ಪಂಚಾಚಾರ್ಯರದು ವೈದಿಕತೆಯ, ಜಾತೀಯತೆಯ ಸಂಪ್ರದಾಯ

ವೈದಿಕರಿಂದ ಸೃಷ್ಟಿಯಾದ ಪಂಚಾಚಾರ್ಯರು ತಮ್ಮ ಸಿದ್ಧಾಂತಕ್ಕೆ ನಿಷ್ಠರಾಗಿಯೇ ಉಳಿದರು. ಶಾಸನ, ಗ್ರಂಥಗಳಲ್ಲಿ ತಮ್ಮನ್ನು ಬ್ರಾಹ್ಮಣ, ಶಿವ ದ್ವಿಜ, ಲಿಂಗಿ ಬ್ರಾಹ್ಮಣರೆಂದು ಕರೆದುಕೊಳ್ಳುತ್ತಿದ್ದರು.

ಅವರಲ್ಲಿ ಮೊದಲು ಭಾರದ್ವಾಜ, ಕಶ್ಯಪ, ಆತ್ರೇಯಗಳಂತಹ ಬ್ರಾಹ್ಮಣ ಗೋತ್ರಗಳೇ ಕಾಣಿಸುತ್ತಿದ್ದವು. ನಂತರ ಅವು ನಂದಿ, ಭೃಂಗಿ, ವೀರ ಮುಂತಾದ ಗೋತ್ರಗಳಿಗೆ ಬದಲಾದವು.

ಪಂಚಾಚಾರ್ಯರ ಪೂರ್ವಜರದು ಜಾತಿಭೇದದ ಸಂಪ್ರದಾಯ. ಲಿಂಗಸಗೂರಿನ ಕರಡಿಕಲ್ಲು ಗ್ರಾಮದಲ್ಲಿ ಸಿಕ್ಕ ಬಸವಣ್ಣನವರಿಗಿಂತ ಸ್ವಲ್ಪ ಹಳೆಯ ಶಾಸನ ಇವರ ಜಾತೀಯತೆಗೆ ಸಾಕ್ಷಿ.

ಇದರಲ್ಲಿ ಸೂಕ್ಷ್ಮ ಶಿವನೆಂಬ ಶುದ್ಧ ಶೈವ ಆಚಾರ್ಯ ಅಂತ್ಯಜರ ಮದುವೆ ಮೆರವಣಿಗೆ ಗ್ರಾಮದ ಅಂಗಡಿ ಬೀದಿಯೊಳಗೆ ಬಂದರೆ ೧೨ ಗದ್ಯಾಣ ದಂಡ ವಿಧಿಸಬೇಕೆಂದು ಅಪ್ಪಣೆ ಮಾಡುತ್ತಾನೆ.

ಅವರು ಬ್ರಾಹ್ಮಣರಂತೆ ಜುಟ್ಟು, ಮುಂಜಿ ಆಚರಣೆಗಳನ್ನು ಇಟ್ಟುಕೊಂಡು ತಮ್ಮ ಭಕ್ತರಲ್ಲಿ ಹೋಮ, ಹವನ, ವೇದ ಘೋಷ, ಜಾತಿ, ವರ್ಣಗಳನ್ನು ಪಾಲಿಸುವ ಸಂಪ್ರದಾಯ ಬೆಳಸಿದರು.

ಅವರ ವೈಭವದ ವೇಷ, ಆಚರಣೆಗಳಿಗೆ, ಸಂಸ್ಕೃತ ಸಿದ್ದಾಂತಕ್ಕೆ ಮಾರುಹೋಗಿ ಲಿಂಗಾಯತರು ಅವರ ಭಕ್ತರಾಗಿ ತಮ್ಮ ವಚನಗಳನ್ನು, ಶರಣ ಸಂಸ್ಕೃತಿಯನ್ನು ಉಪೇಕ್ಷಿಸತೊಡಗಿದರು.

(‘ಪಂಚಾಚಾರ್ಯರದು ಜಾತಿಭೇದ ಸಂಪ್ರದಾಯ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೩)

Share This Article
Leave a comment

Leave a Reply

Your email address will not be published. Required fields are marked *