ಬಸವಣ್ಣನವರು, ಪಂಚಪೀಠಗಳು ಶತ್ರುಗಳಲ್ಲ: ಶ್ರೀಶೈಲ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಬಸಣ್ಣನವರಿಗೂ ಪಂಚಪೀಠಗಳು ಬೇಕು, ಪಂಚಪೀಠಗಳಿಗೆ ಬಸವಣ್ಣನವರೂ ಬೇಕು ಎನ್ನುವದಕ್ಕೆ ಈ ಕಾರ್ಯಕ್ರಮಕ್ಕೆ ನಾವು ದಯ ಮಾಡಿಸಿರುವುದು ಪ್ರತ್ಯಕ್ಷ ಸಾಕ್ಷಿ, ಎಂದು ಡಾ.ಚನ್ನಸಿದ್ದರಾಮ ಶಿವಾಚಾರ್ಯ ಹೇಳಿದರು.

ಗಜೇಂದ್ರಗಡ

56
ಬಸವಣ್ಣನವರು ಮತ್ತು ಪಂಚಾಚಾರ್ಯರು

ಬಸವಣ್ಣನವರು, ಪಂಚಪೀಠಗಳು ಶತ್ರುಗಳಲ್ಲ ಎಂದು ಶ್ರೀಶೈಲ ಶ್ರೀಗಳು ಹೇಳಿದ್ದಾರೆ. ಇದಕ್ಕೆ ಕಾರಣ:

ಬಸವಣ್ಣನವರಿಗೆ ಹಾಗೂ ಪಂಚಪೀಠಗಳು ಎಣ್ಣೆ, ಸೀಗೆಕಾಯಿ, ಬಸವ ತತ್ವ ಎಂದರೆ ಪಂಚ ಪೀಠಗಳಿಗೆ ಆಗುವುದಿಲ್ಲ, ಬಸವ ಪರಂಪರೆಯವರಿಗೆ ಪಂಚಪೀಠಗಳು ಆಗುವುದಿಲ್ಲ, ಎನ್ನುವುದು ಸರಿಯಲ್ಲ ಎಂದು ಶ್ರೀಶೈಲಂ ಸೂರ್ಯಸಿಂಹಸಾನ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಶಿವಾಚಾರ್ಯ ಭಗವತ್ಪಾದರು ಸೋಮವಾರ ಹೇಳಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಬಸವ ಪುರಾಣ ಪ್ರವಚನದ 24ನೇ ದಿನದ ಸಾನಿಧ್ಯವಹಿಸಿ ಮಾತನಾಡಿದರು.

ಕಂದಕ ಸೃಷ್ಟಿಸಬೇಡಿ

ಬಸಣ್ಣನವರಿಗೂ ಪಂಚಪೀಠಗಳು ಬೇಕು, ಪಂಚಪೀಠಗಳಿಗೆ ಬಸವಣ್ಣನವರೂ ಬೇಕು ಎನ್ನುವದಕ್ಕೆ ಈ ಕಾರ್ಯಕ್ರಮಕ್ಕೆ ನಾವು ದಯ ಮಾಡಿಸಿರುವುದು ಪ್ರತ್ಯಕ್ಷ ಸಾಕ್ಷಿ, ಎಂದು ಡಾ.ಚನ್ನಸಿದ್ದರಾಮ ಶಿವಾಚಾರ್ಯ ಹೇಳಿದರು.

ಆದರೂ ಎರಡು ಪರಂಪರೆಗಳ ಮಧ್ಯದಲ್ಲಿ ಕಂದಕ ನಿರ್ಮಾಣ ಮಾಡುವಂತಹ ಕೆಲ ಜನರು ಇದ್ದಾರೆ. ಅವರಿಗೆ ಇತಿಹಾಸವೂ ಗೊತ್ತಿಲ್ಲ, ಹಾಗೂ ಭವಿಷ್ಯವೂ ಬೇಕಾಗಿಲ್ಲ, ಎಂದರು.

ಅವಿನಾಭಾವ ಸಂಬಂಧ

ಬಸವಣ್ಣನವರು ಸಮಾನತೆ ತರಲು ಪ್ರಯತ್ನಿಸಿದಾಗ ಜಾತಿಯ ವ್ಯವಸ್ಥೆಗಳ ಕೆಂಗಣ್ಣು ಅವರ ಮೇಲೆ ಬಿದ್ದಿತ್ತು. ಆಗಿನ ಘಟನೆಗಳನ್ನು ನಾವೆಲ್ಲರೂ ಗಮನಿಸಿದರೆ ಶ್ರೀಶೈಲ ಪೀಠಕ್ಕೂ ಬಸವಣ್ಣನವರಿಗೂ ಎಂತಹ ಅವಿನಾಭಾವ ಸಂಬಂಧವಿತ್ತು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದು ಎಂದರು.

ಶರಣರು ಹೊಸ ಸಮಾಜ ಕಟ್ಟುವ ಪ್ರಯತ್ನದಲ್ಲಿದ್ದಾಗ ಅಂದಿನ ಶ್ರೀಶೈಲ ಮಠದ ಜಗದ್ಗುರು ಮಲ್ಲಿಕಾರ್ಜುನ ಪಂಡಿತಾರಾಧ್ಯರಿಗೆ ಕಲ್ಯಾಣಕ್ಕೆ ಬರಲು ಬಸವಣ್ಣನವರು ಸ್ವತಃ ಆಮಂತ್ರಣ ಕೊಟ್ಟಿದ್ದರು.

ಅದನ್ನು ಒಪ್ಪಿಕೊಂಡು ಪಂಡಿತಾರಾಧ್ಯರು ಆಗಮಿಸುತ್ತಿರುವಾಗ ಕಲ್ಯಾಣದಲ್ಲಿ ಕ್ರಾಂತಿ ಶುರುವಾಗುತ್ತದೆ. ಬಸವಣ್ಣನವರನ್ನು ಕಲ್ಯಾಣದಿಂದ ಗಡಿಪಾರು ಮಾಡುವ ಸಂದರ್ಭ ಸೃಷ್ಟಿ ಆಗುತ್ತದೆ.

ಪಂಡಿತಾರಾಧ್ಯರು ಕಲ್ಯಾಣಕ್ಕೆ ಆಗಮಿಸುತ್ತಿರುವ ವಿಷಯ ತಿಳಿದು ಬಸವಣ್ಣನವರು ತಮ್ಮ ಆಪ್ತರನ್ನು ಕಳುಹಿಸಿ ಅವರನ್ನು ಶ್ರೀಶೈಲಕ್ಕೆ ಹಿಂತಿರುಗಲು ವಿನಂತಿ ಮಾಡಿದಾಗ ಪಂಡಿತಾರಾಧ್ಯರು ಅಳಲು ಗೀತೆ ಬರೆದಿದ್ದಾರೆ, ಎಂದು ಹೇಳಿದರು.

ಗಜೇಂದ್ರಗಡದ ಬಸವ ಪುರಾಣ

ಗಜೇಂದ್ರಗಡದಲ್ಲಿ ನಡೆದ ಹಾಗೆ ಬಸವ ಪುರಾಣ ಎಲ್ಲಾ ನಡೆಯಬೇಕು. ಅನವಶ್ಯಕವಾಗಿ ಯಾವುದೇ ಪರಂಪರೆ, ಆಚಾರ, ವಿಚಾರವನ್ನು ನಿಂದಿಸದೆ, ಎಲ್ಲರನ್ನು ಸಮಾನಾತ್ಮಕ ದೃಷ್ಠಿಕೋನದಿಂದ ನೋಡುವ ಬಸವ ಪುರಾಣ ಗಜೇಂದ್ರಗಡದಲ್ಲಿ ನಡೆಯುತ್ತಿದೆ ಎಂದರು.

ವೇದಾದೀಕ್ಷೆ, ಮಂತ್ರದೀಕ್ಷೆ ಮತ್ತು ಕ್ರಿಯಾದೀಕ್ಷೆ

ಪಂಚಪೀಠಗಳು ಸನಾತನ ಕಾಲದಿ೦ದಲೂ ಯಾವುದೇ ತಾರತಮ್ಯವಿಲ್ಲದೆ ಸರ್ವ ಜನರಿಗೂ
ಧರ್ಮದ ಸಂಸ್ಕಾರಗಳನ್ನು ನೀಡುವುದರ ಜತೆಗೆ ನೈತಿಕ ಮಾರ್ಗದರ್ಶನ ಮಾಡುತ್ತಾ ಬಂದಿವೆ, ಇದೇ ಹಾದಿಯಲ್ಲಿ ಬಸವಾದಿ ಶಿವಶರಣರು ನಡೆದ ಬಂದಿರುವುದು ಗೌರವಾರ್ಥವಾಗಿದೆ ಎಂದು ವಿವರಿಸಿದರು.

ವೀರಶೈವ ಲಿಂಗಾಯತ ಧರ್ಮದಲ್ಲಿ ಶ್ರೀ ಗುರುವಿನಿಂದ ಲಿಂಗದೀಕ್ಷೆ ಜಾತಿ ಭೇದವಿಲ್ಲದೆ ಸರ್ವರೂ ಪಡೆದುಕೊಳ್ಳಲು ಮುಕ್ತ ಅವಕಾಶವಿದೆ. ಗುರುವು ಇಷ್ಟಲಿಂಗ ದೀಕ್ಷೆ ಮತ್ತು ಅಯ್ಯಚಾರಗಳನ್ನು ನೀಡುವ ಸಂದರ್ಭದಲ್ಲಿ ವೇದಾದೀಕ್ಷೆ, ಮಂತ್ರದೀಕ್ಷೆ ಮತ್ತು ಕ್ರಿಯಾದೀಕ್ಷೆ ಎಂಬ ಮೂರು ಪ್ರಕಾರದ ದೀಕ್ಷೆಗಳನ್ನು ನೀಡಬಹುದು, ಎಂದರು.

ವಿಧಾನ ಪರಿಷತ್‌ ಸದಸ್ಯ ಎಸ್. ವಿ.ಸಂಕನೂರ ಮಾತನಾಡಿ, `ಬಸವಾದಿ ಶರಣರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಬಸವ ಪುರಾಣದ ಸಾರ್ಥಕತೆ ಸಿಗುತ್ತದೆ’ ಎಂದರು.

ಕಾರ್ಯಕ್ರಮದಲ್ಲಿ ಬಸವಲಿಂಗ ಸ್ವಾಮೀಜಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ನರೇಗಲ್‌ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಆಶಿರ್ವಚನ ನೀಡಿದರು. ವೇದಿಕೆಯಲ್ಲಿ ಯಲಬುರ್ಗಾ ಶ್ರೀಧರಮುರಡಿ ಹಿರೇಮಠದ ಬಸವಲಿಂಗ ಸ್ವಾಮೀಜಿ, ಧಾರವಾಡದ ಎ.ಪಿ.ಪಾಟೀಲ ದೇವರು ಸೇರಿದಂತೆ ಶಾಸಕ ಜಿ.ಎಸ್‌.ಪಾಟೀಲ, ಗಜೇಂದ್ರಗಡ-ಉಣಚಗೇರಿ ವೀರಶೈವ-ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ, ಮುಖಂಡರಾದ ಅಮರೇಶ ಗಾಣಿಗೇರ, ಪ್ರಭು ಚವಡಿ, ಶರಣಪ್ಪ ಬೆಟಗೇರಿ, ಅಪ್ಪು ಮತ್ತಿಕಟ್ಟಿ, ಅಮರೇಶ ಗೌರಿಮಠ ಇದ್ದರು.

Share This Article
12 Comments
  • ಪಂಚಪೀಠಗಳಲ್ಲಿ ರಂಭಾಪುರಿ ಪೀಠವು ಸಂಪೂರ್ಣ ಬಸವಣ್ಣನವರಿಗೆ ವಿರೋದಿಯಾಗಿದೆ ಇತ್ತೀಚೆಗೆ ಉಳಿದ ಪೀಠಗಳು ಬಸವಣ್ಣನವರನ್ನ ಒಪ್ಪಿಕೊಳ್ಳುವ ಹಂತಕ್ಕೆ ಬಂದಿವೆ.
    ಸ್ವಾಮೀಜಿಯವರ ಈ ದಿನದ ಹೇಳಿದೆ ಸದ್ಯಕ್ಕೆ ಸಂತೋಷದ ವಿಷಯ ಆದರೆ ಅವರುಗಳು ಸಂಪೂರ್ಣ ಬಸವಣ್ಣನವರನ್ನ ಒಪ್ಪಿಕೊಳ್ಳದಿದ್ದಲ್ಲಿ ಅವರಿಗೆ ಉಳಿಗಾಲವಿಲ್ಲ

    • ಮುಳುಗುತ್ತಿರುವ ಪೀಠಗಳಿಗೆ ಕೊನೆಗೂ ಬಸವತತ್ವ ಜೀವರಕ್ಷಕವಾಗಿ ಕಾಣುತ್ತಿರುವುದು ಆಶ್ಚರ್ಯದ ವಿಷಯವೇನಲ್ಲ. ಇನ್ನು ಮೇಲಾದರೂ ಸಿದ್ಧಾಂತ ಶಿಖಾಮಣಿಯಂತಹ ಖೊಟ್ಟಿ ಕಂತೇ ಪುರಾಣದ ಹಂಗು ತೊರೆದು ಪರಿಶುಭ್ರ ಬಸವತತ್ವ ಬೋಧನೆ ಪ್ರಚಾರ ಪ್ರಸಾರ ಪಾಲನೆಯಲ್ಲಿ ಪಂಪೀಗಳು ತೊಡಗುವ ಮೂಲಕ ಉಳಿದಿರಬಹುದಾದ ಅಲ್ಪಸ್ವಲ್ಪ ಮಾನವನ್ನು ಉಳಿಸಿಕೊಳ್ಳುವಂತಾಗಲಿ!

    • ಕ್ಷಮಿಸಿ, ಪಂಚಪೀಠಗಳಿಗೆ ಬಸವಣ್ಣನವರ ಅವಶ್ಯಕತೆಯಿರಬಹುದು ಆದರೆ ಬಸವಣ್ಣನವರಿಗೆ ಪಂಚಪೀಠದ ಅವಶ್ಯಕತೆಯಿಲ್ಲ. ವೀರಶೈವ ಲಿಂಗಾಯತ ಅಂತ ಯಾವುದೇ ಜಾತಿ ಅಥವಾ ಸಮುದಾಯ ಇಲ್ಲ. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಬೇಕೆಂಬ ಬೇಡಿಕೆ ಚಳುವಳಿ ರೂಪ ಪಡೆದಾನಂತರ ಇತ್ತೀಚಿನ ದಿನಗಳಲ್ಲಿ ಈ ಹೊಸ ಧರ್ಮವನ್ನು ಹುಟ್ಟು ಹಾಕಿದ್ದಾರೆ. ವೀರಶೈವ ಇದೆ ಲಿಂಗಾಯತ ಇದೆ, ಆದರೆ ವೀರಶೈವ ಲಿಂಗಾಯತ ಅಂತ ಇಲ್ಲ. ಈ ವಿಷಯದಲ್ಲಿ ಯಾವುದೇ ಗೊಂದಲಗಳನ್ನು ಸೃಷ್ಟಿಸುವ ಅಗತ್ಯವಿಲ್ಲ. ಬಸವತತ್ವ ನಂಬಿಕೆಯಿರುವ ಯಾರೇ ಆದರೂ ಲಿಂಗಾಯತರಾಗಬಹುದು.

      • ಗುರು ವಿರಕ್ತರು ಇವರೆಲ್ಲ ಒಂದೇ.ನಾಣ್ಯದ ಎರಡು ಮುಖಗಳು,ಪಂಚಾಚಾರ್ಯರು ಬಸವಣ್ಣನವರ ಬಹಿರಂಗ ವಿರೋಧಿಗಳು, ವಿರಕ್ತರು
        ಅಂತರಂಗ ವಿರೋಧಿಗಳು, ಕೆಲ್ವರು ಹೊರತುಪಡಿಸಿ.

        ಇದೆ ಶ್ರೀಶೈಲ ಸ್ವಾಮಿಗಳು ಇಳಕಲ್ ಮಠಕ್ಕೆ ಮಠಾಧೀಶ ಆಗಲು ಪ್ರಯತ್ನ ಪಟ್ಟರೂ ,ಆಗಿದ್ದರೆ ಬಸವಣ್ಣ ನವರನ್ನು ಗುರು ಎಂದು.ಒಪ್ಪುತ್ತಿದ್ದರು. ಪಂಚಾಚಾರ್ಯರು ಸನಾತನಿ ತತ್ವದವರು. ಇವರು ನಂಬಿಕೆಗೆ ಅರ್ಹರಲ್ಲ. ಅಯ್ಯಾಚರ ಜಂಗಮ ವಟುಗಳಿಗೆ.ಮಾತ್ರ ಏಕೆ. ಮಹಿಳೆಯರಿಗೆ ಏಕೆ.ಇಲ್ಲ. ಪಂಚಾಚಾರ್ಯರು ಬಸವಣ್ಣ ನವರನ್ನು ಲಿಂಗಾಯತ ಧರ್ಮ ಗುರು ಎಂದು ಒಪ್ಪಬೇಕು,ವಚನ ಸಾಹಿತ್ಯ ಧರ್ಮ ಗ್ರಂಥ ಎಂದು.ಒಪ್ಪಬೇಕು. ಅವಾಗ ನೋಡೋಣ. ಶರಣು

  • ಪಂಚಪೀಠಗಳಿಗೆ ಬಸವಣ್ಣ ಬೇಕಿರಬಹುದು ಆದರೆ ಬಸವಣ್ಣನವರಿಗೆ ಪಂಚಪೀಠಗಳ ಅವಶ್ಯಕತೆ ಇಲ್ಲಾ

    • ಶ್ರೀ ಶೈಲ ಪೀಠದ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಬಸವಣ್ಣನವರನ್ನು ಮೆಚ್ಚಿ ಅವರ ತತ್ವವನ್ನು ಒಪ್ಪಿಕೊಂಡಿದ್ದರು ಅವರನ್ನು ತಮ್ಮ ವಚನಗಳಲ್ಲಿ ಸೀಮೆ ಸಾಯುಜ್ಯ ಮೀರಿದ ಗುರು ಎಂದು ಕರೆದಿರುವದಂನ್ನಿ

      ನೀವು ಅವರಂತೆ ಬಸವಣ್ಣ ನವರನ್ನು ಗುರು ಎಂದು ಒಪ್ಪುವ ತನಕ ಬಸವಣ್ಣ ಮತ್ತು ಪಂಚ ಪೀಠಗಳು ಒಂದಾಗಲು ಸಾಧ್ಯವಾಗದು. ಇದು ಪ್ರತಿಷ್ಠೆ ಮಾತಲ್ಲ, ಅಮೂಲ್ಯ ಲಿಂಗಾಯತ ತತ್ವವನ್ನು ನೀಡಿದ ಮಹಾಪುರುಷ ಬಸವಣ್ಣನವರನ್ನು ನಮ್ಮ ಶಿಷ್ಯ ಎಂಫುದು ಹೇಳುವ ನಿಮಗೆ ಬಸವರ ಕುರಿತು ಮಾತನಾಡುವ ಹಕ್ಕಿಲ್ಲ.

  • ಪಂಚಪೀಠಗಳರಲಿ ಇಲ್ಲಿವೇ ಮತ್ಯಾವದೇ ಪೀಠವಿರಲಿ ವಿಶ್ವಗುರು ಬಸವಣ್ಣನವರನ್ನ ಬಿಟ್ಟರೆ ಭವಿಷ್ಯವೇ

    ಇಲ್ಲ.

  • ನೀಲಕಂಠ ಗೌಡ ಪಾಟೀಲ ,ಗಡ್ಡಿಕರವಿನಕೊಪ್ಪ, ಬೈಲಹೊಂಗಲ ತಾಲೂಕ್. says:

    ನಿಮ್ಮ ಪಂಚ ಪೀಠಗಲು ಬಸವ ತತ್ವ ,ಲಿಂಗ ತತ್ವ ವನ್ನ ಒಪ್ಪಿಕೊಂಡು ಬಂದರೆ ಅವಕಾಶ, ಇಲ್ಲಾಂದರೆ ನಮಗೆ ಯಾವ ಪೀಠಗಳ ಅವಶ್ಯಕತೆಯೂ ಇಲ್ಲ.

  • ಶ್ರೀಶೈಲದ ಸ್ವಾಮಿಗಳು ಹೇಳಿರುವ ವಿಷಯದ ಕೂರಿತು ಬಸವಪಥಿಕರು ಮರುಳಾಗುವದು ಸರಿಯಲ್ಲ ಬಸವಣ್ಣನವರಿಗೆ ಪಂಚಪೀಠ ಬೇಕಾಗಿರಲಿಲ್ಲ ಅವರು ಪೀಠ ಸಂಸ್ಕೃತಿಯವರಲ್ಲ ಈ ಈಗ ಪಂಚಪೀಠದವರಿಗೆ ಬಸವಣ್ಣನವರನ್ನು ಕಡೆಗಣಿಸಿದರೆ ಅವರ ಬದುಕಿಗೆ ಗತಿಯಲ್ಲವೆಂಬ ಸತ್ಯ ಅವರಿಗೆ ಅರಿವಿಗೆ ಬಂದಂತೆ ಕಾಣುತ್ತದೆ ನೀವೂ ಬಸವಣ್ಣನವರನ್ನು ಗುರುವೆಂದು ಒಪ್ಪಿಕೊಂಡು ಬಂದಲ್ಲಿ ನಾವೂ ಸಂತೋಷಪಡುತ್ತೇವೆ ಗುರುಗಳೆ.

  • ಬಸವಣ್ಣನವರಿಗೆ ಪಂಚಪೀಠಗಳು ಬೇಕಾಗಿಲ್ಲ. ಜಾತಿ ಜಂಗಮರನ್ನು, ಜಾತಿ ಬ್ರಾಹ್ಮಣರನ್ನು, ಅಸಂಬದ್ಧ ಪೌರಾಣಿಕ ಕಥೆಗಳನ್ನು ಬಸವಣ್ಣನವರು ಎಂದೋ ತಿರಸ್ಕರಿಸಿದ್ದಾರೆ.

  • Panchpeethas are not necessary for Lord Basavanna. But Basavanna is necessary for Pancha peethas. This is the fact Swamy.

  • Bsavanna panchapeetagalege shathruvalla
    Panchapeetagalu. Basavannana Shathrugalu.

    Nemma siddantha
    Basava siddantha opposite direction
    Nemma guru hutttiddu Reneka kallenenda
    Basavanna huttiddu thaye garbha denda.

Leave a Reply

Your email address will not be published. Required fields are marked *