ಶ್ರೀಗಳು ತಮ್ಮ ಪೀಠದ ಆಶೋತ್ತರವನ್ನು ಗಾಳಿಗೆ ತೂರಿ ಬಸವಧರ್ಮಕ್ಕೆ ತಿಲಾಂಜಲಿ ನೀಡಿರುವುದು ವಿಪರ್ಯಾಸವೇ ಸರಿ
ಬಸವ ಕಲ್ಯಾಣ
ವೈದಿಕ ಮನಸ್ಥಿತಿಯುಳ್ಳ ಮಾದಾರ ಚೆನ್ನಯ್ಯ ಸ್ವಾಮಿಗಳು ಜಾತಿ ಮನೆಯಲ್ಲಿರಲಿ ಹೊರಗಲ್ಲ ಎಂದರೆ ಏನರ್ಥ?
ಜಾತಿ ಎನ್ನುವ ಮನಸ್ಥಿತಿ ಮನದಲ್ಲಿ ಮತ್ತು ಮನೆಯೊಳಗಿದ್ದಾಗಲೇ ಅದು ಹೊರಗಡೆ ಪ್ರಕಟವಾಗುವುದು. ಜಾತಿ ಒಳಗಿರಲಿ ಹೊರಗಲ್ಲ ಎಂಬುದು ಅರ್ಧ ಸತ್ಯ ಇದು ಬ್ರಾಹ್ಮಣ್ಯ ನೀತಿಯಾಗಿದೆ.
ಹಾವು ಸಾಯಬಾರದು ಕೋಲು ಮುರಿಯಬಾರದು ಎನ್ನುವ ಹಾಗೆ ಜವಬ್ದಾರಿ ಸ್ಥಾನದಲ್ಲಿ ಇದ್ದವರು ಅರ್ಧ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಬಾರದು. ಬಸವಧರ್ಮ ಹಿನ್ನೆಲೆ ಹೊಂದಿದ ಮಾದಾರ ಚೆನ್ನಯ್ಯ ಸ್ವಾಮಿಗಳು ಹಿಂದುತ್ವ ಮನಸ್ಥಿತಿಯಿಂದ ಹೊರಬರಲಿ.
ಸಂಘ ಪರಿವಾರದಲ್ಲಿ ಬೆಳೆದ ಸ್ವಾಮಿಗಳಿಗೆ ವೈದಿಕರು ಸೃಷ್ಟಿಸಿದ ಜಾತಿಯ ಕರಾಳ ಸ್ಥಿತಿ ಅರ್ಥವಾಗದಾಗಿದೆ. ಅರ್ಥವಾದರೂ ಸ್ವಾರ್ಥ ಸಾಧನೆಗಾಗಿ ಮಾದಿಗ ಸಮುದಾಯವನ್ನು ವೈದಿಕರ ಗುಲಾಮರಾಗಿಸುವುದು ದುರಂತವೇ ಸರಿ.
ಹಿಂದೂ ವೈದಿಕ ಧರ್ಮವೇ ರಾಷ್ಟ್ರೀಯತೆ ಎಂದು ತಿಳಿದುಕೊಂಡು ಅದರ ಬೆಳವಣಿಗೆಗೆ ಹಗಲಿರುಳು ಶ್ರಮಿಸುವ ಪೂಜ್ಯರು ತಮ್ಮ ಪೀಠದ ಆಶೋತ್ತರವನ್ನು ಗಾಳಿಗೆ ತೂರಿ ಬಸವಧರ್ಮಕ್ಕೆ ತಿಲಾಂಜಲಿ ನೀಡಿರುವುದು ವಿಪರ್ಯಾಸವೇ ಸರಿ.
ದೇಶದಲ್ಲಿ ಜಾತಿಯತೆ ಹೊಗಬೇಕಾದರೆ ಅದು ಬಸವಧರ್ಮದಿಂದ ಮಾತ್ರ ಸಾಧ್ಯ. ಹಿಂದುತ್ವದಿಂದ ಸಾಮರಸ್ಯ ಸಾಧ್ಯವಿಲ್ಲ. ಮತಾಂತರ ತಡೆಗಟ್ಟಬೇಕಾದರೆ ಜಾತಿ ನೋಡದೆ ಅವರಲ್ಲಿ ಪ್ರೀತಿ, ಸಹೋದರತೆ ಮತ್ತು ಸಮಾನತೆಯ ಸಾಮರಸ್ಯದ ಬೆಸುಗೆ ಹಾಕಬೇಕು. ಉಂಡು ಉಡುವ, ಕೊಂಬ-ಕೊಡುವ ಸಂಸ್ಕೃತಿ ನಡೆಯಬೇಕು ಕೇವಲ ದಲಿತರ ಮನೆಯಲ್ಲಿ ಪಾದಪೂಜೆ ಮಾಡಿಸಿಕೊಂಡರೆ ಸಾಲದು.
ಮಾದಾರ ಚೆನ್ನಯ್ಯ ಸ್ವಾಮಿಗಳು ಹಿಂದುತ್ವ, ರಾಷ್ಟ್ರೀಯತೆ ಮಾತುಗಳನ್ನಾಡುವುದು ಬಿಟ್ಟು ತಮ್ಮ ಗುರುಗಳಂತೆ ಮಾದಿಗ ಸಮಾಜವನ್ನು ಬಸವಧರ್ಮಕ್ಕೆ ಜೋಡಣೆ ಮಾಡುವ ಕಾರ್ಯ ಮಾಡಲಿ.
ಸರಿಯಾದ ಮತ್ತು ಒಳ್ಳೆಯ ಮಾತುಗಳನ್ನು ಹೇಳಿದ್ದೀರಿ. ಮಾದಾರ ಚನ್ನಯ್ಯ ಶ್ರೀಗಳಿಗೆ ಬಸವತತ್ವದಲ್ಲಿ ನಂಬಿಕೆಯಿಲ್ಲದಿದ್ದಲ್ಲಿ ಮಠವನ್ನು ತೊರೆಯಲಿ.
ಬಸವತತ್ವ ಆಲೋಚನೆಗಳನ್ನು ಅಷ್ಟು ಸುಲಭವಾಗಿ ನಮ್ಮಸಮಾಜ ಬಂಧುಗಳು ಜಾತಿ ಜಂಜಾಟದಿಂದ ಹೊರಬಂದು ಸ್ವೀಕರಿಸಲು ಸಿದ್ದರಿಲ್ಲ… ಆಗಾಗಿ ಹಂತಹಂತವಾಗಿ ಆಂದೋಲನ ಜ್ಞಾನ ವಿಕಾಸ ಕಮ್ಮಟಗಳು ಮನೆಮನೆಯಲ್ಲಿ, ಕುಟುಂಬ ಕುಟುಂಬಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಎಡೆಬಿಡದೆ ನಿರಂತರವಾಗಿ ಜಾಗೃತರಾಗಿ ಜಾಗೃತಿ ಮೂಡಿಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು…
ಇಂದು ಇದು ಅಷ್ಟು ಸುಲಭ ಸರಳ ಸಾಧ್ಯವಿಲ್ಲ… ಹತ್ತಾರು ವರ್ಷ ಕ್ರಾಂತಿ ಆಗಬೇಕು ತಮ್ಮನ್ನು ತಾವೇ ಅರ್ಪಿಸಿಕೊಳ್ಳುವ ಮನಸ್ಥಿತಿ ಮನಸುಗಳು ಉದಯವಾಗಬೇಕು
ಬಹುತೇಕರಿಗೆ ತಮ್ಮ ಜಾತಿ ಪ್ರಮಾಣ ಪತ್ರ ಇದೆ ಎಂದು ತಿಳಿದ್ದಿದರು… ನಾವು ಜಾತಿ ಮಾಡಲ್ಲ ಅಂತ ನಾಜುಕಾದ ನಾಟಕ ಮಾಡುತ್ತಾರೆ.
ಸಂವಿಧಾನದ ಅಡಿಯಲ್ಲಿ ಜಾತಿ ಪ್ರಮಾಣ ಪತ್ರ ಸರಕಾರ ಕೊಡುತ್ತಿದೆ ಎಂಬ ಸತ್ಯವನ್ನು ಮರೆಮಾಚಾಲು ಸಾಧ್ಯವಿಲ್ಲ.
ಜಾತಿ ಸೂತಕ ಅಲ್ಲವಯ್ಯ… ನಿಮ್ಮ ನಡೆ ನುಡಿ ಅದಮ ವಾದಲ್ಲಿ ಅದುವೇ ಸೂತಕ ಎಂದು ಶಿವ ಶರಣ ಮಹಾ ಶರಣ ಮಾದಾರ ಚನ್ನಯ್ಯ, ಬಸವಣ್ಣ ಅದಿಯಾಗಿ..ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ‘ ನಡೆ ನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕ ಇಲ್ಲ ‘ ಅದಕ್ಕೆ ಹೇಳೋದು ಜಾತಿ ಸೂತಕ ಅಲ್ಲ… ಜಾತಿ ಯಾವುದು ಆದರೇನು.. ಧರ್ಮ ಯಾವುದಾದರೇನು.. ನಮ್ಮ ನಡೆ ನುಡಿ ಉತ್ತಮ ಇದ್ದರೆ ಅದುವೇ ಸರ್ವೋತ್ತಮ.. ಸಾಮರಸ್ಯ ಬದಕು ಅವಶ್ಯಕತೆ ಇದೆ ಎಂದು ತಿಳಿದರೆ ಸಾಕು…. ಬಸವಣ್ಣನವರು ಮಾದರ ಚನ್ನಯ್ಯ ನನ್ನ ಅಪ್ಪ. ಈಗಿನ ಬಸವ ಬಳಗ ದವರು… ಮನೆ ಬಾಡಿಗೆಗೆ ಕೇಳಿದರೆ… ನೀವು non-veg, or Veg ಕೇಳುತ್ತಾರೆ….
ಮಾದಿಗರೇಕೆ ಬಸವ ಧರ್ಮಕ್ಕೆ ಜೋಡಣೆಯಾಗಬೇಕು,?? ಲಿಂಗಾಯತ ಅನ್ನಜಾತಿನೇ ಹಿಂಧೂ ಧರ್ಮದಲ್ಲಿ ಇರೋವಾಗ ಮಾದಿಗರೇಕೆ ಇರಬಾರದು??
ಲಿಂಗಾಯತ ಜಾತಿಯಾಗಿರಬಹುದು ಆದರೆ ಬಸವಧರ್ಮ ಜಾತ್ಯಾತೀತ ಆಚರಣೆ ಹೊಂದಿದೆ…. ಬಸವಧರ್ಮದಲ್ಲಿ ಏಕೆ ಮಾದಾರರು ಇರಬೇಕೆಂದರೆ ಬಸವಣ್ಣನವರು ಮಾದಾರ ಚೆನ್ನಯ್ಯನನ್ನು ಅಪ್ಪ ಎಂದು ಗೌರವಿಸಿದ್ದಕ್ಕೆ …. ವೈದಿಕರು ಚಪ್ಪಲ್ ಬಿಡೋ ಜಾಗದಲ್ಲಿ ಕೂಡಿಸಿದರು… ಬಸವಣ್ಣ ತಲೆ ಮೇಲೆ ಹೊತ್ತು ಮಾದಾರರನ್ನು ಗೌರವಿಸಿದ್ದಕ್ಕಾಗಿ ಅಣ್ಣಾ….
ಇಂದು ಬಸವ ಧರ್ಮವನ್ನು ನಾವೆಲ್ಲರೂ ಸೇರಿ ಕುಬ್ಜಗೊಳಿಸಿದ್ದೇವೆ ಬಸವಣ್ಣನವರ ಆಲೋಚನೆಗಳನ್ನು ಒಂದು ಜಾತಿಗೆ ಸೀಮಿತಗೊಳಿಸಿ ಅಲ್ಪರಾಗಿದ್ದೇವೆ…