ರೇವಣಸಿದ್ದರ ನಿಜ ಇತಿಹಾಸ 1-5
1) ರೇವಣಸಿದ್ಧರು: ನಾಥ ಗುರುವೋ ಅಥವಾ ವೀರಶೈವ ಆಚಾರ್ಯರೊ?
2) ಶರಣ ಚಳುವಳಿಯಿಂದ ದೂರವುಳಿದ ರೇವಣಸಿದ್ಧರು
3) ಆಚಾರ್ಯರಾಗಿ ಬದಲಾದ ರೇವಣಸಿದ್ಧರು
5) ರೇವಣಸಿದ್ಧರ ಭಕ್ತರ ಸೆಳೆದ ಚತುರಾಚಾರ್ಯರ ಪರಂಪರೆ
6) ಬಾಳೇಹಳ್ಳಿಯ ನಾಥ ಮಠ ಪಂಚಾಚಾರ್ಯ ಪೀಠವಾಯಿತು
೧೨ನೇ ಶತಮಾನದಲ್ಲಿ ನಾಥರಾಗಿದ್ದ ರೇವಣಸಿದ್ಧರು ೧೫ನೇ ಶತಮಾನದಲ್ಲಿ ರೇವಣಾಚಾರ್ಯರಾದರು. ಅವರ ಬಗ್ಗೆ ಹುಟ್ಟಿದ ಹೊಸ ಕಲ್ಪನೆಗಳಿಗೆ ಯಾವುದೇ ಆಧಾರವಿಲ್ಲ.
ವೀರಶೈವ ಕೃತಿಗಳ ಪ್ರಕಾರ ಆಂಧ್ರಪ್ರದೇಶದ ಕೊಲ್ಲಿಪಾಕೆಯ ಸೋಮೇಶ್ವರ ಲಿಂಗದಲ್ಲಿ ಅವರು ಉದ್ಬವಿಸಿದರು. ಕೃತಯುಗದಲ್ಲಿ ಏಕೋತ್ತರಸ್ಥಲವನ್ನು ಅಗಸ್ತ್ಯ ಮುನಿಗೆ ಭೋದಿಸಿದರು.
ಕೊಲ್ಲಿಪಾಕೆಯಲ್ಲಿ ೩೬ ಕನ್ನಡ ಶಾಸನಗಳು ಸಿಕ್ಕಿವೆ. ಅವುಗಳಲ್ಲಿ ಅಲ್ಲಿನ ಜೈನ, ವೈಷ್ಣವ, ಶೈವ ಧರ್ಮಗಳ ವಿವರಣೆಯಿದೆ. ಯಾವುದರಲ್ಲೂ ಪಂಚಾಚಾರ್ಯರ ಅಥವಾ ರೇವಣಾಚಾರ್ಯರ ಉಲ್ಲೇಖವಿಲ್ಲ.
ಶಾಸನಗಳ ಪ್ರಕಾರ ಸೋಮೇಶ್ವರ ದೇವಸ್ಥಾನ ನಿರ್ಮಾಣವಾಗಿದ್ದೇ ೧೧ನೇ ಶತಮಾನದಲ್ಲಿ. ಆದರೆ ಅಲ್ಲಿನ ಲಿಂಗದಿಂದ ಉದ್ಭವಿಸಿದ ರೇವಣಾಚಾರ್ಯರ ಕಾಲವನ್ನು ವೀರಶೈವ ಕೃತಿಗಳು ಕೃತ ಯುಗಕ್ಕೆ ಎಳೆಯುತ್ತವೆ.
ಸಿದ್ದಾಂತ ಶಿಖಾಮಣಿಯ ಪ್ರಕಾರ ಏಕೋತ್ತರಸ್ಥಲವನ್ನು ರೇವಣಚಾರ್ಯರು ಭೋದಿಸಿದರು. ಆದರೆ ಅದಕ್ಕಿಂತ ಹಿಂದಿನ ಜಕ್ಕಣಾರ್ಯ, ಮಾಯಿದೇವರ ಪ್ರಕಾರ ಏಕೋತ್ತರಸ್ಥಲ ಬಸವಾದಿ ಪ್ರಮಥರ ಕೊಡುಗೆ.
ಪ್ರಾಚೀನ ವಿಗ್ರಹಗಳಲ್ಲಿ ರೇವಣ ಸಿದ್ದರು ಧ್ಯಾನಯೋಗದ ಸಿದ್ದರಂತೆ ಕಾಣುತ್ತಾರೆ. ರೇವಣಾಚಾರ್ಯರ ಲಿಂಗೋದ್ಬವ ಕಲ್ಪನೆ ಮೊದಲು ೧೯ನೇ ಶತಮಾನದ ಪುಸ್ತಕಗಳಲ್ಲಿ ಪ್ರಕಟವಾಗಿ, ನಂತರ ವಿಗ್ರಹಗಳಾದವು.
(‘ಕೊಲ್ಲಿಪಾಕೆಯ ಕನ್ನಡ ಶಾಸನಗಳು: ಧಾರ್ಮಿಕತೆ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪)