ಬಸವಕಲ್ಯಾಣ:
ಕೂಡಲಸಂಗಮದಲ್ಲಿ ನಡೆಯುವ 39ನೇ ಶರಣ ಮೇಳದ ಪ್ರಚಾರಾರ್ಥ ಆಹ್ವಾನ ಮತ್ತು ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಇಲ್ಲಿನ ಬಸವ ಮಹಾಮನೆಯಲ್ಲಿ ಗುರುವಾರ ನಡೆಯಿತು.
ಸಾನಿದ್ಯ ವಹಿಸಿದ್ದ ಕೂಡಲಸಂಗಮ ಬಸವಧರ್ಮ ಪೀಠದ ಪೂಜ್ಯ ಡಾ. ಗಂಗಾದೇವಿ ಮಾತಾಜಿ ಮಾತನಾಡಿ, ಹೇಗೆ ಬೌದ್ಧರಿಗೆ ಬೌದ್ಧಗಯಾ, ಮುಸ್ಲಿಂರಿಗೆ ಮೆಕ್ಕಾ, ಕ್ರೈಸ್ತರಿಗೆ ಜೆರುಸಲೆಮ್, ಸಿಖ್ ರಿಗೆ ಅಮೃತಸರ ಪವಿತ್ರ ಕ್ಷೇತ್ರವೋ ಹಾಗೆ ಲಿಂಗಾಯತರಿಗೆ ಕೂಡಲಸಂಗಮವಾಗಿದೆ. ಆದ್ದರಿಂದ ಈ ಪವಿತ್ರ ಸ್ಥಳಕ್ಕೆ ಲಿಂಗಾಯತರು ವರ್ಷಕ್ಕೆ ಒಮ್ಮೆಯಾದರೂ ಬರಬೇಕು. ಜನವರಿ 12ರಿಂದ 14ರವರೆಗೆ ನಡೆಯುವ ಶರಣಮೇಳದಲ್ಲಿ ಪಾಲ್ಗೊಳ್ಳಬೇಕು ಎಂದರು.

ಸಿದ್ರಾಮೇಶ್ವರ ಸ್ವಾಮಿಜಿ, ಅನಿಮಿಷಾನಂದ ಸ್ವಾಮಿಜಿ, ಬಸವರತ್ನ ಮಾತಾಜಿ, ಲಾವಣ್ಯ ಮಾತಾಜಿ ಈ ಎಲ್ಲ ಪೂಜ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹುಲಸೂರ ತಾಲೂಕಿನ ರಾಷ್ಟ್ರೀಯ ಬಸವದಳ ಅಧ್ಯಕ್ಷರಾಗಿ ಶರಣ ದತ್ತಾತ್ರೇಯ ರಾಗಾ ಅವರನ್ನು ನೇಮಿಸಲಾಯಿತು.
ರಾಷ್ಟ್ರೀಯ ಬಸವದಳದ ತಾಲೂಕಾ ಅದ್ಯಕ್ಷ ರವೀಂದ್ರ ಕೋಳಕುರ ಸ್ವಾಗತ, ನಿರೂಪಣೆ ರೇವಣಸಿದ್ದ ಸುಗ್ರೆ ಮಾಡಿದರು.

ದತ್ತಾತ್ರೇಯ ರಾಗಾ, ಆಕಾಶ ಖಂಡಾಳೆ, ಶಿವರಾಜ ನೀಲಕಂಠೆ, ಅನೀಲ ತಾಂಬೊಳೆ, ಮಹಾದೇವ ಮಹಾಜನ, ಜಯಪ್ರಕಾಶ ಸದಾನಂದೆ, ರವಿ ಬೇಲೂರ, ಸಂತೋಷ ಮಡಿವಾಳ, ಸಂಗಮೇಶ ತೋಗರಖೇಡೆ, ಜಯಶ್ರೀ ಪಾಟೀಲ, ಸುಲೋಚನ ಗುದಗೆ, ನಿರ್ಮಲಾ ಶಿವಣಕರ, ರಾಜಶ್ರೀ ಖೂಬಾ, ಸೋನಾಲಿ ನೀಲಕಂಠ, ಜಯಶ್ರೀ ಬಿರಾದರ, ಮಮತಾ ರಟಕಲೆ, ಮಮತಾ ಭೂಸೆ, ಕವಿತಾ ಸಜ್ಜನಶೆಟ್ಟಿ ಮತ್ತಿತರ ಶರಣು ಶರಣೆಯರು ಉಪಸ್ಥಿತರಿದ್ದರು.

