ಬೆಂಗಳೂರು
ಬಸವ ಮೀಡಿಯಾ ಟ್ರಸ್ಟ್ ಛೇರ್ಮನ್ ಡಾ. ಟಿ. ಆರ್.ಚಂದ್ರಶೇಖರ್ ಅವರನ್ನು ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗಕ್ಕೆ ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಚಂದ್ರಶೇಖರ್ ಅವರ ದಕ್ಷತೆ,ಮತ್ತು ಅರ್ಥ ಶಾಸ್ತ್ರದ ಪ್ರಾವೀಣ್ಯತೆ ಗಮನಿಸಿ ಈ ಅವಕಾಶ ನೀಡಲಾಗಿದೆ, ಡಾ. ಟಿ. ಆರ್.ಚಂದ್ರಶೇಖರ್ ರವರಿಗೆ ಅಭಿನಂದನೆ ಎಂದು ಬೆಂಗಳೂರು ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಪ್ರೊ.ವೀರಭದ್ರಯ್ಯ ಹೇಳಿದ್ದಾರೆ.
ಡಾ. ಚಂದ್ರಶೇಖರ್ ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯಕಾರಿ ಸಮಿತಿಯ ಹಿರಿಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಅಭಿನಂದನೆಗಳು 🌹🙏