‘ದಸರಾ ದರ್ಭಾರದಲ್ಲಿ ಬಸವಣ್ಣನವರಿಗೆ ಅವಮಾನವಾದರೆ ಉಗ್ರ ಹೋರಾಟ’

ಬಸವ ಮೀಡಿಯಾ
ಬಸವ ಮೀಡಿಯಾ

ಬಸವ ಕಲ್ಯಾಣ

ಬಸವಕಲ್ಯಾಣದಲ್ಲಿ ನಡೆಯಲಿರುವ ದಸರಾ ದರ್ಭಾರದಲ್ಲಿ ಬಸವಣ್ಣನವರಿಗೆ ಅವಮಾನವಾದರೆ ಉಗ್ರ ಹೋರಾಟ ನಡೆಸಲಾಗುವುದೆಂದು ಬಸವಕಲ್ಯಾಣದ ಬಸವಪರ ಸಂಘಟನೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ.

ಬಸವಾದಿ ಶರಣರು ಸಮಾನತೆ ಸಾರಿದ ಪುಣ್ಯಭೂಮಿಯಾದ ಬಸವಕಲ್ಯಾಣದಲ್ಲಿ ಪಂಚಾಚಾರ್ಯರಿಂದ ನಡೆಯುವ 35ನೇ ದಸರಾ ದರ್ಭಾರದಲ್ಲಿ ಗುರು ಬಸವಣ್ಣನವರಿಗೆ ಗುರು ಸ್ಥಾನ ಕೊಟ್ಟು ಗೌರವಿಸಬೇಕು.

ಬಸವಣ್ಣನವರ, ಶರಣರ ಅಥವಾ ಬಸವತತ್ವದವರ ಬಗ್ಗೆ ಹಗುರವಾಗಿ ಮಾತನಾಡುವ, ಅವಮಾನವಾಗುವ ರೀತಿಯಲ್ಲಿ ಪ್ರಚೋದನಾಕಾರಿ ಮಾತುಗಳನ್ನಾಡಿದರೆ ಉಗ್ರ ಹೋರಾಟ ಮಾಡಲಾಗುವುದು. ಆದ್ದರಿಂದ ಈ ನಾಡಿನಲ್ಲಿ ಶಾಂತಿ ಭಂಗವಾಗದಂತೆ ಎಚ್ಚರಿಕೆ ವಹಿಸಬೇಕು, ಎಂದು ಮಾಧ್ಯಮಗಳಿಗೆ ಕಳಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಕಟಣೆ ಗುಣತೀರ್ಥವಾಡಿಯ ಪೂಜ್ಯ ಬಸವಪ್ರಭು ಸ್ವಾಮೀಜಿ, ಹರಳಯ್ಯ ಪೀಠದ ಪೂಜ್ಯ ಅಕ್ಕ ಗಂಗಾಂಬಿಕೆ, ಬಂದವರ ಓಣಿಯ ಕಲ್ಯಾಣಮ್ಮ, ಬಸವ ತತ್ವ ಪ್ರಚಾರ ಕೇಂದ್ರದ ಜಯಪ್ರಕಾಶ್ ಸದಾನಂದೆ, ಅರಿವು ಆಚಾರ ಅನುಭಾವ ಕೇಂದ್ರದ ಎಸ್.ಎಸ್. ನಾಗರಾಳೆ, ದಾನಮ್ಮದೇವಿ ಬಳಗದ ಸುಮಿತ್ರಾ ದಾವಣಗಾವೆ, ಅಕ್ಕನ ಬಳಗದ ಸುಲೋಚನಾ ಮಾಮನೆ, ಶಕ್ತಿ ಕೂಟದ ಸೋನಾಲಿ ನೀಲಕಂಠ ಲಿಂಗಮ್ಮ — ಅವರ ಹೆಸರಿನಲ್ಲಿ ಬಂದಿರುವ ಪ್ರಕಟಣೆಯಲ್ಲಿ ಲಿಂಗಾಯತ ಸಮಾಜದ ಮುಂದಿರುವ ಹಲವಾರು ವಿಷಯಗಳು ಚರ್ಚೆಯಾಗಿವೆ.

ಧರ್ಮ ಕಾಲಂ ದಲ್ಲಿ ಲಿಂಗಾಯತ

ವಿಶ್ವಗುರು ಬಸವಾದಿ ಪ್ರಮಥರಿಂದ ಸ್ಥಾಪಿತವಾದ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಿದ್ದು, ಹಿಂದೂ ಧರ್ಮದ ಪರ್ಯಾಯ ಧರ್ಮವಾಗಿದೆ.

ಲಿಂಗಾಯತರು ತಮ್ಮ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಮತ್ತು ನಾವು ಸ್ವತಂತ್ರ ಧರ್ಮದವರೆಂದು ಗುರುತಿಸಿಕೊಂಡು ಕೇಂದ್ರ ಸರಕಾರದಿಂದ ಮಾನ್ಯತೆ ಪಡೆಯಬೇಕಾಗಿದೆ. ಆದ್ದರಿಂದ ಕರ್ನಾಟಕ ಸರಕಾರ ನಡೆಸುವ ಜಾತಿ ಮತ್ತು ಆರ್ಥಿಕ ಸಮಿಕ್ಷೆಯಲ್ಲಿ ಲಿಂಗಾಯತ ಧರ್ಮಿಯರು ಧರ್ಮ ಕಾಲಂ ನಲ್ಲಿ ‘ಲಿಂಗಾಯತ’ ಎಂದು ಬರೆಯಿಸಿರಿ, ಉಪಜಾತಿ ಕಾಲಂ ದಲ್ಲಿ 101 ಜಾತಿಯವರು ನಿಮ್ಮ ನಿಮ್ಮ ಉಪಜಾತಿ ಬರೆಯಿಸಬೇಕು.

ಲಿಂಗಾಯತರು ವೀರಶೈವರು ಬೇರೆ ಬೇರೆ:

ಲಿಂಗಾಯತ ವೀರಶೈವ ಪದ ಬೇರೆ ಬೇರೆ. ವೀರಶೈವವು ಶೈವ ಧರ್ಮದ ಶಾಖೆಯಾಗಿದೆ. ಅದು ಧರ್ಮವಲ್ಲ. ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿ ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದಾರೆ. ವೀರಶೈವ ಪುರಾತನವಾದದ್ದು ಅಲ್ಲಿನ ತತ್ವ ಮತ್ತು ಆಚರಣೆಗಳೇ ಬೇರೆ, ಲಿಂಗಾಯತ ತತ್ವ ಆಚರಣೆಗಳೇ ಬೇರೆಯಾಗಿವೆ. ವೀರಶೈವರ ಕುತಂತ್ರ ಹೇಳಿಕೆಯಿಂದ ಲಿಂಗಾಯತರು ದಾರಿ ತಪ್ಪಬಾರದು.

ಲಿಂಗಾಯತರು ಹಿಂದೂ ವಿರೋಧಿಗಳಲ್ಲ:

ನಾವೆಲ್ಲ ಹಿಂದೂ ದೇಶದಲ್ಲಿದ್ದೇವೆ, ಹಿಂದೂ ನೆಲದಲ್ಲಿ ಜನಿಸಿದ್ದೇವೆ. ನಮ್ಮ ಧರ್ಮ ಹುಟ್ಟಿದ್ದು ಇದೇ ನೆಲದಲ್ಲಿ ಆದ್ದರಿಂದ ನಾವು ಹಿಂದೂ ಜನಾಂಗದವರು ಆದರೆ ವೈದಿಕ ಧರ್ಮಕ್ಕೆ ಪರ್ಯಾಯವಾಗಿದ್ದೇವೆ. ಕೆಲವರು ಲಿಂಗಾಯತರು (ಬಸವ ತತ್ವದವರು) ಹಿಂದೂ ವಿರೋಧಿಗಳು ಎಂದು ಅಪಪ್ರಚಾರ ಮಾಡುತ್ತಿರುವರು ಅದಕ್ಕೆ ಕಿವಿಗೊಡಬಾರದು.

ಲಿಂಗಾಯತರು ಜಾತಿಯಿಂದ ಹೊರಬರಲಿ:

ಇವನಾರವ ಇವನಾರವ ಇವನಾರವ ಎನ್ನದೆ ಇವನಮ್ಮವ ಇವನಮ್ಮವ ಎಂದು ಸರ್ವರನ್ನು ಇಂಬಿಟ್ಟುಕೊಂಡ ಶ್ರೇಷ್ಠ ಧರ್ಮ ಲಿಂಗಾಯತ ಧರ್ಮ. ಈ ಧರ್ಮ ಜಗತ್ತಿನ ಮಾನವರನ್ನೆಲ್ಲ ಒಂದೇ ಎಂದು ಸಮಾನತೆಯನ್ನು ಬೋಧಿಸುತ್ತದೆ, ಆದ್ದರಿಂದ ಲಿಂಗಾಯತರು ತಮ್ಮ ತಮ್ಮ ಉಪಜಾತಿಯ ಮೇಲರಿಮೆಯಿಂದ ಹೊರಬಂದು ನಾವು ಲಿಂಗಾಯತ ಧರ್ಮದವರೆಂಬ ಅಭಿಮಾನ ಮೂಡಿಸಿಕೊಳ್ಳಬೇಕು; ಜಾತಿ ನಿರ್ಮೂಲನೆಗೆ ಶ್ರಮಿಸಬೇಕು.

ಬೆಂಗಳೂರಿನಲ್ಲಿ ಅ 5ಕ್ಕೆ ಬಸವ ಸಂಸ್ಕೃತಿ ಅಭಿಯಾನಕ್ಕೆ ಕರೆ:

ಮಠಾಧೀಶರ ಒಕ್ಕೂಟದಿಂದ ಒಂದು ತಿಂಗಳ ಪರ್ಯಂತರ ರಾಜ್ಯಾದ್ಯಂತ ಹಮ್ಮಿಕೊಂಡ ಬಸವ ಸಂಸ್ಕೃತಿ ಅಭಿಯಾನದ ಬೃಹತ್ ಸಮಾರೋಪ ಸಮಾರಂಭ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಕ್ಟೋಬರ್ 5ಕ್ಕೆ ಬಸವ ಸಂಸ್ಕೃತಿ ಅಭಿಯಾನ ಜರುಗಲಿದೆ. ಲಕ್ಷಾಂತರ ಬಸವಭಕ್ತರು ಸೇರಲಿದ್ದು ಜಿಲ್ಲಾದ್ಯಂತ ಬಸವಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ

Share This Article
6 Comments
  • ಎಂಥ ಹೀನಮಾನ ಸ್ಥಿತಿಗೆ ಸ್ಥಿತಿಗೆ ತಲುಪಿದ್ದಾರೆ ಬಸವ ತತ್ವದವರು, ತಾವುಗಳು ಏನು ಮಾಡಿದರೂ ನಡೆಯುತ್ತದೆ, ತಾವುಗಳು ಬಸವ ಸಂಸ್ಕೃತಿಯ ಅಭಿಯಾನ ಅಂತ ವೀರಶೈವ ವಿರುದ್ಧ ವೇದಿಕೆಗಳಲ್ಲಿ ಮಾತನಾಡಿದರೆ ನಡೆಯುತ್ತದೆ, ವೀರಶೈವರ ವಿರುದ್ಧ ಷಡ್ಯಂತ್ರ ಮಾಡಿದರು ನಡೆಯುತ್ತದೆ, ಆದರೆ ಇವರಿಗೆ ಒಂದು ಅಡ್ಡ ಪಲ್ಲಕ್ಕಿ ಉತ್ಸವ ನಡೆಸಿದರೆ ಇವರಿಗೆ ಇಲ್ಲಿಲ್ಲದ ಉಗ್ರ ಹೋರಾಟದ ನೆನಪಾಗುತ್ತದೆ, ಬಸವಣ್ಣನವರು ಯಾವುದೇ ಒಂದು ಜಾತಿಗೆ ಸೀಮಿತವಾಗಿರಲಿಲ್ಲ, ಜಾತಿ ಭೇದವಿಲ್ಲದೆ ಸಮಾಜ ಸುಧಾರಣೆಯನ್ನು ಮಾಡಿದವರು, ಇಂದು ಈ ಹೀನ ಮನಸ್ಥಿತಿಯ ಬಸವವಾದಿಗಳು ಅವರನ್ನು ಒಂದು ಜಾತಿಗೆ ಸೀಮಿತ ಮಾಡಿ ಅವರ ಅವರ ತತ್ವಗಳಿಗೆ ಆದರ್ಶಗಳಿಗೆ ಮಸಿ ಬಡಿಯುವ ಪ್ರಯತ್ನ ಮಾಡುತ್ತಿದ್ದೀರಾ, ಬಸವಾದಿ ಶರಣರು ನೀಡಿದಂತ ಆದರ್ಶ ಮಾರ್ಗವನ್ನು ಬಿಟ್ಟು ನಿಮ್ಮ ನಡೆ ದುರ್ಮಾರ್ಗದಲ್ಲಿ ನಡೆಯುತ್ತಿದೆ

    • ಅಲ್ಲ ಸರ್, ಬೇಡ ಜಂಗಮ ಹೆಸರಲ್ಲಿ ಹಿಂಬಾಗಿಲಿನಿಂದ ದಲಿತರಾಗಲು ಹೊರಟಿದ್ದರು, ಅದನ್ನು ಸ್ಬಲ್ಪ ಪ್ರಶ್ನಿಸಬೇಕಲ್ವ ? ಮೀಸಲಾತಿ ಲಾಭಕ್ಕೆ ಇವರು ಬೇಡ ಜಂಗಮರಂತೆ . ಲಿಂಗಾಯತರ ಹೆಗಲ ಮೇಲೆ ಮೆರೆಯಲು ಇವರು ವೀರಶೈವರಂತೆ ಇದು ಇಬ್ಬದಿ‌ನೀತಿ ಅಲ್ವ ?

      ಬಸವಣ್ಣನವರ ಒಂದು ವಚನದಂತೆಯಾದರೂ ಇವರು ತಮ್ಮ ಮಠದಲ್ಲಿ ಅಥವಾ ಭಕ್ತರಿಗೆ ಬದುಕು ವಂತೆ ಹೇಳುತ್ತಾರಾ ?

      ನೀವು ಕೇವಲ ರಾಜಕೀಯಕ್ಕಾಗಿ ಲಿಂಗಾಯತರನ್ನು ದೂಷಿಸುತ್ತಿದ್ದೀರಿ ಅಷ್ಟೇ. ಲಿಂಗಾಯತರು ಮುಸ್ಲಿಂ, ಕ್ರಶ್ಚಿಯನ್, ಹೀಮದೂಗಳ ವಿರೋಧಿಯಲ್ಲ ,ಆದರೆ ಲಿಂಗಾಯತ ಏಕದೇವೋಪಾಸನೆಯ ಅವೈದಿಕ ಧರ್ಮ ಅಷ್ಟೇ.

  • ಇವರು ಮಾಡ್ತಾ ಇರೋದು ಬಸವ ಪ್ರಚಾರ ಅಲ್ಲ, ಹಿಂದೂ ಮತ್ತು ವೀರಶೈವರ ವಿರೋಧಕ್ಕಾಗಿ ಈ ಬಣ ಸೃಷ್ಟಿಯಾಗಿದೆ ಅನಿಸುತ್ತಿದೆ

    • ಬಸವಣ್ಣನವರ ಒಂದು ವಚನ ಹೀಗಿದೆ

      ಮಡಕೆ ದೈವ, ಮೊರ‌ ದೈವ , ಬೀದಿಯ ಕಲ್ಲು ದೈವ,

      ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೊ!

      ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೊ!

      *ದೈವ ದೈವವೆಂದು ಕಾಲಿಡಲಿಂಬಿಲ್ಲ, ದೈವನೊಬ್ಬನೆ ಕೂಡಲಸಂಗಮದೇವ*

      ಕಾಲಿಡಲು ಜಾಗವಿಲ್ಲದಷ್ಟು ದೇವರನ್ನು ಮಾಡಿದ್ದೀವಲ್ಲ ಎಂದು ಪ್ರಶ್ನಿಸಿದ ಶರಣರ ಇಂತಹ ವಚನಗಳು ಬೆಳಕಿಗೆ ಬಂದ ಮೇಲೆಯೇ ಅವರ ವೈಚಾರಿಕತೆಯ ಅರಿವಾಗಿದ್ದು.

      ಶರಣರು ತಮ್ಮ ಸಹಸ್ರ ವಚನಗಳಲ್ಲಿ ವೇದಗಳು, ಹದಿನೆಂಟು ಪುರಾಣಗಖಳು, ಹೋಮ, ಹವನ, ಶಿವ, ವಿಷ್ಣು, ಗಣಪ, ಕಾರ್ತಿಕ, ಪಾರ್ವತಿ, ಕೈಲಾಸ, ಸ್ವರ್ಗ, ಇಂದ್ರ, ಆರಾಧಿಸುವ ಅಗ್ನಿ ಇದಾವುದನ್ನೂ, ಸ್ತುತಿಸುವ, ಭಜಿಸುವ, ಹೊಗಳುವ, ಸಮರ್ಥಿಸುವ ವಚನಗಳಿಲ್ಲ.

      ಹಾಗಾಗಿಯೇ ಲಿಂಗಾಯತ ಸ್ವತಂತ್ರ ಧರ್ಮ, ಇದನ್ನು ಸಂಯುಕ್ತ ಕರ್ನಾಟಕದ ಸಂಪಾದಕರು ೫೦ ವರ್ಷದ ಕೆಳಗೆ ಹೇಳಿದ್ದಾರೆ, ಅಷ್ಟೇ ಏಕೆ ಗೋಲ್ವಾಲ್ಕರ್ ಅವರು ತಮ್ಮ ಪುಸ್ತಕದಲ್ಲಿ ಲಿಂಗಾಯತರನ್ನು ಇತರ ಧರ್ಮೀಯರಂದೇ ಸಂಭೋಧಿಸಿದ್ದಾರೆ.

      ಓದಿದ
      ಎಲ್ಲರಿಗೂ ಗೊತ್ತು, ಲಿಂಗಾಯತ ಒಂದು ಸ್ವತಂತ್ರ ಅವೈದಿಕ ಧರ್ಮ , ಆದರೆ ಲಿಂಗಾಯತರನ್ನು ರಾಜಕೀಯವಾಗಿ ಬಳಸಿಕೊಳ್ಳುವ ಹಿಂದೂ ಸಂಘಟನೆಗಳಿಗೆ ಲಿಂಗಾಯತರ ಅಸ್ಮಿತೆ ಪ್ರಶ್ನೆ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ ಅಷ್ಟೇ.

  • ಈ ಪಂಚ ಪೀಡೆಗಳು ಬಸವಣ್ಣವರ ಬಗ್ಗೆ ಹಗುರವಾಗಿ ಮಾತನಾಡಿದರೆ ಉಗ್ರ ಹೋರಾಟ ಮಾಡಲೇಬೇಕು ಬಸವಕಲ್ಯಾಣದ ಶರಣರ ಈ ನಿರ್ಧಾರಕ್ಕೆ ಧನ್ಯವಾದಗಳು

Leave a Reply

Your email address will not be published. Required fields are marked *