ತಾಳೀಕೋಟೆಯ ಯುದ್ಧದ ನಂತರ ಹಂಪಿಯಲ್ಲಿ ವಿಜಯ ವಿಠ್ಠಲ, ಉಗ್ರ ನರಸಿಂಹ, ಬಾಲಕೃಷ್ಣ, ಹಜಾರ ರಾಮ ಮುಂತಾದ ವೈಷ್ಣವ ದೇವಾಲಯಗಳು ಭಗ್ನಗೊಂಡವು.
ಆದರೆ ವಿರೂಪಾಕ್ಷ, ಉದ್ದಾನ ವೀರಭದ್ರ, ಬಡವಿಲಿಂಗಗಳಂತಹ ಶೈವ ದೇವಾಲಯಗಳು ನಾಶವಾಗದೆ ಸಂರಕ್ಷಿಸಲ್ಪಟ್ಟವು. ಕೃಷ್ಣದೇವರಾಯನ ವೈಷ್ಣವ-ತೆಲುಗು ಪಕ್ಷಪಾತ ನೀತಿಯೇ ಇದಕ್ಕೆ ಕಾರಣ.
ಹಂಪಿಯ ಮೂಲದೈವವಾದ ವಿರೂಪಾಕ್ಷನಿಗೆ ಅಪಾರ ಭಕ್ತರಿದ್ದರೂ, ಕೃಷ್ಣದೇವರಾಯ ವೈಷ್ಣವ ಸಂಸ್ಕೃತಿಯನ್ನು, ಅದರಲ್ಲೂ ತಿರುಪತಿಯ ವೆಂಕಟೇಶ ಭಕ್ತಿಯನ್ನು, ಮೆರೆಯಿಸಿದನು.
ವಿರೂಪಾಕ್ಷನಿಗೆ ಪ್ರತಿಸ್ಪರ್ದಿಯಾಗಿ ಎನ್ನುವಂತೆ ಹಲವಾರು ವೈಷ್ಣವ ದೇವಾಲಯಗಳನ್ನು, ಉಗ್ರನರಸಿಂಹರಂತಹ ಬೃಹತ್ ಏಕಶಿಲಾ ವಿಗ್ರಹಗಳನ್ನು ನಿರ್ಮಿಸಿದನು.
ತಿರುಪತಿಯಂತ ವೈಷ್ಣವ ಕ್ಷೇತ್ರಗಳಿಗೆ ಕಣ್ಣು ಕುಕ್ಕುವಂತೆ ದಾನ ಮಾಡಿದರೂ ವಿರೂಪಾಕ್ಷನನ್ನು ಕಡೆಗಣಿಸಿದ. ಪಟ್ಟಕ್ಕೆ ಬಂದ ೩ ವರ್ಷದ ನಂತರ ವಿರೂಪಾಕ್ಷನ ಕಡೆ ತಿರುಗಿಯೂ ನೋಡಲಿಲ್ಲ.
ಅವನ ಮಾತೃಭಾಷೆ ತೆಲುಗಿಗೆ ಸುವರ್ಣಯುಗ ಸೃಷ್ಟಿಯಾದರೆ, ಅವನ ಆಸ್ಥಾನದಿಂದ ಬಂದ ಕನ್ನಡ ಕೃತಿ ಒಂದೇ ಒಂದು. ಕನ್ನಡಿಗರ ರಾಜನಾಗಿದ್ದರೂ ಅವನ ಆಡಳಿತದಲ್ಲಿ ತೆಲುಗಿನವರೇ ತುಂಬಿದ್ದರು
ಕನ್ನಡದ ವಿರೂಪಾಕ್ಷ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಿಟ್ಟಿಗೆದ್ದ ಮೂಲ ನಿವಾಸಿಗಳು ಆದಿಲ್ ಶಾಹಿಗಳ ಜೊತೆ ಸೇರಿ ತೆಲುಗಿನ ವೆಂಕಟೇಶ ಸಂಸ್ಕೃತಿಗೆ ತಿರುಗಿಬಿದ್ದರು.
ಆದರೆ ಮೊದಲು ಇತಿಹಾಸ ಬರೆದ ವೈದಿಕರು ಇವನ ಪಕ್ಷಪಾತ ಮುಚ್ಚಿಟ್ಟು ಈ ಯುದ್ಧವನ್ನು ಕೇವಲ ಹಿಂದೂ ಮುಸ್ಲಿಂ ಘರ್ಷಣೆಯಾಗಿ ತಿರುಗಿಸಿದರು.
(‘ಕೃಷ್ಣದೇವರಾಯ: ತೆಲುಗು ಸಂಸ್ಕೃತಿಯ ಆಕ್ರಮಣ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪)