ಬಾಳೇಹಳ್ಳಿಯ ನಾಥ ಮಠ ಪಂಚಾಚಾರ್ಯ ಪೀಠವಾಯಿತು

ರೇವಣಸಿದ್ದರ ನಿಜ ಇತಿಹಾಸ 1-5

1) ರೇವಣಸಿದ್ಧರು: ನಾಥ ಗುರುವೋ ಅಥವಾ ವೀರಶೈವ ಆಚಾರ್ಯರೊ?

2) ಶರಣ ಚಳುವಳಿಯಿಂದ ದೂರವುಳಿದ ರೇವಣಸಿದ್ಧರು

3) ಆಚಾರ್ಯರಾಗಿ ಬದಲಾದ ರೇವಣಸಿದ್ಧರು

4) ರೇವಣಾಚಾರ್ಯರ ಕಲ್ಪಿತ ಇತಿಹಾಸ

5) ರೇವಣಸಿದ್ಧರ ಭಕ್ತರ ಸೆಳೆದ ಚತುರಾಚಾರ್ಯರ ಪರಂಪರೆ

6) ಬಾಳೇಹಳ್ಳಿಯ ನಾಥ ಮಠ ಪಂಚಾಚಾರ್ಯ ಪೀಠವಾಯಿತು

ಬಾಳೇಹಳ್ಳಿಯ ರಂಭಾಪುರಿ ಪೀಠ ಸ್ಥಾಪನೆಯಾಗಿದ್ದು ೧೫ನೇ ಶತಮಾನದಲ್ಲಿ. ಮೂಲತಃ ವೀರಭದ್ರ ಭಕ್ತಿಯ ನಾಥ ಪಂಥಕ್ಕೆ ಸೇರಿದ್ದ ಈ ಪೀಠ ಕ್ರಮೇಣ ಪಂಚಾಚಾರ್ಯ ಪರಂಪರೆಗೆ ಸೇರಿಕೊಂಡಿತು.

ಶಾಸನ ಮತ್ತು ಕೃತಿಗಳು ಈ ಪೀಠದಲ್ಲಿ ಅಧಿಕಾರ ನಡೆಸಿದ ಮುನಿನಾಥ, ದಿಗಂಬರ ಮುನಿನಾಥ, ಕುಮಾರ ಚನ್ನಬಸವ ಮುಂತಾದವರನ್ನು ಹೆಸರಿಸುತ್ತವೆ. ಅವರೆಲ್ಲ ಐತಿಹಾಸಿಕ ವ್ಯಕ್ತಿಗಳು.

೧೬ನೇ ಶತಮಾನದ ಮದ್ಯದಲ್ಲಿ ಬದುಕಿದ್ದ ಕುಮಾರ ಚನ್ನಬಸವರು ಬಸವ ಭಕ್ತರು. “ಬಸವ ಪುರಾಣದ ಪ್ರಾಚೀನ ಚರಿತ್ರೆ” ಎಂಬ ಗ್ರಂಥವನ್ನು ಅವರು ರಚಿಸಿದರು.

ತಮ್ಮ ಕೃತಿಗಳಲ್ಲಿ ಕುಮಾರ ಚನ್ನಬಸವರು ತಾವು ಬಾಳೆಹಳ್ಳಿ ಪೀಠದ ಮುಕ್ತ ಮುನಿಯ ವಂಶಸ್ಥರು ಎಂದು ಕರೆದುಕೊಳ್ಳುತ್ತಾರೆ. ತಪ್ಪಿಯೂ ರೇವಣಸಿದ್ದರ ಹೆಸರು ಹೇಳುವುದಿಲ್ಲ.

ಅವರ ನಂತರ ಬಂದ ವಿರೂಪಾಕ್ಷ ಪಂಡಿತನ ಚನ್ನಬಸವ ಪುರಾಣದಲ್ಲಿ (೧೫೮೩) ರೇವಣಸಿದ್ದರು ಕಾಣಿಸಿಕೊಳ್ಳುತ್ತಾರೆ. ಈ ಕೃತಿಯಲ್ಲಿ ರಂಭಾಪುರಿ ಪೀಠದ ವಂಶಾವಳಿ ರೇವಣಸಿದ್ದರಿಂದ ಶುರುವಾಗುತ್ತದೆ.

ವಿರೂಪಾಕ್ಷ ಪಂಡಿತ ಚತುರಾಚಾರ್ಯರ ಪರಂಪರೆಯ ಕವಿ. ಪ್ರಸಿದ್ಧ ನಾಥ ಗುರುವನ್ನು ಚತುರಾಚಾರ್ಯರರಲ್ಲಿ ಒಬ್ಬರೆಂದು ಗುರುತಿಸುವ ಪ್ರಯತ್ನ ಅವನ ಕೃತಿಯಲ್ಲಿ ಕಾಣುತ್ತದೆ.

(‘ಬಾಳೇಹಳ್ಳಿಯಲ್ಲಿ ರಂಭಾಪುರಿ ಪೀಠ ಸ್ಥಾಪನೆಯ ಕಾಲ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೩)

Share This Article
Leave a comment

Leave a Reply

Your email address will not be published. Required fields are marked *