ಕಲಬುರ್ಗಿ
ಶೋಷಣಾ ಕೇಂದ್ರವಾಗಿದ್ದ ಗುಡಿ ಸಂಸ್ಕೃತಿಯನ್ನು ತೆಗೆದುಹಾಕಿ ಸಮ ಸಮಾಜದ ಆಶಯಕ್ಕಾಗಿ ಬಸವಣ್ಣನವರು ತಂದದ್ದೇ ಇಷ್ಟಲಿಂಗ, ಎಂದು ವಿಜಯಪುರದ ಶರಣತತ್ವ ಚಿಂತಕರಾದ ಡಾ.ಜೆ.ಎಸ್. ಪಾಟೀಲ ಮಂಗಳವಾರ ಹೇಳಿದರು.
ಇಷ್ಟಲಿಂಗ ಪರಿಕಲ್ಪನೆ ಬಸವಣ್ಣನವರು ಸಮ ಸಮಾಜದ ಆಶಯಕ್ಕಾಗಿ ಬಳಸಿದ ತಂತ್ರ. ಚಾತುರ್ವರ್ಣ ವ್ಯವಸ್ಥೆಯಲ್ಲಿ ಧರ್ಮವನ್ನು ಆಚರಣೆ ಮಾಡುವ ಹಕ್ಕು ಎಲ್ಲರಿಗೂ ಇರಲಿಲ್ಲ, ಎಂದು ಅವರು ಅಭಿಪ್ರಾಯ ಪಟ್ಟರು.
ಗುಲ್ಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಕನ್ನಡ ಅಧ್ಯಯನ ಸಂಸ್ಥೆ, ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆ ಸರಣಿ ಉಪನ್ಯಾಸ ಮಾಲೆಯ ‘ಬಸವವಾದ ಮತ್ತು ಸಂವಿಧಾನದ ಆಶಯಗಳು’ ಕುರಿತು ಅವರು ಉಪನ್ಯಾಸ ನೀಡಿದರು.
ಚಿಂತಕ ಪ್ರೊ.ಆರ್.ಕೆ.ಹುಡಗಿ ಮಾತನಾಡಿ, ಯುವಕರು ಎಲ್ಲಿಯವರೆಗೆ ವೇದಿಕೆ ಮೇಲಿನ ಅತಿಥಿಗಳು ಮಾತಾಡಿದ್ದನ್ನು ಪ್ರಶ್ನಿಸುವುದಿಲ್ಲವೋ ಅಲ್ಲಿಯವರೆಗೂ ಅವರು ಮೂಢನಂಬಿಕೆಯಲ್ಲಿ ತೇಲಾಡ್ತಾ, ತಮ್ಮ ಭವಿಷ್ಯವನ್ನು ತಾವೇ ಹಾಳು ಮಾಡಿಕೊಳ್ಳುತ್ತಾರೆಂದು ವಿಷಾದ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಪ್ರಾಧ್ಯಾಪಕ ಡಾ. ಎಚ್.ಟಿ.ಪೋತೆ ಮಾತಾಡಿ,
ಇಂದಿನ ಯುವಕರು ಕೈಯಲ್ಲಿ ದಾರ ಕಟ್ಟಿಕೊಂಡು, ಹಣೆಯಲ್ಲಿ ನಾಮಧಾರಿಯಾಗಿ ಕೇವಲ ಒಂದು ಹುದ್ದೆ ಸಿಕ್ಕರೆ ಸಾಕು ಅಂತ ತಿಳಿದು ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುವುದಲ್ಲದೆ, ದೇಶದ ಭವಿಷ್ಯವನ್ನೂ ಹಾಲು ಮಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಜಾಗತಿಕ ಲಿಂಗಾಯತ ಮಹಾಸಭೆ ಕಲಬುರಗಿ ಘಟಕದ ಅಧ್ಯಕ್ಷರಾದ ಪ್ರಭುಲಿಂಗ ಮಹಾಗಾಂವಕರ ಅವರು ಮಾತಾಡಿ,
ನಾವು ಎಲ್ಲಿಯವರೆಗೆ ಜಾತಿಯ ಸಂಕೋಲೆಯಿಂದ ಹೊರಗೆ ಬರದೆ ಇರುತ್ತೆವೋ ಅಲ್ಲಿಯವರೆಗೂ ನಮಗೆ ಬಸವಣ್ಣನವರು ಅರ್ಥ ಆಗುವದಿಲ್ಲ ಎಂದರು.
ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಶಿಕ್ಷಕರು ಮತ್ತು ಜಾಗತಿಕ ಲಿಂಗಾಯತ ಮಹಾಸಭೆಯ ಧನರಾಜ ತಾಂಬೋಳಿ, ಮೈತ್ರಾದೇವಿ ಶಿಂಘೆ, ಮೋಹನ ಕಟ್ಟಿಮನಿ ಮತ್ತೀತರರು ಭಾಗವಹಿಸಿದ್ದರು.