ಚನ್ನಬಸವಣ್ಣ ಚರಿತ್ರೆ 12: ಘಟಚಕ್ರ ಭಾಗ 1

ಅವಿರಳಜ್ಞಾನಿ ಚನ್ನಬಸವಣ್ಣನವರು ಕರಣ ಹಸಿಗೆಯ ಮುಂದುವರಿದ ಭಾಗವಾಗಿ ಘಟಚಕ್ರ ಎಂಬ ಇನ್ನೊಂದು ಮಹತ್ವದ ಗ್ರಂಥವನ್ನು ರಚಿಸಿದ್ದಾರೆ. ಘಟ ಎಂದರೆ ದೇಹ, ಈ ದೇಹದೊಳಗಿರುವ ಚಕ್ರಗಳನ್ನು ಅಧ್ಯಯನ ಮಾಡುವ ಶಾಸ್ತ್ರಗ್ರಂಥವಿದು. ದೇಹದ ಸಂಪೂರ್ಣ ಅರಿವು ನಮಗಾದರೆ, ಬದುಕಿನ ಪರಮ ಸತ್ಯವನ್ನು ಅರಿತುಕೊಳ್ಳಲು ಸಾಧ್ಯ ಎಂಬುದನ್ನು ಚನ್ನಬಸವಣ್ಣನವರು ಈ ಕೃತಿಯಲ್ಲಿ ನಮಗೆ ತೋರಿಸಿಕೊಟ್ಟಿದ್ದಾರೆ. ದೇಹದೊಳಗೆ ಇರುವ ಪ್ರತಿಯೊಂದು ವಸ್ತುಗಳ ವಿವರಗಳನ್ನು ಎಷ್ಟು ಸ್ಪಷ್ಟವಾಗಿ ನೀಡುತ್ತಾರೆ ಎಂದರೆ, ಪ್ರಾಯಶಃ ಆಧುನಿಕ ವೈದ್ಯರಿಗೂ ಈ ದೇಹದ ಒಟ್ಟು ನೋಟವನ್ನು ಇಷ್ಟು ಸ್ವಾರಸ್ಯವಾಗಿ, ಸರಳವಾಗಿ ಹೇಳಲು ಸಾಧ್ಯವಿಲ್ಲ. ಅಂತಹ ಮೌಲಿಕ ವಿಚಾರಗಳನ್ನು ಈ ಘಟಚಕ್ರ ಕೃತಿಯಲ್ಲಿ ಚನ್ನಬಸವಣ್ಣನವರು ಕೊಡಮಾಡಿದ್ದಾರೆ. ಚನ್ನಬಸವಣ್ಣನವರು ಬರೆದ ಕರಣಹಸಿಗೆ, ಮಿಶ್ರಾರ್ಪಣ, ಮಂತ್ರಗೋಪ್ಯ, ಹಿರಿಯ ಮಂತ್ರಗೋಪ್ಯ ಮೊದಲಾದ ಕೃತಿಗಳಂತೆಯೇ ಘಟಚಕ್ರವು ಅಧ್ಯಯನಯೋಗ್ಯ ಕೃತಿಯಾಗಿದೆ. ಪ್ರಾಯಶಃ ಭಾರತೀಯ ಅಧ್ಯಾತ್ಮ ಶಾಸ್ತ್ರವನ್ನು ಅಧ್ಯಯನ ಮಾಡುವ ಯಾರೇ ಆಗಲಿ ಈ ಕೃತಿಯನ್ನು ಅವಲೋಕಿಸಿದರೆ, ಅವರಿಗೆ ಪರಮಪ್ರಯೋಜನವಾಗುವ ಅಂಶಗಳು ಖಂಡಿತವಾಗಿಯೂ ದೊರೆಯುತ್ತವೆ. ಚನ್ನಬಸವಣ್ಣನವರು ಲಿಂಗಾಯತ ಧರ್ಮವನ್ನು ಸ್ವೀಕರಿಸುವ ಸಾಧಕರು, ತಮ್ಮ ಲಿಂಗಯೋಗದ ಸಾಧನೆಯೊಂದಿಗೆ, ಪರಮಾನಂದಸ್ಥಿತಿಯನ್ನು ಅನುಭವಿಸುವ ಮಾರ್ಗವನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ. ನಮ್ಮ ಭಾರತೀಯ ಚಿಂತಕರು ಹಠಯೋಗ, ಲಯಯೋಗ, ರಾಜಯೋಗ, ಮಂತ್ರಯೋಗಗಳ ಬಗ್ಗೆ ಮಾತ್ರ ಪ್ರತಿಪಾದಿಸಿದ್ದಾರೆ. ಈ ಯೋಗಗಳು ಸಾಧಕನು ಪರಮಗಂತವ್ಯವನ್ನು ಸಾಧಿಸಲು ಹೇಗೆ ತೊಡಕಾಗುತ್ತವೆ, ಮತ್ತು ಈ ಎಲ್ಲ ಯೋಗಗಳಿಗಿಂತ ಬಹುಮುಖ್ಯವಾದ ಶಿವಯೋಗ ಕುರಿತು ಹೇಳುವುದರೊಂದಿಗೆ ಕೃತಿ ಮುಕ್ತಾಯವಾಗುತ್ತದೆ.

ಘಟಚಕ್ರವನ್ನು ಕುರಿತು ನಮ್ಮ ಲಿಂಗಾಯತ ವಿದ್ವಾಂಸರು ಹೆಚ್ಚು ಬರೆದಿಲ್ಲ. 1956ರಲ್ಲಿ ಅನ್ನದಾನಯ್ಯ ಪುರಾಣಿಕ ಅವರು ಚೆನ್ನಬಸವ ಸಾಹಿತ್ಯ ಎಂಬ ಹೆಸರಿನಲ್ಲಿ ಈ ಘಟಚಕ್ರವನ್ನು ಮೊಟ್ಟಮೊದಲು ಪ್ರಕಟಿಸಿದ್ದರು. ಅಧ್ಯಾತ್ಮ ಸಾಧಕರ ಕೈದೀವಿಗೆಯಾಗಿರುವ ಈ ಕೃತಿಯನ್ನು ನಮ್ಮ ಲಿಂಗಾಯತ ಮಠಾಧೀಶರು ತಮ್ಮ ಬದುಕಿನ ಪಠ್ಯದಂತೆ ಪರಿಭಾವಿಸಿ ಅಧ್ಯಯನ-ಅನುಸಂಧಾನ ಮಾಡಬೇಕು.

ಚನ್ನಬಸವಣ್ಣನವರ ಅವಿರಳಜ್ಞಾನಕ್ಕೆ ಈ ಕೃತಿ ಉಜ್ವಲ ನಿದರ್ಶನವಾಗಿದೆ. ಈ ಕೃತಿಯಲ್ಲಿ ಅಡಕವಾಗಿರುವ ಮೌಲಿಕ ವಿಚಾರಗಳನ್ನು ಪ್ರಸ್ತುತ ಈ ಲೇಖನದಲ್ಲಿ ಮಾಡುವ ಪ್ರಯತ್ನ ಮಾಡಲಾಗಿದೆ.

ಈ ಕೃತಿಯಲ್ಲಿ ಬರುವ ಮುಖ್ಯ ವಿಷಯಗಳು ಹೀಗಿವೆ:

ಸೃಷ್ಟಿಯ ಉತ್ಪತ್ತಿ-ಸ್ಥಿತಿ-ಲಯ – ಶರೀರ ರಚನೆ – ಅಧ್ಯಾತ್ಮ ಆದಿಭೂತ, ಆದಿದೈವತ-ಜೀವ-ದೇಹ – ಜ್ಞಾನೇಂದ್ರಿಯಗಳ ಚೇಷ್ಟೆಗಳುಕರ್ಮೇಂದ್ರಿಯಗಳ ಚೇಷ್ಟೆಗಳು, ಅಂತಃಕರಣಗಳ ಚೇಷ್ಟೆಗಳು – ಪೃಥ್ವಿಯ ಪಂಚೀಕೃತಿ – ಪಂಚಭೂತಗಳು-ಷಟ್ಟ ಕ್ರಗಳು-ಮಂಡಲತ್ರಯ – ದಶನಾ ಡಿಗಳು-ಮುಕ್ತಿ ಮಾರ್ಗ ನಿರೂಪಣ- ಮಂತ್ರಯೋಗ ಸಾಧಿಸುವ ಕ್ರಮ ಲಯಯೋಗ ಸಾಧಿಸುವ ಕ್ರಮ- ಹಠಯೋಗ ಸಾಧಿಸುವ ಕ್ರಮ – ರಾಜ ಯೋಗ ಸಾಧಿಸುವ ಕ್ರಮ ತಾರಕ ಆಮನಸ್ಕಗಳ ವಿವರ – ಮರಣ ಕಾಲ ವಿಧಾನ – ಪಿಂಡಾಂಡ ಬ್ರಹ್ಮಾಂಡ – ಚತುರ್ದಶ ನಾಡಿಗಳು ಸಪ್ತಧಾತುಗಳು – ಪಂಚಕೋಶಗಳು – ಪಂಚಾವಸ್ಥೆಗಳು ನದಿಗಳ ವಿವರ – ಶಿವಯೋಗ ಲಕ್ಷಣ ಇವಿಷ್ಟು ಈ ಕೃತಿಯಲ್ಲಿ ಬರುವ ಮುಖ್ಯ ವಿಷಯಗಳು. ಪ್ರಾರಂಭದಲ್ಲಿ ಬರುವುದೇ ಸೃಷ್ಟಿಯ ವಿವರ.

ಸೃಷ್ಟಿಯ ಉತ್ಪತ್ತಿ-ಸ್ಥಿತಿ-ಲಯ

ಪರಾಪರದಲ್ಲಿ ಶಿವ, ಶಿವನಲ್ಲಿ ಶಕ್ತಿ, ಶಕ್ತಿಯಲ್ಲಿ ನಾದ, ನಾದದಲ್ಲಿ ಬಿಂದು, ಬಿಂದುವಿನಲ್ಲಿ ಕಳೆ, ಕಳೆಯಲ್ಲಿ ಸದಾಶಿವ, ಸದಾಶಿವನಲ್ಲಿ ಮಹೇ ಶ್ವರ, ಮಹೇಶ್ವರನಲ್ಲಿ ರುದ್ರ, ರುದ್ರನಲ್ಲಿ ವಿಷ್ಣು, ವಿಷ್ಣುವಿನಲ್ಲಿ ಬ್ರಹ್ಮ, ಬ್ರಹ್ಮನಲ್ಲಿ ಆತ್ಮ, ಆತ್ಮನಲ್ಲಿ ಆಕಾಶ, ಆಕಾಶದಲ್ಲಿ ವಾಯು, ವಾಯುವಿನಲ್ಲಿ ಅಗ್ನಿ, ಅಗ್ನಿಯಲ್ಲಿ ಅಪ್ಪು, ಅಪ್ಪುವಿನಲ್ಲಿ ಪೃಥ್ವಿ, ಪೃಥ್ವಿಯಲ್ಲಿ ಊಷರಾದಿಗಳು, ಊಷರಾದಿಗಳಲ್ಲಿ ಅನ್ನ, ಅನ್ನದಲ್ಲಿ ನರ, ಮೃಗ, ಪಕ್ಷಿ, ಸ್ಥಾವರ ಜಂಗಮಾದಿಗಳು ಉದ್ಭವಿಸಿದ ಕ್ರಮದಲ್ಲಿ ಅಡಗಿದವು.

ಶರೀರ ರಚನೆ:

  • ಮನುಷ್ಯರು ತಮ್ಮ ಅಂಗುಲದಲ್ಲಿ ೯೬ ಅಂಗುಲದ ಪ್ರಮಾಣ, ಎಂಟು ಗೇಣು ಉದ್ದ, ನಾಲ್ಕು ಗೇಣು ಅಗಲ, ಮೂರು ಕೋಟ ರೋಮದ್ವಾರಗಳು, ೩೨ ಮೊಳ ಕರಳುಗಳು, ೯೨ ಸಂದುಗಳು, ೭೦ ಹಿರಿ ಎಲವುಗಳು, ೮೧ ಘಲಘಾಳಿಗೆ(?), ೪ ಘಲುದಿರ (?), ೩೬೦ ಪಲ ಮಾಂಸ, ಪಡಿ ಪೈತ್ಯ, ಪಾವು ಶ್ಲೇಷ್ಮ, ಪಾವು ಶುಕ್ಲ – ಇವು ಇಷ್ಟರಿಂದ ಕೂಡಿದೆ ಈ ಶರೀರವು. ಇವೆಲ್ಲವೂ ಜಡ. ಇವಕ್ಕಿನ್ನು ಜೀವನು ಸಾಕ್ಷಿ ಯಾಗಿದ್ದನಾದ ಕಾರಣ ಕೊರತೆ ಹುಟ್ಟಿ ಮನುಷ್ಯನ ಆಕಾರವಾಯಿತು. ಜೀವ(ನ)ಕ್ಕೆ ಪರಬ್ರಹ್ಮನೇ ಸಾಕ್ಷಿಯಾಗಿ ಸಕಲ ಭೂತಗಳಲ್ಲಿದ್ದನು. ಈ ಶರೀರದಲ್ಲಿ ತೊಂಬತ್ತಾರು ತತ್ತ್ವಗಳುಂಟು. ಅವಾವೆಂದರೆ- ಬಾಗಿಲು ೯, ಪ್ರೋತ್ರಗಳು ೫, ಶಬ್ದಗಳು ೫, ನಾಗರಗಳು ೫, ವಚನಗಳು ೪, ಅಂತಃಕರಣಗಳು ೪, ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ ಸಂಬಂಧಗಳು ೨೫, ನಾಡಿಗಳು ೧೦, ಧಾತುಗಳು ೪, ರಾಗಗಳು ೮, ಆಧಾರಗಳು ೬, ಮಂಡಲಗಳು ೩, ಗುಣಗಳು ೩, ಅವಸ್ಥೆಗಳು ೫ – –
    ಅಲ್ಲಿದ್ದ ತತ್ತ್ವಗಳು ತೊಂಬತ್ತಾರು. ನಾಮರೂಪು ಕ್ರಿಯೆ ಅವಾವೆಂದಡೆ ಬಾಗಿಲು ಒಂಬತ್ತು. ಅವಕ್ಕೆ ವಿವರ- ಪ್ರೋತ್ರದ್ವಾರಗಳು ೨, ನಯನ ನಾಸಿಕ ದ್ವಾರಗಳು ೪, ವಾಕ್ ದ್ವಾರ ೧, ಮೂತ್ರಪೂರಿಷ ದ್ವಾರಗಳು ೨ – ಇವೇ ನವದ್ವಾರಗಳು. ಹತ್ತನೆಯ ದ್ವಾರವು ಅತಿ ಗೋಪ್ಯವಾ ಗಿದ್ದ ಕಾರಣ ಮುಂದೆ ವಿವರಿಸುತ್ತೇವೆ. ಶೋತ್ರಗಳು ಐದು. – – ಯಾವುದೆಂದರೆ – ಶೂತ್ರ, ಚರ್ಮ, ಜಿಹೈ, ಫ್ರಾಣ, ನೇತ್ರ – ಇವು ಐದು ಜ್ಞಾನೇಂದ್ರಿಯಗಳು. ಇವಕ್ಕೆ ವಿಷಯಗಳು ಶಬ್ದ, ಸ್ಪರ್ಶ, ರೂಪು, ರಸ, ಗಂಧ,

ಅಧ್ಯಾತ್ಮ-ಆದಿಭೂತ-ಆದಿದೈವತ

ಇವಲ್ಲದೆ ಇವಕ್ಕೆ ಅಧ್ಯಾತ್ಮ, ಆದಿಭೂತ, ಆದಿದೈವತ ಎಂದು ಮೂರುಂಟು. ವಿವರ: ಕಿವಿಗಳು ಅಧ್ಯಾತ್ಮ, ಕೇಳುವಂಥ ಶಬ್ದ ಆದಿ ಭೂತ, ಶಬ್ದ ರೂಪದಿಂದ ಕೂಡಿದ ದಿಕ್ಕುಗಳು ಆದಿದೈವತ. ಚರ್ಮ ಅಧ್ಯಾತ್ಮ, ಚರ್ಮಕ್ಕೆ ತಿಳುಹುವಂಥದ್ದು, ಸ್ಪರ್ಶವಾಗುವಂಥಾದ್ದು ಯಾವುದುಂಟೋ ಆ ವಸ್ತು ಆದಿಭೂತಂಗಳು, ಅದೇ ಆತ್ಮ ಕಾಂಬುವಂಥಾ ವಸ್ತು ಆದಿಭೂತ, ಸೂರ್ಯ ಆದಿದೈವತ, ನಾಲಿಗೆ ಅಧ್ಯಾತ್ಮ, ಹುಳಿ ಮೊದಲಾದ ಷತೃಚಿ ಆದಿಭೂತ, ಈ ವಸ್ತುಗಳ ರುಚಿ ತೆಗೆದು ಅನುಭವಿಸುವಂಥಾದ್ದೇ ಜೀವನ ಆದಿದೈವತ, ಮೂಗು ಅಧ್ಯಾತ್ಮ, ಮೂಸಿನೋಡುವ ವಾಸನೆಗಳು ಆಧಿಭೂತ, ಭೂಮಿ ಆದಿದೈವತ, ಈ ಐದು ಜ್ಞಾನೇಂದ್ರಿಯಗಳು, ಪ್ರಪಂಚ ಬಾಯಿಗಳು ಎಂಬುದು ಕಂ ದ್ರಿಯಗಳು. ಅವು ಯಾವುವೆಂದಡೆ – ಬಾಯಿ, ಕೈಗಳು, ಪಾದಗಳು, ಗುದ, ಗುಹ್ಯ, ಶಿಶ್ನ – ಈ ಐದು ಕರ್ಮೇಂದ್ರಿಯಗಳು. – – ವಚನ, ಗಮನ, ದಾನ, ವಿಸರ್ಗ, ಆನಂದ ಈ ಐದು ವಿಷಯಾದಿಗಳು. ಇವಕ್ಕೆ ಅಧ್ಯಾತ್ಮಗಳು – ಬಾಯಿ ಅಧ್ಯಾತ್ಮ, ಬಾಯ ನುಡಿ ಆದಿಭೂತ, ನಾರಾ ಯಣ ಆದಿದೈವತ, ಈ ಐದು ಕರ್ಮೇಂದ್ರಿಯಗಳು, ಪ್ರಪಂಚ ಅಂತಃ ಕರಣಗಳು ಅಂಬೋದು ಮನಸ್ಸು, ಬುದ್ಧಿ, ಚಿತ್ರ, ಅಹಂಕಾರ ಇವು ಶರೀರದಲ್ಲಿ ಇದ್ದಾವಷ್ಟೆ ! ಅಂತಃಕರಣಗಳೆಂಬೊ ಹೆಸರುಂಟಾಯಿತು.

ಹೊಕ್ಕಳ ಬದಿಯಲ್ಲಿ ಬುದ್ಧಿ ಇರುವದು; ಹೃದಯದಲ್ಲಿ ಮನಸ್ಸು ಇರು ವದು; ಕಂಠದಲ್ಲಿ ಚಿತ್ರ ಇರುವದು; ಬಾಯಲ್ಲಿ ಅಹಂಕಾರ ಇರುವದು. ಇವಕ್ಕೆ ಅಧ್ಯಾತ್ಮಂಗಳಂ ವಿವರಿಸುವೆವು.

ಮನಸ್ಸು ಎಂಬುದು ಅಧ್ಯಾತ್ಮ ಯಾವುದಾದರೂ ಒಂದು ವಸ್ತು ನೋಡಿ ಈ ವಸ್ತು ಆ ವಸ್ತು ಎಂದು ಸಂಶಯ ಪಡೋ ಸಂಶಯ ಆದಿಭೂತ, ಚಂದ್ರ ಆದಿದೈವತ. ಬುದ್ಧಿ ಅಧ್ಯಾತ್ಮ, ಮುಂಚೆ ಸಂಶಯ ಮಾಡಿದ ವಸ್ತು ನಿಜವಾಗಿ ಇದೇ ವಸ್ತುವೆಂದು ವೇದಾರ್ಥ ವಾಗಿ ತಿಳಿದ ತಿಳಿವು ಇರೋ ನಿಶ್ಚಯ ಆದಿಭೂತ; ಬ್ರಹ್ಮ ಆದಿದೈವತ. ಚಿತ್ತ ಅಧ್ಯಾತ್ಮ, ಅನೇಕ ಚಿಂತೆ ಮಾಡದ ಚಿತ್ರ ಆದಿಭೂತ, ನಾರಾಯಣ ಆದಿದೈವತ, ಅಹಂ ಅಂಬೋದು ಸಂಸ್ಕೃತದಲ್ಲಿ ನಾನು ಅಂಬೋ ಮಾತು. ಆದಕಾರಣ ಎರಡು ‘ಅಕ್ಷರ’ ಅಧ್ಯಾತ್ಮ, ಸಕಲ ಕಾರ್ಯಂಗಳು ನಾನೇ ಮಾಡಿದೆನೆಂಬುವ ಗರ್ವ ಆದಿಭೂತ, ರುದ್ರ ಆದಿದೈವತ, ಜ್ಞಾತೃತ್ವ ಅನ್ನುವದು ಈಗ ಹೇಳಿದ ಸಕಲ ಇಂದ್ರಿಯ ಗಳು ಪ್ರಪಂಚಕ್ಕೆ ತನ್ನ ಕಾಂತಿಯಿಂದ ಅದಕ್ಕೆ ಕಾಂತಿ ಹುಟ್ಟಿಸಿ ಈ ಇಂದ್ರಿಯಗಳಿಂದ ಪುಣ್ಯ ಪಾಪಗಳ ಮಾಡುತ್ತ ತನಗೆ ಹತ್ತದ ಹಾಗೆ ಸಾಕ್ಷಿ ಮಾತ್ರವಾಗಿ ಉಪಾಧಿಯಿಂದ ಜೀವನೆಂಬ ಹೆಸರು ಉಂಟಾ ಯಿತು. ಪರಬ್ರಹ್ಮವು, ಜ್ಞಾತೃತ್ವವು, ಈ ಪ್ರಕಾರ ಇದ್ದ ಜೀವನಕ್ಕೆ ಸಾಕ್ಷಿಯಾಗಿ, ಪರಬ್ರಹ್ಮವಾಗಿ ನೇತ್ರರೂಪವಾಗಿ ಸಕಲ ದೇಹಗಳಲ್ಲಿ ತಾನು ಇದ್ದಾನಷ್ಟೆ ! ಇಂತಿಷ್ಟಕ್ಕೂ ತಾತ್ಪರ್ಯವೇನೆಂದರೆ- ನಾನಾ ವಿಧ ಚೇಷ್ಟೆಗಳು ಇದ್ದ ಕಾರಣ ಶರೀರದಲ್ಲಿ ಜೀವನು ಉತ್ಪತ್ತಿಯಾದನು. ಇದಲ್ಲದೆ ಶರೀರಕ್ಕೂ ತನಗೂ ಏಕತ್ವ ಕಂಡು ಶರೀರವೇ ಜೀವನು ಎನ್ನುವ ಭ್ರಾಂತಿ ಹುಟ್ಟಿತ್ತು. ಭ್ರಾಂತಿಯಿಂದ ಜನ್ಮಾದಿಗಳು ಹುಟ್ಟಿ ಸುಖದುಃಖಾದಿಗಳನ್ನು ಅನುಭವಿಸಬೇಕಾಯಿತು. ಈ ಶರೀರದಲ್ಲಿ ನಾನು ಇಲ್ಲ ಎಂದು ತಿಳಿದು, ತನಗೆ ಸಾಕ್ಷಿಮಾತ್ರವಾಗಿ ದೇವತೆಗಳು ಇದರಲ್ಲಿ ಇದ್ದಾರೆಂದು ತಿಳಿದು, ತನಗೆ ಸಾಕ್ಷಿಯಾಗಿದ್ದ ಪರಬ್ರಹ್ಮನನೊಡ ಗೂಡಿದರೆ ಜನನ ಮರಣಾದಿಗಳು ಇಲ್ಲದಲೆ ಶಿವಲೋಕದಲ್ಲಿ ಸುಖಿಯಾಗಿ ಇರುವನು. ಪರಬ್ರಹ್ಮ ಸ್ವರೂಪವಾದ ಜೀವಕ್ಕೆ, ಅತ್ಯಂತ ಮಲಿನವಾದ ಶರೀರಕ್ಕೆ ಏಕತ್ವವಾಯಿತು ಎಂದರೆ ಅದನ್ನು ವಿವರಿಸುತ್ತಿದ್ದೇವೆ.

ಜೀವ-ದೇಹ

ಜೀವವು ದೇಹದ ವಾಸನೆಯಲ್ಲಿ ಕೂಡಿಕೊಂಡು ಅಹಂಕಾರ ಹೊಂದಿತ್ತು. ಅಹಂಕಾರ ಜಡವಾಗಿದ್ದ ಕಾರಣ ಬುದ್ಧಿಯಲ್ಲಿ ಕೂಡಿತು. ಬುದ್ಧಿಯು ಸಕಲ ವಸ್ತುಗಳ ಬಯಸುವ ಕಾರಣ ಮನಸ್ಸಿನಲ್ಲಿ ಕೂಡು ವುದು. ಮನಸ್ಸು ಸಕಲ ಸಂಶಯಗಳಲ್ಲಿ ಇದ್ದ ಕಾರಣ ಇಂದ್ರಿಯ ಭ್ರಾಂತಿ ಹೊಂದಿತ್ತು. ಇವು ಇಷ್ಟು ಏಕವಾಗಿ ಚಿತ್ತವಹುದು. ಆ ಚಿತ್ರ ಅನೇಕ ಚಿತ್ರರೂಪವಾಗಿ ಜೀವ(ನ)ಕ್ಕೆ ಜನನ ಮರಣಾದಿಗಳು ಉದ್ಭವಿ ಸಿದವು. ಈ ಶರೀರಕ್ಕೆ ನಾನಾ ವಿಧ ಚೇಷ್ಟೆಗಳೆಂದು ಹೇಳಿದೆನಲ್ಲ. ಆ ಚೇಷ್ಟೆಗಳ ವಿವರಿಸುತ್ತಿರುವೆವು.

ಜ್ಞಾನೇಂದ್ರಿಯಗಳ ಚೇಷ್ಟೆಗಳು

ಕಿವಿಗಳಿಗೆ ವಿಷಯ ಶಬ್ದ – ಆಕಾಶದಲ್ಲಿ ಕೂಡಿಕೊಂಡು ಸಕಲ ಧ್ವನಿಗಳು ಕೇಳುತ್ತವೆ. ಚರ್ಮಕ್ಕೆ ವಿಷಯ ಸ್ಪರ್ಶನ – ವಾಯುವಿನಲ್ಲಿ ಕೂಡಿಕೊಂಡು ತನ್ನ ಸೋ೦ಕಿದ ಸ್ಪರ್ಶಗಳನ್ನೆಲ್ಲ ಗುರುತಿಸುವದು. ಕಣ್ಣಿಗೆ ವಿಷಯ ರೂಪು – ಅಗ್ನಿಯಲ್ಲಿ ಕೂಡಿಕೊಂಡು ಸಕಲವಾದ ಪ್ರಪಂ ಚಗಳ ನೋಡುತ್ತ ಇರುವದು. ನಾಲಿಗೆಗೆ ವಿಷಯ ರಸ – ಉದಕದಲ್ಲಿ ಕೂಡಿಕೊಂಡು ಷಡ್ರುಚಿಗಳ ಗುರುತಿಸುವದು. ಮೂಗಿಗೆ ವಿಷಯ ಗಂಧ – ಭೂಮಿಯಲ್ಲಿ ಕೂಡಿಕೊಂಡು ಸುಗಂಧ ದುರ್ಗಂಧಗಳ ಗುರು ತರಿವುದು. ಇವು ಜ್ಞಾನೇಂದ್ರಿಯ ಚೇಷ್ಟೆಗಳು ಇನ್ನು- –

ಕರ್ಮೇಂದ್ರಿಯಗಳ ಚೇಷ್ಟೆಗಳು

ಬಾಯಿಗೆ ವಿಷಯ ವಚನ – ಆಕಾಶದಲ್ಲಿ ಕೂಡಿಕೊಂಡು ಸಕಲ ವಾದ ನುಡಿಗಳ ನುಡಿವುದು. ಕೈಗೆ ವಿಷಯ ದಾನ – ವಾಯುವಿನಲ್ಲಿ ಕೂಡಿಕೊಂಡು ತೆಗೆದುಕೊಂಬುದು, ಗುರುತು ಅರಿವುದು. ಪಾದಂಗಳಿಗೆ ವಿಷಯ ಗಮನ – ಬೆಂಕಿಯಲ್ಲಿ ಕೂಡಿಕೊಂಡು ಸಂಸಾರ ಮಾಡುವದು. ಗುದಸ್ಥಾನಕ್ಕೆ ವಿಷಯ ಮಲವಿಸರ್ಜನೆ – ಉದಕದಲ್ಲಿ ಕೂಡಿಕೊಂಡು, ಮೂತ್ರ ಪೂರಿಷಗಳ ಬಿಡುವದು. ಶಿಶ್ನಕ್ಕೆ ವಿಷಯ ಸಂಗಮ – ಭೂಮಿ ಯಲ್ಲಿ ಕೂಡಿಕೊಂಡು ಆನಂದಪಡುವುದು – ಇವು ಕರ್ಮೇಂದ್ರಿಯಗಳ ಚೇಷ್ಟೆಗಳು, ಇನ್ನು

ಅಂತಃಕರಣಗಳ ಚೇಷ್ಟೆಗಳು

ಮನಸ್ಸು ಸಂಶಯಪಡುವುದು, ಬುದ್ಧಿ ನಿಶ್ಚಿಸುವುದು, ಚಿತ್ರ ಚಿಂತೆ ಮಾಡುವುದು, ಅಹಂಕಾರ ನಾನೆಂದು ನುಡಿವುದು. ಇವು ಎಲ್ಲಿ ಹುಟ್ಟುವವೊ ಅಲ್ಲೇ ಅಡಗುವವು. ಅವು ಹ್ಯಾಗಂದರೆ- ಶಬ್ದ ಕಿವಿಗಳಲ್ಲಿ ಆಕಾಶದಲ್ಲಿ ಅಡಗುವದು. ಸ್ಪರ್ಶ ವಾಯುವಿನಲ್ಲಿ, ಚರ್ಮದಲ್ಲಿ ಅಡಗು ವದು. ರಸ ಜಿ.ಯಲ್ಲಿ, ಅಪ್ಪುವಿನಲ್ಲಿ ಅಡಗುವದು. ಗಂಧ ಪೃಥ್ವಿ ಯಲ್ಲಿ, ಮೂಗಿನಲ್ಲಿ ಅಡಗುವದು. ಮಲವಿಸರ್ಜನೆ ಉದಕದಲ್ಲಿ, ಗುದ ದಲ್ಲಿ ಅಡಗುವದು. ಆನಂದ ಪೃಥ್ವಿಯಲ್ಲಿ ಅಡಗುವದು. ಸಂಶಯ ಮನ ಸ್ಸಿನಲ್ಲಿ ಅಡಗುವದು. ಚಿತ್ರ ಚಿತ್ರದಲ್ಲಿ ಅಡಗುವದು. ಬಾಯಿಯಲ್ಲಿ ಅಹಂಕಾರ ಅಡಗುವದು. ಇದೇ ಉತ್ಪತ್ತಿ-ಸ್ಥಿತಿ-ಲಯವೆಂದು ಹೇಳ ಲ್ಪಡುವದು. ಹೀಗೆ ಹೇಳಿದ ಆದಿಭೂತಗಳೇ ಮನುಷ್ಯನಿಗೆ ವಿಷಯಗ ಇಂದು ಕಲ್ಪಿಸಿ, ವಿಷಯಗಳಲ್ಲಿ ವೈರಾಗ್ಯ ಹುಟ್ಟಿದರೆ ಮೋಕ್ಷ ಹೊಂದು ವನು, ವಿಷಯಗಳಲ್ಲಿ ಆಸಕ್ತಿಯುಂಟಾದರೆ ಸಂಸಾರ ಬಂಧನ.

ವಿಷಯಗಳಲ್ಲಿ ವೈರಾಗ್ಯ ಹುಟ್ಟಿರಬೇಕು. ಅವು ಗಳ ಪಂಚವಿಂಶತಿ, ಅಸ್ಥಿ ಮಾಂಸ ಚರ್ಮ ನರ ರೋಮ ಯಿಂದಾದವು. 11 ಇವು ಐದು ಸೃಷ್ಟಿ, ಶ್ರೇಷ್ಮೆ ಮೂತ್ರ ಪಿತ್ತ ಶುಕ್ಲ ರಕ್ತ – ಈ ಐದು ಅಪ್ಪುವಿನಿಂದಾ ದವು., ಕುಧಾ ತೃಷೆ ನಿದ್ರೆ ಆಲಸ್ಯ ಸಂಗ – ಈ ಐದು ಅಗ್ನಿಯಿಂದಾದವು. ಪರಿವ ಪಾರುವ ಸುಳಿವ ಹುಬ್ಬವ ಅಗಲುವ – ಈ ಐದು ವಾಯುವಿನಿಂದಾದವು. ರಾಗ ದ್ವೇಷ ಭಯ ಲಜ್ಜೆ ಮೋಹ- ಈ ೫ ಆಕಾಶದಿಂದಾದವು. ಇನ್ನು
ಪಂಚಭೂತಗಳು
ಗುಣಗಳು, ಧರ್ಮಗಳು, ಕರ್ಮಾದಿಗಳು, ಆದಿದೈವತಗಳು ಅವು ಯಾವುವೆಂದರೆ, ಅವಕ್ಕೆ ವಿವರ :- ಭೂಮಿ ಪಕ್ಕದಲ್ಲಿರುವದು ಅದು ಅರಶಿನದ ವರ್ಣ, ಬ್ರಹ್ಮ ಆದಿದೈವತ. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಈ ಐದು ಗುಣಗಳು, ಕಠಿಣವೇ ಧರ್ಮ, ಪೃಥ್ವಿಗೆ ಧಾರಣವೇ ಕರ್ಮ. ಕ್ರಿಯಾಶಕ್ತಿ ಆಕಾರ ಮಾತ್ರಕ್ಕೆ. ಉದಕ ತೊಡೆಗಳ ಬದಿಯಲ್ಲಿರುವದು. ಅದು ಶ್ವೇತವರ್ಣ, ವಿಷ್ಣು ಆದಿದೈವತ, ಶಬ್ದ ಸ್ಪರ್ಶ, ರೂಪು, ರಸಗಳು ಈ ನಾಲ್ಕು ಗುಣಗಳು. ದ್ರವಿಸುವದೇ ಧರ್ಮ ಅಪಹರಿಸುವದೇ ಕರ್ಮ, ಉಕಾರ ಮಾತ್ರಕ್ಕೆ ಜ್ಞಾನ ಶಕ್ತಿ ಸ್ವರೂಪಗಳರುವದು. ಸದಾಶಿವ ಆಡಿದೈವತ, ಶಬ್ದ ಒಂದೇ ಗುಣ, ಬಯಲಾಗಿರು ವದೇ ಧರ್ಮ. ನೋಡಿದ್ದು ವಾಸಿಸುವದೇ ಕರ್ಮ, ಇಂದ್ರ ನೀಲವರ್ಣ, ಆಕಾರ ಮಾತ್ರಕ್ಕೆ ಪರಶಕ್ತಿ ಸ್ವರೂಪಗಳು.

ಇನ್ನು ಷಡ್ರಸಗಳಿಗೆ ರೂಪು ನಾಮ ಕ್ರಿಯಾ ಏನಂದರೆ, ಸೃಷ್ಟಿಗೆ ಶಬ್ದ, ಸ್ಪರ್ಶ, ರೂಪು, ರಸ, ಗಂಧ, ಈ ೫, ಉದಕಕ್ಕೆ ಶಬ್ದ, ಸ್ಪರ್ಶ, ರೂಪು, ರಸ, ಈ ನಾಲ್ಕು, ಅಗ್ನಿಗೆ ಶಬ್ದ, ಸ್ಪರ್ಶ, ರೂಪು ಈ ಮೂರು, ವಾಯುವಿಗೆ ಶಬ್ದ, ಸ್ಪರ್ಶ ಈ ಎರಡು, ಆಕಾಶಕ್ಕೆ ಶಬ್ದ ೧- ಇವು ಪಂಚಭೂತಗಳಿಗೆ ಪಂಚ ತನ್ಮಾತ್ರೆಗಳು, ಭೂಮಿಗೆ ಆಕಾರ ಮಾತ್ರಕ್ಕೆ ಕ್ರಿಯಾಶಕ್ತಿ, ಉದಕಕ್ಕೆ ಉಕಾರ ಮಾತ್ರಕ್ಕೆ ಜ್ಞಾನಶಕ್ತಿ, ಅಗ್ನಿಗೆ ಮಕಾರ ಮಾತ್ರಕ್ಕೆ ಇಚ್ಛಾಶಕ್ತಿ, ವಾಯುವಿಗೆ ಯಕಾರ ಮಾತ್ರಕ್ಕೆ ಆದಿ ಶಕ್ತಿ, ಆಕಾಶಕ್ಕೆ ಅಕಾರ ಮಾತ್ರಕ್ಕೆ ಪರಾಶಕ್ತಿ. ಇವು ಪಂಚಭೂತಗಳು, ಆಶ್ರಯ ಮಾಡಿಕೊಂಡು ಇರುವ ಶಕ್ತಿಗಳು ಮಾತ್ರಕ್ಕೆ ಭ್ರಮೆಯೆಂ ಬುದು ಬೀಜಗಳು. ಈ ಪ್ರಕಾರ ಪರಮಾತ್ಮನಿದ್ದನು. ಆ ಪರಬ್ರಹ್ಮನ ವಿವರಿಸುತ್ತಿದ್ದೇವೆ.

(ನಾಳೆ ಮುಂದುವರಿಯುವುದು…..)

ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: 9902130041

Share This Article
Leave a comment

Leave a Reply

Your email address will not be published. Required fields are marked *