ರೇವಣಸಿದ್ಧರ ಭಕ್ತರ ಸೆಳೆದ ಚತುರಾಚಾರ್ಯರ ಪರಂಪರೆ

ರೇವಣಸಿದ್ದರ ನಿಜ ಇತಿಹಾಸ 1-5

1) ರೇವಣಸಿದ್ಧರು: ನಾಥ ಗುರುವೋ ಅಥವಾ ವೀರಶೈವ ಆಚಾರ್ಯರೊ?

2) ಶರಣ ಚಳುವಳಿಯಿಂದ ದೂರವುಳಿದ ರೇವಣಸಿದ್ಧರು

3) ಆಚಾರ್ಯರಾಗಿ ಬದಲಾದ ರೇವಣಸಿದ್ಧರು

4) ರೇವಣಾಚಾರ್ಯರ ಕಲ್ಪಿತ ಇತಿಹಾಸ

5) ರೇವಣಸಿದ್ಧರ ಭಕ್ತರ ಸೆಳೆದ ಚತುರಾಚಾರ್ಯರ ಪರಂಪರೆ

6) ಬಾಳೇಹಳ್ಳಿಯ ನಾಥ ಮಠ ಪಂಚಾಚಾರ್ಯ ಪೀಠವಾಯಿತು

ಶರಣ ಚಳುವಳಿ ಸೇರಿಕೊಂಡರೂ ಆರಾಧ್ಯರು ಜಾತಿ ಜಂಗಮರಾಗಿ ಉಳಿದುಕೊಂಡರು. ವಿಜಯನಗರದ ಕಾಲದಲ್ಲಿ ತಮ್ಮ ಪ್ರಭಾವ ಬೆಳಸಿಕೊಳ್ಳಲು ಚತುರಾಚಾರ್ಯ ಪೀಠಗಳನ್ನು ಸೃಷ್ಟಿಸಿದರು.

ಕಾಳಾಮುಖ, ಪಾಶುಪತಗಳಂತಹ ಬಸವ ಪೂರ್ವ ಶೈವ ಪಂಥಗಳು ಶರಣರಲ್ಲಿ ಲೀನವಾದರೂ ಕೆಲವೆಡೆ ಭಿನ್ನವಾಗಿ ಉಳಿದುಕೊಂಡಿದ್ದವು. ಆಚಾರ್ಯರು ಅವುಗಳನ್ನು ವಶಪಡಿಸಿಕೊಂಡರು.

ಪುರಾಣ ಸೃಷ್ಟಿಸಿ ಕೆಲವು ಪಂಗಡಗಳ ಇತಿಹಾಸ ಬದಲಿಸಿ ಚತುರಾಚಾರ್ಯ ಪೀಠಗಳಿಗೆ ಸೇರಿಸಿಕೊಂಡರು. ಕೆಲವು ಕಡೆ ಹಿಂಸೆಯಿಂದ ಮಠಗಳನ್ನು ವಶಮಾಡಿಸಿಕೊಂಡರು (ಸಾರಂಗಿ ಮಠ).

ಸಿದ್ದರಾಮರ ಭಕ್ತರು ಶರಣರಾದರೂ, ರೇವಣ ಸಿದ್ದರ ನಾಥ ಪಂಥ ಪ್ರತ್ಯೇಕವಾಗಿ ಉಳಿದಿತ್ತು. ಕರ್ನಾಟಕ, ಮಹಾರಾಷ್ಟ್ರದ ಭಾಗಗಳಲ್ಲಿ ಅಪಾರ ಭಕ್ತರಿದ್ದ ಈ ಪಂಥವನ್ನೂ ವಶಪಡಿಸಿಕೊಂಡರು.

ರೇವಣಸಿದ್ದರಿಗೆ ಪುರಾಣ ಕಟ್ಟುವ ಪ್ರಯತ್ನ ವೈದಿಕ ಕವಿ ಹರಿಹರನಿಂದಲೇ ಶುರುವಾಗಿತ್ತು. ಸ್ಥಾವರ ಲಿಂಗದಿಂದ ಉದ್ಭವ, ಮೂರು ಕೋಟಿ ಲಿಂಗದ ಸ್ಥಾಪನೆಯಂತಹ ಕಥೆಗಳನ್ನು ಹೆಣೆದಿದ್ದೂ ಅವನೇ .

ವೀರಶೈವ ಕವಿಗಳು ಆ ಕಥೆಗಳನ್ನೇ ಬಳಸಿಕೊಂಡರು. ಪಂಡಿತಾರಾಧ್ಯರ (ಪಂಡಿತ+ಆರಾಧ್ಯ) ರೀತಿಯಲ್ಲೇ ಅವರ ಹೆಸರನ್ನು ರೇವಣಾರಾಧ್ಯ (ರೇವಣ+ಆರಾಧ್ಯ) ಎಂದು ಬದಲಾಯಿಸಿದರು.

(‘ರೇವಣಸಿದ್ದ ಚರಿತ್ರೆಯ ಎರಡು ಸಂಪ್ರದಾಯಗಳು’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೩)

Share This Article
Leave a comment

Leave a Reply

Your email address will not be published. Required fields are marked *