ಯಲಬುರ್ಗಾ:
ವಿಭೂತಿ, ಇಷ್ಟಲಿಂಗ, ಕಾವಿ ಧರಿಸಿದ ಮಾತ್ರಕ್ಕೆ ಬಸವಣ್ಣನವರ ಭಕ್ತರಾಗುವುದಿಲ್ಲ. ಬದಲಿಗೆ ನಡೆ, ನುಡಿ ಒಂದಾಗಿರಬೇಕು. ಸಮಾಜದ ಜನರ ಸುಃಖ, ದುಃಖ ನನ್ನದು ಎನ್ನುವ ಮನೋಭಾವ ಹೊಂದಬೇಕು ಎಂದು ಶಿರೂರಿನ ಪೂಜ್ಯ ಡಾ. ಬಸವಲಿಂಗ ಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಗುಳೆ ಗ್ರಾಮದ ವಿಶ್ವಗುರು ಬಸವ ಮಂಟಪದಲ್ಲಿ ಲಿಂಗೈಕ್ಯ ಶರಣ ವೀರಭದ್ರಪ್ಪ ಅಣ್ಣನವರ ಪ್ರಥಮ ವರ್ಷದ ನೆನಹು ಕಾರ್ಯಕ್ರಮದಲ್ಲಿ ಅನುಭಾವ ನೀಡಿದರು.
ಬಸವಾದಿ ಶರಣರ ನಡೆ ನುಡಿಗಳನ್ನು ಲಿಂಗೈಕ್ಯ ಶರಣ ವೀರಭದ್ರಪ್ಪ ಕುರಕುಂದಿ ಅಣ್ಣನವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಾಳಿ ಬದುಕಿದರು.

ಸಜ್ಜನ, ಶರಣ, ಸಾತ್ವಿಕರ ಮನನೋಯಿಸದವರು ಬಸವಣ್ಣನವರ ಭಕ್ತರು ಎನಿಸಿಕೊಳ್ಳುತ್ತಾರೆ. ಅಂತಹ ತಾತ್ವಿಕದ ಬದುಕನ್ನು ಕಟ್ಟಿಕೊಂಡವರು ವೀರಭದ್ರಪ್ಪನವರು. ಅವರ ಜೀವಿತಾವಧಿಯಲ್ಲಿ ಮಾಡಿರುವ ಬಸವಸೇವೆ ಸ್ಮರಣೀಯ ಎಂದು ಸ್ವಾಮೀಜಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಸವರಾಜ ಹೂಗಾರ, ಲಿಂಗೈಕ್ಯ ಶರಣ ವೀರಭದ್ರಪ್ಪ ಅಣ್ಣನವರು ಭೌತಿಕವಾಗಿ ನಮ್ಮನಗಲಿರಬಹುದು. ಆದರೆ ಅವರ ಜಂಗಮತ್ವ ಮರೆಯಲು ಸಾಧ್ಯವಿಲ್ಲ. ಮಾತೃಹೃದಯಿ, ನಗುಮುಖದ ಚೇತನ, ಹಿರಿಯಜೀವಿ ಜನಮನಗಳ ಹೃದಯದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಬಸವನಗೌಡ ಪೋಲಿಸಪಾಟೀಲ ಅವರು ವಹಿಸಿಕೊಂಡಿದ್ದರು.
ರಾಷ್ಟ್ರೀಯ ಬಸವದಳ, ಅಕ್ಕ ನಾಗಲಾಂಬಿಕ ಮಹಿಳಾಗಣ ಹಾಗೂ ಯುವ ಘಟಕದಿಂದ ನಡೆದ ಕಾರ್ಯಕ್ರಮದ ಪ್ರಥಮದಲ್ಲಿ ಬಸವ ಗುರುಪೂಜೆ, ಸಾಮೂಹಿಕ ಇಷ್ಟಲಿಂಗಾರ್ಚನೆ ನಡೆಯಿತು. ಷಟಸ್ಥಲ ಧ್ವಜಾರೋಹಣವನ್ನು ದೇವಪ್ಪ ಕೋಳೂರು ನೆರವೇರಿಸಿದರು.
ಕೊಪ್ಪಳ ಬಸವೇಶ್ವರ ಚಾರಿಟೇಬಲ್ ಟ್ರಸ್ಟಿನ ರಾಜೇಶ್ ಸಸಿಮಠ ಜ್ಯೋತಿ ಪ್ರಜ್ವಲನಗೊಳಿಸಿದರು. ಗಂಗಮ್ಮ ವೀರಭದ್ರಪ್ಪ ಕುರುಕುಂದ ಅವರು ಗೌರವ ಉಪಸ್ಥಿತರಿದ್ದರು. ಅಮರೇಶಪ್ಪ ಬಳ್ಳಾರಿ, ಶಂಕ್ರಪ್ಪ ಬೇವೂರು ಮಾತನಾಡಿದರು.
ಅನೇಕರನ್ನು ಸತ್ಕರಿಸಲಾಯಿತು

ಶಿವಬಸಯ್ಯ ಹಿರೇಮಠ, ಪರಪ್ಪ ಗೊಂದಿಹೊಸಳ್ಳಿ, ವಿರುಪಣ್ಣ ಹಿರೇವಡ್ಡರಕಲ್ಲ, ನಾಗನಗೌಡ ಜಾಲಿಹಾಳ, ಸೋಮಲಿಂಗಪ್ಪ ಮಂತ್ರಿ, ಗಿರಿಮಲ್ಲಪ್ಪ ಪರಂಗಿ, ಶಿವಾನಂದಪ್ಪ ಬೇವೂರು. ಪಕೀರಪ್ಪ ಮಂತ್ರಿ, ಲಿಂಗನಗೌಡ ದಳಪತಿ, ಶಿವಪುತ್ರಪ್ಪ ಉಚ್ಚಲಕುಂಟಿ, ಯಮನಪ್ಪ ಕೋಳೂರು, ಹನುಮೇಶ ಹೊಸಳ್ಳಿ, ನಿಜಲಿಂಗಪ್ಪ ಮಂತ್ರಿ, ಶೇಖಪ್ಪ ಮಂತ್ರಿ, ಮಲ್ಲಿಕಾರ್ಜುನ ಮಂತ್ರಿ, ಜಗದೀಶ ಮೇಟಿ, ಬಸಣ್ಣ ಹೊಸಳ್ಳಿ, ಪಂಪಾಪತಿ ಹೊಸಳ್ಳಿ, ದೇವೇಂದ್ರಪ್ಪ ಆವಾರಿ, ಶರಣಪ್ಪ ಮಂತ್ರಿ, ವಿರುಪಣ್ಣ ಮಂತ್ರಿ, ಬಸವರಾಜ ಹೊಸಳ್ಳಿ, ಶಿವಕುಮಾರ ಹೊಸಹಳ್ಳಿ, ಮಲ್ಲಿಕಾರ್ಜುನ ಹೊಸಳ್ಳಿ, ಹನುಮಂತಪ್ಪಜ್ಜ, ಶಾಂತಕುಮಾರ ಹೊಸಳ್ಳಿ, ಶರಣಪ್ಪ ಮೇಟಿ, ಜಗದೀಶ ಮಂತ್ರಿ, ಚನ್ನಬಸವ, ಪ್ರಕಾಶ ಮಂತ್ರಿ, ನಿಂಗಪ್ಪ ಗಾಳಿ, ಶಂಕ್ರಮ್ಮ ಹೊಸಳ್ಳಿ, ಸಾವಿತ್ರಮ್ಮ ವಿಶಾಲಾಕ್ಷಮ್ಮ, ಬಸಮ್ಮ ಹೂಗಾರ, ರೇಣುಕಮ್ಮ ಮಂತ್ರಿ, ಶಿವಕಲ್ಲಮ್ಮ, ಶರಣಮ್ಮ ಪೊಲೀಸಪಾಟೀಲ, ದ್ರಾಕ್ಷಾಯಣಮ್ಮ, ಶರಣಮ್ಮ ಚಿದಾನಂದಪ್ಪ ಹೊಸಳ್ಳಿ, ನಾಗಮ್ಮ ಜಾಲಿಹಾಳ, ಗುರುಲಿಂಗಮ್ಮ, ಭೀಮಮ್ಮ ಮಂತ್ರಿ ಇತರರು ಪಾಲ್ಗೊಂಡಿದ್ದರು.
