ಲಿಂಗಾಯತರ ಮಾರ್ಗ: ಹಳಕಟ್ಟಿಯಿಂದ ಸ್ವತಂತ್ರ ಧರ್ಮ ಹೋರಾಟದ ತನಕ

ನಾಗರತ್ನ ಜಿ ಕೆ
ನಾಗರತ್ನ ಜಿ ಕೆ

ನಮ್ಮ ಲಿಂಗಾಯತ ಧರ್ಮದ ತಳಹದಿಯ ಮೇಲೆ ಬಂದಿರುವ ಎಲ್ಲಾ ಸಂಘಟನೆಗಳನ್ನು ನಾವು ಗೌರವಿಸಬೇಕು

ಮೈಸೂರು

ಬಸವ ಭಾರತ ಪ್ರತಿಷ್ಠಾನದ ಶಿವರುದ್ರಪ್ಪ ಅವರ ಮನೆಯಲ್ಲಿ ರವಿವಾರ ಲಿಂಗಾಯತ ಧರ್ಮದ ಜಾಗೃತಿ ಅಭಿಯಾನವನ್ನು ಏರ್ಪಡಿಸಲಾಗಿತ್ತು.

ಪ್ರೊಫೆಸರ್ ಸಿದ್ದಣ್ಣ ಲಂಗೋಟಿಯವರು ಲಿಂಗಾಯತ ಧರ್ಮದ ಇತಿಹಾಸವನ್ನು ಪರಿಚಯ ಮಾಡಿಕೊಟ್ಟರು.

ವಚನ ಸಾಹಿತ್ಯದ ಪಿತಾಮಹ ಫ. ಗು ಹಳಕಟ್ಟಿ, ಪ್ರಪ್ರಥಮವಾಗಿ ದಾವಣಗೆರೆಯಲ್ಲಿ 1913ರಲ್ಲಿ ಬಸವ ಜಯಂತಿಯನ್ನು ಆಚರಿಸಿದ ಹರಡೇಕರ್ ಮಂಜಪ್ಪನವರನ್ನು, ಅನುಭವ ಮಂಟಪದ ಐತಿಹಾಸಿಕತೆ ಎಂಬ ಕೃತಿಯನ್ನು ಬ್ರಿಟಿಷರ ಕಾಲದಲ್ಲಿಯೇ ರಚಿಸಿದ್ದ ರೆವೆರೆಂಡ್ ಉತ್ತಂಗಿ ಚನ್ನಬಸಪ್ಪ ನವರು ಮೂವರು ಗುರುಲಿಂಗಜಂಗಮದಂತೆ ನಮ್ಮ ಲಿಂಗಾಯತ ಧರ್ಮ ಮೂಂಚಣೆಗೆ ಬರಲು ಕಾರಣೀಭೂತರು.

ಪೂಜ್ಯ ಲಿಂಗಾನಂದ ಅಪ್ಪನವರು ಪ್ರವಚನ ನಡೆಸಿದರೆ ಪೂಜ್ಯ ಸಿದ್ರಾಮಣ್ಣ ಶರಣರು ವಚನ ಸಂಗೀತವನ್ನು ಬಿತ್ತರಿಸಿದವರು. ಬೀಳೂರು ಗುರುಬಸವ ಸ್ವಾಮಿಗಳು, ಅಥಣಿ ಶಿವಯೋಗಿಗಳು ಹಾಗೂ ಬಿದರಿ ಕುಮಾರಸ್ವಾಮಿಗಳು ಈ ಮೂರು ಜನರ ಪರಿಶ್ರಮದ ಫಲವಾಗಿ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ 1906 ರಲ್ಲಿ ಭಾಗಲಕೋಟಿಯಲ್ಲಿ ಮೊದಲ ಶಿಕ್ಷಣ ಸಂಸ್ಥೆ ಪ್ರಾರಂಭವಾಯಿತು.

ಇದಾದ ನಾಲ್ಕೇ ವರ್ಷಗಳಲ್ಲಿ 1910ರಲ್ಲಿ ಬಿಜಾಪುರ ಲಿಂಗಾಯತ ಎಜುಕೇಶನ್ ಸೊಸೈಟಿಯನ್ನು ಹಳಕಟ್ಟೆಯವರು ಪ್ರಾರಂಭಿಸಿದರು. ಹಳಕಟ್ಟಿಯವರು ವಚನ ಸಾಹಿತ್ಯದ ತಾಡೋಲೆಗಳನ್ನು ಸಂಗ್ರಹಿಸಿ ಮುದ್ರಿಸದೇ ಹೋಗಿದ್ದರೆ ಇವತ್ತು ನಮಗೆ ವಚನ ಸಾಹಿತ್ಯದ ಲಿಂಗಾಯತ ಧರ್ಮದ ಪರಿಚಯ ಆಗುತ್ತಿರಲಿಲ್ಲ.

ನಂತರ 1916ರಲ್ಲಿ ಬೆಳಗಾವಿಯಲ್ಲಿ ಕೆಎಲ್ಇ ಸಂಸ್ಥೆ ಏಳು ಜನ ಶಿಕ್ಷಕರಿಂದ ಪ್ರಾರಂಭವಾಯಿತು ಕೇವಲ 2% ಶಿಕ್ಷಣವನ್ನು ಪಡೆಯುತ್ತಿದ್ದ ನಮ್ಮ ಸಮುದಾಯ ಇಂದು 80% ಶಿಕ್ಷಣವನ್ನು ಈ ಮೂರು ಸಂಸ್ಥೆಗಳಿಂದಾಗಿ ನಮ್ಮ ಉತ್ತರ ಕರ್ನಾಟಕದ ಭಾಗದಲ್ಲಿ ಪಡೆಯುತ್ತಿವೆ ಇದು ನಮ್ಮ ಸಮುದಾಯದ ಒಂದು ಸಾಧನೆ.

20ನೇ ಶತಮಾನದಲ್ಲಿ ಮೊಟ್ಟ ಮೊದಲಿಗೆ ನಮ್ಮ ಸಮುದಾಯದ ಸಂಘಟನೆ ಯಾಗಬೇಕು ಎನ್ನುವ ವಿಚಾರ ಬಂದದ್ದು, ಸಂಘಟನೆಯನ್ನು ಹುಟ್ಟು ಹಾಕಿದ್ದು ನಮ್ಮ ಹರಡೇಕರ್ ಮಂಜಪ್ಪನವರು. ಇವರು ದಾವಣಗೆರೆಯಲ್ಲಿ 20 ವರ್ಷಗಳ ಕಾಲ ನೆಲೆಸಿ ಮೂರು ಪತ್ರಿಕೆಗಳನ್ನು ಹೊರ ತಂದರು. ಅದರಲ್ಲಿ ಒಂದು ಶರಣ ಸಂದೇಶ.

ಬಸವೇಶ್ವರ ಸೇವಾ ದಳ ಎನ್ನುವ ಮೊಟ್ಟಮೊದಲ ಸಂಘಟನೆ ಹಾಗೂ ಮೊಟ್ಟಮೊದಲ ಬಾರಿಗೆ ಬಸವ ಜಯಂತಿಯನ್ನು ಪ್ರಾರಂಭಿಸಿದ್ದು ದಾವಣಗೆರೆಯಲ್ಲಿ ಹರಡೇಕರ್ ಮಂಜಪ್ಪನವರು ಇವರಿಗೆ ಸ್ಥಾನವನ್ನು ಕಲ್ಪಿಸಿಕೊಟ್ಟದ್ದು ದಾವಣಗೆರೆಯ ವಿರಕ್ತ ಮಠದ ಮೃತ್ಯುಂಜಯ ಸ್ವಾಮಿಗಳು.

ಬಸವೇಶ್ವರ ಸೇವಾ ದಳದ ಮೊಟ್ಟಮೊದಲ ಅಧ್ಯಕ್ಷರಾಗಿದ್ದವರು ಲಾ ವಿದ್ಯಾರ್ಥಿ ನಿಜಲಿಂಗಪ್ಪನವರು, ಕಾನೂನು ವಿದ್ಯಾರ್ಥಿಯಾಗಿದ್ದ ಸಿದ್ದಯ್ಯ ಪುರಾಣಿಕರು ಹಾಗೂ ಇನ್ನೂ ಮೂರ್ನಾಲ್ಕು ಜನ ಸೇರಿ ಬಸವೇಶ್ವರ ಸೇವಾ ದಳ ಪ್ರಾರಂಭವಾಯಿತು ಇದರಲ್ಲಿ ನೂರಾರು ಜನ ಹೆಣ್ಣು ಮಕ್ಕಳು ಗಂಡು ಮಕ್ಕಳು ಸಂಘಟನೆಯಲ್ಲಿ ಪಾಲ್ಗೊಂಡರು.

1904ರಲ್ಲಿ ಮೈಸೂರು ಪ್ರಾಂತ್ಯದವರಿಂದಾಗಿ ವೀರಶೈವ ಮಹಾಸಭಾ ಪ್ರಾರಂಭವಾಯಿತು. ಇದಕ್ಕೆ ಕಾರಣ ಮೈಸೂರು ಮಹಾರಾಜರು ಪಂಡಿತರಿಗೆ ಮತ್ತು ಶಾಸ್ತ್ರಿಗಳಿಗೆ ಆಶ್ರಯ ಕೊಡ್ತಾ ಇದ್ರು ಹಾಗೆ ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡಿ ಬಂದ ಪಂಡಿತರು ಶೈವ ಪದಕ್ಕೆ ಗಂಟು ಬಿದ್ದಿದ್ದರಿಂದ. ದಕ್ಷಿಣ ಭಾರತದ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರದಲ್ಲಿ ಒಟ್ಟು 147 ಲಿಂಗಾಯತ ಮತ್ತು ವೀರಶೈವವನ್ನು ಒಳಗೊಂಡ ಸಂಘಟನೆಗಳು ಇದ್ದಾವೆ.

12ನೇ ಶತಮಾನದ ಬಸವೇಶ್ವರ ತತ್ವದರ್ಶನ ಆಧಾರದ ಮೇಲೆ ಜನರಲ್ಲಿ ಬಸವ ಚಿಂತನೆಗಳ ಜಾಗೃತಿಯನ್ನು ಮೂಡಿಸಲು, ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಯ ಹಿತದೃಷ್ಟಿಯಿಂದ ಈ ಐದಾರು ವರ್ಷಗಳ ಹಿಂದಿನಿಂದ ಜಾಗತಿಕ ಲಿಂಗಾಯತ ಮಹಾಸಭಾ ಪ್ರಾರಂಭವಾಯಿತು.

ನಮ್ಮ ಲಿಂಗಾಯತ ಧರ್ಮದ ತಳಹದಿಯ ಮೇಲೆ ಪ್ರಾರಂಭಗೊಂಡಂತಹ ಎಲ್ಲಾ ಸಂಘಟನೆಗಳನ್ನು ನಾವು ಗೌರವಿಸಬೇಕು, ನಾವೆಲ್ಲ ಒಂದು ಎನ್ನುವ ಭಾವನೆಯಲ್ಲಿ ಎಲ್ಲರೂ ಒಟ್ಟಾಗಿ ಮುಂದೆ ಸಾಗಿ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಪಡೆದುಕೊಳ್ಳಬೇಕು.

ನಮ್ಮ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದವರಲ್ಲಿ ಒಂದೇ ವರ್ಷದಲ್ಲಿ ನಾಲ್ಕು ಮಹನೀಯರು ಲಿಂಗೈಕ್ಯರಾಗಿದ್ದರಿಂದ ನಮ್ಮ ಹೋರಾಟ ಸ್ವಲ್ಪ ನಿಧಾನ ಗತಿ ಯಾಯಿತು. ಕಾನೂನು ರೀತಿಯ ಹೋರಾಟದ ಮುಖಾಂತರ ನಾವು ಸ್ವತಂತ್ರ ಧರ್ಮದ ಮಾನ್ಯತೆಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು

ಎಲ್ಲಾ ಕಡೆಯೂ ನಿಜ ಲಿಂಗಾಯತದ ಅನುಷ್ಠಾನಗಳು ಆಚರಣೆಗೆ ಬರಬೇಕು ವೈದಿಕ ಪರಂಪರೆಯ ಆಚರಣೆಗಳನ್ನು ನಾವುಗಳು ಬಿಡಬೇಕು.

ಸಂಘಟನೆಯ ಹಿತದೃಷ್ಟಿಯಿಂದ ಮನೆ ಮನಗಳಲ್ಲಿ ಮಹಾ ಮನೆ ಕಾರ್ಯಕ್ರಮಗಳನ್ನು ಮಾಡಬೇಕು. ಗರ್ಭಸ್ಥ ಶಿಶುವಿನಿಂದ ಹಿಡಿದು ಅಂತ್ಯ ಸಂಸ್ಕಾರದ ವರೆಗೂ ಲಿಂಗಾಯತ ಸಂಸ್ಕಾರದಂತೆಯೇ ನಾವು ನಡೆದುಕೊಳ್ಳಬೇಕು.

ಶರಣೆ ಪ್ರೊಫೆಸರ್ ಕಲ್ಯಾಣಮ್ಮ ಲಂಗೋಟಿ ತಾಯಿಯವರು ತಮ್ಮ ನಾಲ್ಕು ಮಾತುಗಳಲ್ಲಿ ಕಣ್ಣೀ ಹೊಸೆಯುವ ಕಾಯಕ ಮಾಡ್ತಾ ಕೂಲಿ ಕೆಲಸ ಮಾಡ್ತಾ ಇದ್ದ ಕಾಲ ಕಣ್ಣಿಯ ಕಾಮಮ್ಮನವರ ವರೆಗೂ ಬಸವಣ್ಣನವರು ತಲುಪಿದರು. ಇವರು ಧರ್ಮವನ್ನು ಬೋಧಿಸಲಿಲ್ಲ ಬದುಕಿ ತೋರಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಮೈಸೂರು ಜಿಲ್ಲಾಧ್ಯಕ್ಷ ಮಹದೇವಪ್ಪ, ಗಣಾಚಾರಿ ಚೌಹಳ್ಳಿ ಲಿಂಗರಾಜ್ ಅವರು ಉಪಸ್ಥಿತರಿದ್ದರು. ಬಸವ ಭಾರತ ಪ್ರತಿಷ್ಠಾನದ ಅಧ್ಯಕ್ಷರಾದ ಶರಣ ಶಿವರುದ್ರಪ್ಪ ಅಣ್ಣನವರು ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿದರು ಹಾಗೂ ವಂದನಾರ್ಪಣೆಯನ್ನು ನೆರವೇರಿಸಿಕೊಟ್ಟರು. ಶರಣೆ ನಾಗರತ್ನ ಜಿ.ಕೆ ಯವರು ವಚನ ಪ್ರಾರ್ಥನೆಯನ್ನು ನೆರವೇರಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಬಸವ ಭಾರತ ಪತ್ರಿಕೆಯ ಶಿವರುದ್ರಪ್ಪನವರ ಕುಟುಂಬದ ಪ್ರೇಮಮ್ಮ, ರೂಪ, ಆಕಾಶ್ ಅಮೃತೇಶ್, ರಾಷ್ಟ್ರೀಯ ಬಸವದಳದ ಅಧ್ಯಕ್ಷರು ಗಂಗಾಧರ ಸ್ವಾಮಿ ಮತ್ತು ಚಂದ್ರಶೇಖರ್, ಜಾಗತಿಕ ಲಿಂಗಾಯತ್ ಮಹಾಸಭೆಯಿಂದ ಮಹದೇವಪ್ಪನವರು, ಮರಪ್ಪನವರು, ನಾಗರತ್ನ ಜಿ ಕೆಯವರು, ಜಗದಂಬ ಪ್ರಸನ್ನರವರು, ರಾಜ್ ಕಿಶೋರ್ ರವರು, ಹಿರಿಯ ನಾಗರಿಕರ ಸೇವಾ ಕೇಂದ್ರದ ಮಲೆಯೂರು ಗುರುಸ್ವಾಮಿಯವರು, ಶೆಟ್ಟನಾಯಕನಹಳ್ಳಿಯ ನಂದೀಶಣ್ಣನವರು, ಮಾದಳ್ಳಿಯ ಮಹದೇವಸ್ವಾಮಿಯವರು ಹಾಗೂ ಇನ್ನು ಕೆಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Share This Article
Leave a comment

Leave a Reply

Your email address will not be published. Required fields are marked *