‘ಭೂಮಿಯಲ್ಲಿ ಬಿತ್ತಿ ಬೆಳೆಯುವುದನ್ನೇ ಅಧ್ಯಾತ್ಮವೆಂದ ಒಕ್ಕಲಿಗ ಮುದ್ದಣ್ಣ’

ಸಿದ್ದಣ್ಣ ಅಂಗಡಿ
ಸಿದ್ದಣ್ಣ ಅಂಗಡಿ

ಗದಗ:

12ನೇ ಶತಮಾನದ ಅನುಭವ ಮಂಟಪದಲ್ಲಿ ಬಹುತೇಕ ಎಲ್ಲ ಕಾಯಕದ ಶರಣರಿದ್ದರು. ಕಾಯಕಕ್ಕೆ ಅಂದು ಬಹುದೊಡ್ಡ ಬೆಲೆ ಇತ್ತು. ಕಾಯಕ ಜೀವಿಗಳೆಲ್ಲ ತಮ್ಮ ಅನುಭವಗಳನ್ನು ಅನುಭಾವಗಳನ್ನಾಗಿಸಿ ವಚನ ರಚನೆ ಮಾಡಿ, ನವಸಮಾಜ ನಿರ್ಮಾಣದಂತಹ ಕಾರ್ಯಗಳನ್ನು ಹೇಗೆ ನೆರವೇರಿಸಬೇಕೆಂಬ ಚರ್ಚೆಗಳಲ್ಲಿ ತೊಡಗುತ್ತಿದ್ದರು ಎಂದು ಎಂ.ಬಿ. ಲಿಂಗದಾಳ ಹೇಳಿದರು.

ಬಸವ ಮಂಟಪದಲ್ಲಿ ಬಸವದಳದ ೧೬೭೭ನೇ ಶರಣ ಸಂಗಮ, ‘ಒಕ್ಕಲಿಗ ಮುದ್ದಣ್ಣನವರ ಜಯಂತಿ” ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃಷಿ ಕಾಯಕದ ಒಕ್ಕಲಿಗ ಮುದ್ದಣ್ಣ ಅನುಭಾವ ಮಂಟಪದ ಶರಣರಲ್ಲಿ ಒಬ್ಬರು. ಅವರು ಭೂಮಿಯಲ್ಲಿ ಉತ್ತಿ, ಬಿತ್ತಿ ಬೆಳೆಯುವಿಕೆಯನ್ನೇ ಆಧ್ಯಾತ್ಮಕವನ್ನಾಗಿಸಿಕೊಂಡಿದ್ದಾರೆ.ಅವರ ವಚನಗಳಲೆಲ್ಲ ಕೃಷಿ ಕಾಯಕವನ್ನೇ ಸುತ್ತುವರೆಯುತ್ತವೆ.

ಮುದ್ದಣ್ಣ ಶರಣರು ತಮ್ಮ ಕಾಯಕವನ್ನು ಸಾಂಕೇತಿಕವಾಗಿರಿಸಿಕೊಂಡು ದೇಹವೇ ಭೂಮಿ ಮಾಡಿಕೊಂಡು, ಬೆಳೆಯನ್ನು ಲಿಂಗಕ್ಕೆ ಹೋಲಿಸಿದ್ದಾರೆ.

ಲಿಂಗದ ಚೈತನ್ಯವೇ ಅವರಿಗೆ ಬೆಳೆಯಾಗಿ ಕಂಡಿದೆ. ದೇಹದ ಹಸಿವು ತಣಿಸಲು ಒಕ್ಕಲುತನ, ಅಂತರಂಗದ ಹಸಿವು ತಣಿಸಲು ಆಧ್ಯಾತ್ಮದ ಸಾಧನೆ ಬೇಕೆಂದು ವಚನಗಳ ಮೂಲಕ ತಿಳಿಸಿ ಲಿಂಗತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು  ಹೇಳುತ್ತಾರೆ.

ಮುದ್ದಣ್ಣನವರು ಅಂದೇ ಹೆಚ್ಚುವರಿ ಸುಂಕ ವಿಧಿಸಿದ ಪ್ರಭುತ್ವವನ್ನು ವಿರೋಧಿಸಿದ್ದರು. ಆ ಮೂಲಕ ಅವರು ಪ್ರಭುತ್ವಕ್ಕೆ ಸವಾಲು ಹಾಕಿದಂತವರು. ಶರಣರು ಯಾರಿಗೂ ಹೆದರದವರು, ಅನ್ಯಾಯದ ವಿರೋಧಿಗಳೆಂಬುದನ್ನು ಸಾಬೀತುಪಡಿಸಿದರು ಎಂದರು.

ಇದೇ ಸಂದರ್ಭದಲ್ಲಿ ಲಿಂಗದಾಳ ಅವರು ತಮ್ಮ ಥೈಲ್ಯಾಂಡ್‌ ಪ್ರವಾಸದ ಅನುಭವಗಳನ್ನು ಹಂಚಿಕೊಂಡರು.

ಅಧ್ಯಕ್ಷತೆಯನ್ನು ಬಸವದಳದ ಅಧ್ಯಕ್ಷರಾದ ವಿ.ಕೆ. ಕರೇಗೌಡ್ರ ವಹಿಸಿ ಮಾತನಾಡಿದರು. ಅತಿಥಿಗಳಾಗಿ ಪ್ರೊ. ಕೆ.ಎಚ್. ಬೇಲೂರ ಮಾತನಾಡಿದರು.

ಆರಂಭದಲ್ಲಿ ಬಸವದಳದ ಶರಣೆಯರಿಂದ ವಚನ ಪ್ರಾರ್ಥನೆ ಜರುಗಿತು.ನಾಗರತ್ನ ಅಸುಂಡಿ ಸ್ವಾಗತ ಕೋರಿದರು. ನಿರೂಪಣೆ ನೀಲಲೋಚನ ಹಂಚಿನಾಳ, ಕಳಕಪ್ಪ ವ್ಯಾಪಾರಿ ಶರಣು ಸಮರ್ಪಣೆಗೈದರು. ಪ್ರಸಾದ ವ್ಯವಸ್ಥೆಯನ್ನು ಸರೋಜಕ್ಕ ಲಿಂಗದಾಳ ವಹಿಸಿಕೊಂಡಿದ್ದರು. ವಚನದೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.

ಎಸ್.ಎನ್. ಹಕಾರಿ, ಸಿದ್ಧಲಿಂಗಪ್ಪ ಹಂಚಿನಾಳ, ಶಕುಂತಲಾ ಗುಡಗೇರಿ, ಚೆನ್ನು ಕಾಮಣ್ಣವರ, ಮೃತ್ಯುಂಜಯ ಜಿನಗಾ, ಮಂಜುನಾಥ ಅಂಗಡಿ, ಪ್ರಕಾಶ ಅಸುಂಡಿ, ಸಿದ್ದಣ್ಣ ಅಂಗಡಿ, ಗಿರಿಜಕ್ಕ ಧರ್ಮರೆಡ್ಡಿ, ಸುಜಾತ ವಾರದ, ದೀಪಾ ಕಾಮಣ್ಣವರ, ಗಂಗಮ್ಮ ಹೂಗಾರ, ರೇಣಕ್ಕ ಕರೇಗೌಡ್ರ, ಮಂಗಳಕ್ಕ ನಾಲ್ವಾಡ, ಪದ್ಮಾವತಿ ಹಂಜಿಗಿ ಮತ್ತಿತರರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *