ನಮ್ಮ ತತ್ವ ಬಸವ ತತ್ವ

ಇಡೀ ವಿಶ್ವದಲ್ಲಿಯೇ ಬಹಳ ಉದಾತ್ತವಾದ, ವಿಶಿಷ್ಟವಾದ ಚಳುವಳಿ 12ನೇ ಶತಮಾನದ ಶರಣ ಚಳುವಳಿ. ಆದರೆ ಇಂದು ಶರಣ ಸಮಾಜದಲ್ಲಿ ನಮ್ಮ ಪರಂಪರೆಯ ಬಗ್ಗೆ ಸಾಕಷ್ಟು ಅರಿವು, ಜಾಗ್ರತಿ ಇಲ್ಲದಿರುವುದು ದುರಂತ. ನಾವೆಲ್ಲರೂ ಬಸವಾದಿ ಶರಣರ ತತ್ವ ವಿಚಾರಗಳನ್ನು ಜನರಿಗೆ ಮುಟ್ಟಿಸಲು ವಿಫಲರಾಗಿರುವುದು ಇದಕ್ಕೆ ಮುಖ್ಯ ಕಾರಣ. ಎಲ್ಲಾ ರೀತಿಯ ಮಾಧ್ಯಮಗಳನ್ನು, ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗೆ ಪರಿಣಾಮಕಾರಿಯಾಗಿ ಬಸವಾದಿ ಶರಣರ ತತ್ವ ಮುಟ್ಟಿಸುವುದು, ಸಮಾಜದಲ್ಲಿ ಬಸವಾದಿ ಶರಣರ ಮನಸ್ಥಿತಿಯನ್ನು ಬಿತ್ತುವುದು ಬಸವ ಮೀಡಿಯಾದ ಉದ್ಧೇಶ.

ಬಸವ ಮೀಡಿಯಾ ಯಾರೊಬ್ಬರ ಖಾಸಗಿ, ವೈಯಕ್ತಿಕ ಸ್ವತ್ತಲ್ಲ. ಇದು ಇಡೀ ಶರಣ ಸಮಾಜದ ಆಸ್ತಿ. ಸಮಾಜದ ಒಟ್ಟಾರೆ ಒಡೆತನದಲ್ಲಿ, ನಿರ್ದೇಶನದಲ್ಲಿ ನಡೆಯಲಿರುವ ಮಾಧ್ಯಮ.

ಬೆಂಗಳೂರಿನಲ್ಲಿ ನೋಂದಣಿಯಾಗಿರುವ ಐದು ಸದಸ್ಯರಿರುವ ಬಸವ ಮೀಡಿಯಾ ಟ್ರಸ್ಟ್ ಬಸವ ಮೀಡಿಯಾ ಟ್ರಸ್ಟಿನ ಆಡಳಿತಾತ್ಮಕ ನಿಯಂತ್ರಣದಲ್ಲಿದೆ.

ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ
https://basavamedia.com/basava-media-trust-registration/