ಬೆಳಗಾವಿ:
Contents
ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಜಯಂತಿ ಕಾರ್ಯಕ್ರಮ ವಿಶ್ವಗುರು ಬಸವ ಮಂಟಪದಲ್ಲಿ ಮಂಗಳವಾರ ಭಕ್ತಿಶ್ರದ್ಧೆಯಿಂದ ನೆರವೇರಿತು.
ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಯಮಕನಮರಡಿಯ ಸದ್ಗುರು ಸಿದ್ದಬಸವ ದೇವರು ವಹಿಸಿ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಬಸವದಳದ ಜಿಲ್ಲಾ ಅಧ್ಯಕ್ಷ ಅಶೋಕ ಬೆಂಡಿಗೇರಿ ವಹಿಸಿ ಮಾತನಾಡಿದರು.
ಪ್ರಸಾದ ದಾಸೋಹಿಗಳಾದ ಪ್ರೇಮ ಗುಡಸ್ ಅವರಿಗೆ, ಬೆಳಗಾವಿ ಜಿಲ್ಲಾ ಯುವಜನೋತ್ಸವದಲ್ಲಿ ಪ್ರಥಮಸ್ಥಾನ ಗಳಿಸಿದ ರಾಷ್ಟ್ರೀಯ ಬಸವದಳದ ಶಿವರಾಜ ಸೋಮನಾಳ ಹಾಗೂ ಕಾರ್ಯಕ್ರಮದ ವೇದಿಕೆಯನ್ನು ಸುಂದರವಾಗಿ ತಯಾರು ಮಾಡಿದ ಶರಣು ಲಿಂಗಾಯತ ಅವರನ್ನು ಸತ್ಕರಿಸಲಾಯಿತು.

ಕೊನೆಯಲ್ಲಿ ವಚನ ಮಂಗಲ ಹಾಗೂ ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
