ಬೆಂಗಳೂರು
ಸಮಾಜದಲ್ಲಿ ವೈಚಾರಿಕ ಚಿಂತನೆ ಪ್ರೋತ್ಸಾಹಿಸಲು ಜಾಗತಿಕ ಲಿಂಗಾಯತ ಮಹಾಸಭಾ ‘ನಿಜ ಭಾರತ ದರ್ಶನ’ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ. ಆಸಕ್ತರು ನವೆಂಬರ್ 25ರ ಒಳಗೆ ಲೇಖನಗಳನ್ನು ಕಳುಹಿಸಲು ಪ್ರಕಟಣೆಯ ಮೂಲಕ ತಿಳಿಸಿದೆ.
ಒಂದು ತಜ್ಞರ ಸಮಿತಿ ಬಂದ ಲೇಖನಗಳನ್ನು ಪರಿಶೀಲಿಸಿ ವಿಜೇತರನ್ನು ಆಯ್ಕೆ ಮಾಡಲಾಗುವುದು. ಆಯ್ದ ಲೇಖನಗಳನ್ನು ಪುಸ್ತಕ ರೂಪದಲ್ಲಿಯೂ ಪ್ರಕಟವಾಗುವುದು. ವಿಜೇತರಿಗೆ 3,000 ರೂ (ಸಾಮಾಧಾನಕರ), 5,000 ರೂ (ತೃತೀಯ), 10,000 ರೂ (ದ್ವಿತಿಯ), 15,000 ರೂ (ಪ್ರಥಮ) ಬಹುಮಾನ ಕೂಡ ಘೋಷಿಸಲಾಗಿದೆ.
ಸ್ಪರ್ಧೆಯಲ್ಲಿ ಎರಡು ವಿಭಾಗಗಳಿದ್ದು, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸೂಕ್ತವಾದ ಎರಡು ಸರಳ ವಿಷಯಗಳನ್ನು ಗುರುತಿಸಲಾಗಿದೆ. ವಿವಿಧ ಹಿನ್ನಲೆಯ ಸಂಶೋಧನಾ ವಿದ್ಯಾರ್ಥಿಗಳುˌ ಚಿಂತಕರುˌ ಶಿಕ್ಷಕರುˌ ಪ್ರಾಧ್ಯಾಪಕರು ಮತ್ತು ಇತರ ಆಸಕ್ತರಿಗೆ ಹೊಂದುವಂತಹ 20 ವಿಷಯಗಳನ್ನೂ ಗುರುತಿಸಲಾಗಿದೆ.
ಜಾಗತಿಕ ಲಿಂಗಾಯತ ಮಹಾಸಭಾದ ಜೆ. ಎಸ್. ಪಾಟೀಲ್ ಭಾರತ ಬಹಳ ದರ್ಶನಗಳ, ಚಿಂತನೆಗಳ, ತತ್ವ ಸಿದ್ದಂತಗಳ ನಾಡು. ಈ ಬಹು ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳುವ ಅಗತ್ಯ, ಅದರ ಮುಂದಿರುವ ಸವಾಲುಗಳ ಬಗ್ಗೆ ಒಂದು ಚರ್ಚೆ ಹುಟ್ಟು ಹಾಕಲು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು.
ಸ್ಪರ್ಧೆ ಯಾವುದೇ ಸಮುದಾಯಕ್ಕೆ ಸೀಮಿತವಾಗಿಲ್ಲ. ಇದನ್ನು ವ್ಯಾಪಕವಾಗಿ ಹಂಚಿಕೊಂಡು ಎಲ್ಲರೂ ಭಾಗವಹಿಸಲು ಆಹ್ವಾನಿಸುತ್ತಿದ್ದೇವೆ. ಹಲವಾರು ಬೌದ್ಧ ವಿದ್ವಾಂಸರು ಅವರೇ ಸಂಪರ್ಕಿಸಿ ಲೇಖನ ಕಳುಹಿಸುವುದಾಗಿ ಹೇಳಿದ್ದಾರೆ.
ಸ್ಪರ್ಧೆ ಎಂದು ಯಾರೂ ಹಗುರವಾಗಿ ತೆಗೆದುಕೊಳ್ಳಬಾರದು. ನಾವು ಗುರುತಿಸಿರುವ ವಿಷಯಗಳು ಬಹಳ ಗಂಭೀರವಾದ, ಪ್ರಸ್ತುತವಾದ ವಿಷಯಗಳು. ಅವುಗಳ ಮೇಲೆ ಆಳವಾಗಿ ಅಧ್ಯಯನ ಮಾಡಿರುವ ವಿದ್ವಾಂಸರು, ಆಸಕ್ತರು ಇದರಲ್ಲಿ ಭಾಗವಹಿಸಬೇಕು. ಇದು ಸ್ಪರ್ಧೆಗಿಂತಲೂ ಒಂದು ಸತ್ಯ ಶೋಧನೆಯ ಪ್ರಯತ್ನವಾಗಿ ನೋಡಬೇಕೆಂದು ನಮ್ಮ ಕೋರಿಕೆ, ಎಂದು ಹೇಳಿದರು.
ಪ್ರಬಂಧ ಸ್ಪರ್ಧೆಯ ವಿಷಯಗಳು
ವಿಭಾಗ ಒಂದು
ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ
ವಿಷಯಗಳು:
೧. ವಚನ ಸಾಹಿತ್ಯವು ಕೇವಲ ಭಕ್ತಿ ಸಾಹಿತ್ಯ ಮಾತ್ರವಲ್ಲದೆ ಅದೊಂದು ಬಂಡಾಯ ಸಾಹಿತ್ಯ
೨. ವಚನ ದರ್ಶನ ಪುಸ್ತಕದ ವಿಮರ್ಶೆ.
ವಿಭಾಗ ಎರಡು
ಸಂಶೋಧನಾ ವಿದ್ಯಾರ್ಥಿಗಳುˌ ಚಿಂತಕರುˌ ಶಿಕ್ಷಕರುˌ ಪ್ರಾಧ್ಯಾಪಕರು ಮತ್ತು ಆಸಕ್ತರಿಗೆ.
ವಿಷಯಗಳು:
೧. ವಚನ ದರ್ಶನ ಪುಸ್ತಕ ವಿಮರ್ಶೆ
೨. ಸನಾತನ ವೈದಿಕ ಸಾಹಿತ್ಯ ಜೀವಪರವಾಗಿದೆಯೆ?
೩. ವಚನದರ್ಶನ ಪುಸ್ತಕ ಪ್ರಚಾರದ ಹಿಂದಿನ ಫ್ಯಾಸಿಷ್ಟರ ಹುನ್ನಾರಗಳು.
೪. ಶರಣ ಸಾಹಿತ್ಯ ಮತ್ತು ವೈದಿಕ ಸಾಹಿತ್ಯ ಇವುಗಳಲ್ಲಿ ಯಾವುದು ಜೀವನ್ಮುಖಿ? ಯಾವುದು ಜೀವವಿರೋಧಿ?
೫. ಪ್ರತಿಯೊಬ್ಬ ಪ್ರಜೆಗೂ ಸಂವಿಧಾನವು ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದರೂ RSS ಅದರಲ್ಲಿ ಹಸ್ತಕ್ಷೇಪ ಮಾಡುವುದರ ಹಿಂದಿನ ಹುನ್ನಾರವೇನು?
೬. ಸಾವರಕರ್ ಅವರ ಹಿಂದುತ್ವ ಗ್ರಂಥದಲ್ಲಿ ಲಿಂಗಾಯತ ಧರ್ಮದ ಬಗ್ಗೆ ಹೇಳಿದ್ದರೂ ಈಗ RSS ಅದನ್ನು ವಿರೋಧಿಸುತ್ತಿರುವುದೇಕೆ?
೭. ಮನುಸ್ಮೃತಿ ಯಾವ ಜನಪರ ಚಿಂತನೆ ಹೊಂದಿದೆ?
೮. ಗೀತೆಯು ಜನಾಂಗಭೇದ ಹಾಗು ಕರ್ಮಸಿದ್ಧಾಂತ ಸಾರುತ್ತದೆಯೆ?
೯. ಕಲ್ಯಾಣ ಕ್ರಾಂತಿ ನಡೆಯಲಿಲ್ಲ ಎನ್ನುವುದಾದಲ್ಲಿ ರಾಮಾಯಣˌ ಮಹಾಭಾರತ ಕಾವ್ಯಗಳು ಕಾಲ್ಪನಿಕವಲ್ಲವೆ?
೧೦. ಭಾರತದಲ್ಲಿ ಜೈನˌ ಬೌದ್ದˌ ಸಿಖ್ˌ ಲಿಂಗಾಯತ ಧರ್ಮಗಳು ಉದಯವಾಗಿದ್ದರ ಹಿನ್ನೆಲೆ ಏನು?
೧೧. ಬೌದ್ದ ˌ ಜೈನˌ ಸಿಖ್ ಮತ್ತು ಲಿಂಗಾಯತ ಧರ್ಮಗಳನ್ನು ನಾಶಗೊಳಿಸಲು ಯತ್ನಿಸಿದವರು ಯಾರು?
೧೨. ಸನಾತನ ಧರ್ಮವು ಶೂದ್ರರ ಅಜ್ಞಾನ ಮತ್ತು ಮೂರ್ಖತನದ ಮೇಲೆ ನಿಂತಿದೆ.
೧೩. ಭಾರತೀಯ ಅಧ್ಯಾತ್ಮಿಕ ಪರಂಪರೆ ಕೇವಲ ವೈದಿಕ ಧರ್ಮಕ್ಕೆ ಮಾತ್ರ ಸಿಮಿತವೆ?
೧೪. ವೈದಿಕ ಮೌಢ್ಯಗಳು ಭಾರತವನ್ನು ಶಿಥಿಲಗೊಳಿಸಿವೆಯೆ?
೧೫. ವೇದಗಳು ಹಾಗು ಮಾಹಾಕಾವ್ಯಗಳು ಪಾರ್ಸಿಗಳ ಅವೆಸ್ತಾ ˌ ರಷ್ಯಾದ ಸ್ಲಾವಿಕ್ ಆರ್ಯನ್ನರ ವೇದ ಹಾಗು ಬೌದ್ದರ ಜಾತಕ ಕತೆಗಳ ನಕಲುಗಳೆ?
೧೬. ಬಸವಣ್ಣನವರು ಜನಿವಾರ ಕಿತ್ತೆಸೆದು ವೈದಿಕ ಧರ್ಮವನ್ನು ತ್ಯಜಿಸಿದರ ಹಿಂದಿನ ಸಮಾಜೋ-ಧಾರ್ಮಿಕ ಸನ್ನಿವೇಷ ಎಂತದ್ದು?
೧೭. ಭಾರತದಲ್ಲಿ ೬೦೦ ವರ್ಷ ಮುಸ್ಲಿಮ್ ಆಳರಸರ ದಿವಾನಗಿರಿ ಮತ್ತು ಬ್ರಿಟೀಷ್ ಆಡಳಿತದ ಚಮಚಾಗಿರಿ ಮಾಡಿ ಹೆಚ್ಚು ಲಾಭ ಪಡೆದವರು ಯಾರು?
೧೮. ವೈದಿಕ ಫ್ಯಾಸಿಷ್ಟರು ಮತ್ತು ಮುಸ್ಲಿಮರ ಒಳ ನಂಟು ಎಂತದ್ದು?
೧೯. ಸನಾತನ ವೈದಿಕ ಧರ್ಮ ಮತ್ತು ಮುಸ್ಲಿಮ್ ಧರ್ಮಗಳ ನಡುವಿನ ಸಾಮ್ಯತೆ.
೨೦. ವೈದಿಕ ಪುರಾಣಗಳು ಎಷ್ಟು ವಿಶ್ವಾಸಾರ್ಹ?
ಪ್ರಬಂಧ ಕಳುಹಿಸುವ ಇ-ಮೇಲ್: darshanavaidika@gmail.com
ಇತ್ತೀಚೆಗೆ ಶರಣ ಸಮಾಜದ ಚಳುವಳಿ, ಸಾಮಾಜಿಕ ಕಳಕಳಿಯನ್ನು ನಿರಾಕರಿಸಲು ಪ್ರಯತ್ನಿಸುತ್ತಿರುವ ವಚನ ದರ್ಶನ ತಂಡ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿರುವ ಹಿನ್ನಲೆಯಲ್ಲಿ, ಜಾಗತಿಕ ಲಿಂಗಾಯತ ಮಹಾಸಭಾˌಕೂಡ ತನ್ನ ಪ್ರಬಂಧ ಸ್ಪರ್ಧೆಯನ್ನು ಘೋಷಿಸಿದೆ.
ಆಯೋಜಕರು ಪ್ರಬಂಧದ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಪ್ರಕುಲದ ಸ್ಪರ್ಧಾಳುಗಳ ಪಟ್ಟಿ ಕಳುಹಿಸಿದಲ್ಲಿ ಪ್ರತಿಯೊಬ್ಬರಿಗೂ “ಮಡಿವಾಳ ಮಾಚಿದೇವರ ವಚನ-ನಿರ್ವಚನ” ಗ್ರಂಥವನ್ನು ಉಚಿತವಾಗಿ ಕಳುಹಿಸುವೆ.