ಅದೇ ಊರಿನಲ್ಲಿರುವ ರೇವಣಸಿದ್ದೇಶ್ವರರ ದೇವಸ್ಥಾನದಲ್ಲಿ ಪೂಜೆ ಮಾಡುವವರು ಕುರುಬರು.
(‘ಸಿದ್ದರಾಮ ಶಿವಯೋಗಿಯಾದ – ರೇವಣಸಿದ್ಧನನ್ನು ಶಿವಾಚಾರ್ಯ ಮಾಡಿದರು’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೩)