ಪ್ರಾಚೀನ ಕರ್ನಾಟಕಕ್ಕೆ ಉತ್ತರ ಭಾರತದಿಂದ ವಲಸೆ ಬಂದು ಕನ್ನಡಿಗರ ಮೇಲೆ ಹಿಡಿತ ಸಾಧಿಸಿದ ವೈದಿಕ ಧರ್ಮ ಎರಡು ದ್ವಂದ್ವ ಸಿದ್ದಾಂತಗಳನ್ನು ಪಾಲಿಸುತಿತ್ತು.
ಜೀವಾತ್ಮ ಮತ್ತು ದೇವರು ಒಂದೇ ಎನ್ನುವ ‘ಅದ್ವೈತ’ ಸಿದ್ದಾಂತ, ಆದರೆ ಜೀವಾತ್ಮ- ಜೀವಾತ್ಮಗಳ (ವ್ಯಕ್ತಿ-ವ್ಯಕ್ತಿಗಳ) ನಡುವೆ ಬೇಧ ಕಲ್ಪಿಸಿ ಸಮಾಜವನ್ನು ಹೋಳಾಗಿಸುವ ‘ದ್ವೈತ’ ಸಿದ್ದಾಂತ.
ಈ ಅಧ್ಯಾತ್ಮದಿಂದ ಕನ್ನಡಿಗರು ವೈಯಕ್ತಿಕವಾಗಿ ಸಬಲರು, ಸಾಮಾಜಿಕವಾಗಿ ದುರ್ಬಲರಾದರು. ಇಲ್ಲಿ ಧಾರ್ಮಿಕ ಸಂದೇಶಗಳು ಅಪಾರ, ಸಾಮಾಜಿಕ ನ್ಯಾಯದ ಚಿಂತನೆ ವಿರಳ.
ವೈದಿಕ ಧರ್ಮದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವರ್ಣಗಳು ಬಂದವು. ವೃತ್ತಿಗಳು ಜಾತಿಗಳಾಗಿ, ಜಾತಿಗೊಂದು ದೇವೆತೆಯಾಗಿ, ಪ್ರಾಬಲ್ಯಕ್ಕಾಗಿ ಇವು ಕಾದಾಡ ತೊಡಗಿದವು.
ಒಡಕಿನಿಂದ ಬಲಹೀನರಾದ ಕನ್ನಡಿಗರು ಮುಸುಲ್ಮಾನರಿಗೆ, ಬ್ರಿಟಿಷರಿಗೆ ರಾಜಕೀಯವಾಗಿ, ಸಾಮಾಜಿಕವಾಗಿ ಸೋತು ಗುಲಾಮಗಿರಿಗೆ ಹೊಂದಿಕೊಂಡರು.
ಕನ್ನಡಿಗರ ಒಳಗಿನ ‘ಅಸ್ಮಿತ’ ಹೊರಗಿನ ‘ಅಸ್ತಿತ್ವ’ ಶಿಥಿಲಗೊಂಡಿತು. ಸ್ವಾಭಿಮಾನಕ್ಕಿಂತ ಸಹನೆ, ತಮ್ಮವರೊಂದಿಗೆ ಕಾದಾಡುವ, ಅನ್ಯರೊಂದಿಗೆ ಹೊಂದಿಕೊಳ್ಳುವ ಸ್ವಭಾವ ಬೆಳೆಯಿತು.
ವೈದಿಕ ಧರ್ಮದಲ್ಲಿ ಸಾಮಾನ್ಯ ಘೋಷಣಗಳಿಗಿರುವ ಆಕರ್ಷಣೆ ವಿಮರ್ಶಾತ್ಮಕ ವಿಚಾರಗಳಿಗಿಲ್ಲ. ಆದ್ದರಿಂದ ಯಾವುದನ್ನೂ ಪ್ರಶ್ನಿಸದೆ ಎಲ್ಲವನ್ನು ಒಪ್ಪಿಕೊಳ್ಳುತ್ತಾ ಕನ್ನಡಿರು ಬೆಳೆದರು.
(‘ಆಳ್ವಾಸ್ ನುಡಿಸಿರಿ ಸಮ್ಮೇಳನದ ಅಧ್ಯಕ್ಷ ಭಾಷಣದಿಂದ’ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)